ದೆಹಲಿ: ಉಗ್ರರಿಗೆ ಅಡಗುತಾಣ.. ಭಯೋತ್ಪಾದಕರಿಗೆ ನೆಲೆಬೀಡು.. ರಕ್ತಹರಿಸೋ ಕ್ರಿಮಿಗಳಿಗೆ ಆಶ್ರಯ ನೀಡ್ತಿರೋ ಪಾಪಿ ರಾಷ್ಟ್ರ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗಿದೆ. ಪಾಪದ ಕೊಡ ತುಂಬಿದೆ ಅನ್ನೋ ಹಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರಸಿಡಿಲು ಅಪ್ಪಳಿಸಿದೆ. ಉಗ್ರ ಕ್ರಿಮಿಗಳನ್ನ ಪಾಲನೆ-ಪೋಷಣೆ ಮಾಡ್ತಿರೋ ಪಾಕ್ಗೆ ಪಾಪದ ಕೆಲಸಗಳೇ ಇದೀಗ ಪ್ರಾಯಶ್ಚಿತಕ್ಕೆ ಕಾರಣವಾಗಿದೆ.
ಎಫ್ಎಟಿಫ್ನಿಂದ ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್!
ಯೆಸ್.. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ನರಿ ಬುದ್ಧಿಯನ್ನ ಬಟಾಬಯಲುಗೊಳಿಸೋ ಭಾರತದ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಹಣ ಇಲ್ದೇ ಹೆಣಗಾಡ್ತಿರೋ ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನಕ್ಕೆ ಅತ್ತ ದರಿ ಇತ್ತ ಪುಲಿ ಅನ್ನೋ ಹಾಗಾಗಿದೆ. ವಿಶ್ವಕ್ಕೆ ಮಾರಕವಾಗಿರೋ ಟೆರರಿಸ್ಟ್ಗಳನ್ನ ಹೆಗಲ ಮೇಲೆ ಹೊತ್ಕೊಂಡು ತಿರುಗಾಡ್ತಿರೋ ಪಾಪಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಭಂಗವಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರರಿಗೆ ಹಣದ ಹರಿವು ನಿಲ್ಲಿಸೋಕೆ ಇರೋ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಪಾಕ್ಗೆ ದೊಡ್ಡ ಶಾಕ್ ನೀಡಿದೆ. ಅದೇನಂದ್ರೆ, ಪಾಕಿಸ್ತಾನವನ್ನ ಕಂದು ಬಣ್ಣದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂದುವರಿಸಿದೆ. ಇಮ್ರಾನ್ ಖಾನ್ ಸರ್ಕಾರ ಮುಂದೇನ್ ಮಾಡ್ಬೇಕು ಅಂತ ತಡಬಡಾಯಿಸ್ತಿದೆ.
ಕಪ್ಪು ಪಟ್ಟಿಗೆ ಸೇರಿದರೆ ಹಣಕಾಸು ನೆರವಿಗೆ ಬೀಳಲಿದೆ ಬ್ರೇಕ್!
ಇನ್ನು, ಪ್ಯಾರಿಸ್‌ನಲ್ಲಿ ನಡೆದ ಎಫ್‌ಎಟಿಎಫ್‌ನ ಮಹತ್ವದ ಸರ್ವ ಸದಸ್ಯರ ಸಭೆಯಲ್ಲಿ ಪಾಕ್ಗೆ ಬರೆ ಎಳೆಯಲಾಗಿದೆ. ತನ್ನ ನೆಲದಲ್ಲಿ ಆಟವಾಡ್ತಿರೋ LET, ಜಮಾತ್ ಉದ್ ದಾವಾ ಸೇರಿದಂತೆ ಉಗ್ರ ಸಂಘಟನೆಗಳ ನಿಗ್ರಹಕ್ಕೆ ಜೂನ್ ಒಳಗೆ ಕಠಿಣ ಕ್ರಮ ಕೈಗೊಳ್ಳಲು ಎಫ್ಎಟಿಫ್ ಸೂಚಿಸಿದೆ.
ಪಾಕಿಸ್ತಾನಕ್ಕೆ 27 ಅಂಶಗಳ ಕಾರ್ಯಸೂಚಿ ನೀಡಲಾಗಿದ್ದು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಅಲ್ದೇ ಉಗ್ರರಿಗೆ ಅಕ್ರಮ ಹಣ ವರ್ಗಾವಣೆಗೆ ಬ್ರೇಕ್ ಹಾಕುವಂತೆ ವಾರ್ನ್ ಮಾಡಲಾಗಿದೆ. ಇಲ್ಲದಿದ್ರೆ, ಮುಂದಿನ ದಿನಗಳಲ್ಲಿ ಪಾಪಿ ರಾಷ್ಟ್ರನ್ನ ಕಪ್ಪು ಪಟ್ಟಿಗೆ ಸೇರಿಸೋ ಎಚ್ಚರಿಕೆ ನೀಡಲಾಗಿದೆ.
ಪಾಪಿ ನೆಲದಲ್ಲಿ ಉಗ್ರಪೋಷಕ ಆಟ ಮುಂದುವರಿದ್ರೆ ಬ್ಲ್ಯಾಕ್ ಲಿಸ್ಟ್ಗೆ ಸೇರೋದು ಫಿಕ್ಸ್ ಆಗಿದೆ. ಒಂದು ವೇಳೆ ಪಾಕಿಸ್ತಾನವನ್ನ ಕಂದುಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸಿದ್ರೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಣಕಾಸು ನೆರವು ಸಿಗಲ್ಲ. ಇದ್ರಿಂದ ಇಮ್ರಾನ್ ಖಾನ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಒಟ್ನಲ್ಲಿ ಪಾಕಿಸ್ತಾನಕ್ಕೆ ತಾನೇ ಸಾಕಿದ ಗಿಣಿಗಳಾದ ಟೆರರಿಸ್ಟ್ಗಳ ವಿರುದ್ಧ ಕ್ರಮ ಕೈಗೊಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಕ್ ವಿರುದ್ಧ ವಿರುದ್ಧ ಉಗ್ರ ನಿಗ್ರಹದ ಸಮರ ಸಾರಿರೋ ಭಾರತಕ್ಕೆ ದೊಡ್ಡ ಜಯ ಸಿಕ್ಕಿದ್ದಂತೂ ಸುಳ್ಳಲ್ಲ.
Published On - 7:48 am, Sat, 22 February 20