ಎಂಟ್ರಿಗೂ ಮುನ್ನವೇ ಪಾಕ್​ಗೆ ಟ್ರಂಪ್​ ವಾರ್ನಿಂಗ್, ದೊಡ್ಡಣ್ಣನ ಆಗಮನಕ್ಕೆ ಸಜ್ಜಾದ ಅಹಮದಾಬಾದ್

ಎಂಟ್ರಿಗೂ ಮುನ್ನವೇ ಪಾಕ್​ಗೆ ಟ್ರಂಪ್​ ವಾರ್ನಿಂಗ್, ದೊಡ್ಡಣ್ಣನ ಆಗಮನಕ್ಕೆ ಸಜ್ಜಾದ ಅಹಮದಾಬಾದ್

ಇಡೀ ವಿಶ್ವದ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ. ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್ ಶುರುವಾದ ಬೆನ್ನಲ್ಲೇ ಹೊಸ ಮನ್ವಂತರದ ಸೂಚನೆ ಸಿಕ್ಕಿದೆ. ಒಂದೇ ಒಂದು ದಿನದಲ್ಲಿ ಈ ಕೌತುಕಗಳಿಗೆಲ್ಲಾ ತೆರೆ ಬೀಳಲಿದ್ದು, ಈ ಸಂದರ್ಭಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶ್ವದ ದೊಡ್ಡಣ್ಣ, ಬಲಾಢ್ಯ ಆರ್ಥಿಕತೆಯ ರಾಷ್ಟ್ರ ಅಮೆರಿಕ. ಇನ್ನು ಅಮೆರಿಕ ಅಧ್ಯಕ್ಷರನ್ನ ಇಡೀ ಪ್ರಪಂಚದಲ್ಲಿ ಅತ್ಯಂತ ಪವರ್ ಫುಲ್ ವ್ಯಕ್ತಿ ಅಂತಲೇ ಕರೆಯುತ್ತಾರೆ. ಇಷ್ಟು ದೊಡ್ಡ ಅಧಿಕಾರ ವ್ಯಾಪ್ತಿ ಹೊಂದಿರುವ ವ್ಯಕ್ತಿ ಭಾರತಕ್ಕೆ ಭೇಟಿ […]

sadhu srinath

|

Feb 23, 2020 | 6:58 AM

ಇಡೀ ವಿಶ್ವದ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ. ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್ ಶುರುವಾದ ಬೆನ್ನಲ್ಲೇ ಹೊಸ ಮನ್ವಂತರದ ಸೂಚನೆ ಸಿಕ್ಕಿದೆ. ಒಂದೇ ಒಂದು ದಿನದಲ್ಲಿ ಈ ಕೌತುಕಗಳಿಗೆಲ್ಲಾ ತೆರೆ ಬೀಳಲಿದ್ದು, ಈ ಸಂದರ್ಭಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಶ್ವದ ದೊಡ್ಡಣ್ಣ, ಬಲಾಢ್ಯ ಆರ್ಥಿಕತೆಯ ರಾಷ್ಟ್ರ ಅಮೆರಿಕ. ಇನ್ನು ಅಮೆರಿಕ ಅಧ್ಯಕ್ಷರನ್ನ ಇಡೀ ಪ್ರಪಂಚದಲ್ಲಿ ಅತ್ಯಂತ ಪವರ್ ಫುಲ್ ವ್ಯಕ್ತಿ ಅಂತಲೇ ಕರೆಯುತ್ತಾರೆ. ಇಷ್ಟು ದೊಡ್ಡ ಅಧಿಕಾರ ವ್ಯಾಪ್ತಿ ಹೊಂದಿರುವ ವ್ಯಕ್ತಿ ಭಾರತಕ್ಕೆ ಭೇಟಿ ನೀಡ್ತಿದ್ದಾರೆ ಅಂದ್ರೆ ವಿಶ್ವದ ಬಲಾಢ್ಯ ರಾಷ್ಟ್ರಗಳೆಲ್ಲಾ ಭಾರತದತ್ತ ಕಣ್ಣು ನೆಟ್ಟಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡ್ತಿರೋದು ಇಡೀ ವಿಶ್ವದ ಗಮನ ಸೆಳೆದಿದೆ. ಮತ್ತೊಂದು ಕಡೆ ಟ್ರಂಪ್ ಆಗಮನಕ್ಕೂ ಮೊದಲೇ ವಾರ್ನಿಂಗ್ ಕೊಟ್ಟಿದ್ದಾರೆ.

ಭಯೋತ್ಪಾದನೆ ಮಟ್ಟಹಾಕಿದರೆ ಮಾತ್ರ ಮಾತುಕತೆ ಸಾಧ್ಯ: ಡೋನಾಲ್ಡ್ ಟ್ರಂಪ್‌ ನಾಳೆಯೇ ಭಾರತಕ್ಕೆ ಆಗಮಿಸಲಿದ್ದಾರೆ. ಅಹಮದಾಬಾದ್‌ ಹಾಗೂ ಆಗ್ರಾ ನಗರಗಳು ಟ್ರಂಪ್‌ ಸ್ವಾಗತಕ್ಕೆ ಅಂತಿಮ ಹಂತದ ಸಿದ್ಧತೆ ನಡೆಸಿವೆ. ಆದ್ರೆ, ಭಾರತಕ್ಕೂ ಬರೋ 1 ದಿನ ಮೊದಲೇ ಭಾರತದ ವೈರಿ ರಾಷ್ಟ್ರಕ್ಕೆ ಅಮೆರಿಕ ಬಿಸಿ ಮುಟ್ಟಿಸಿದೆ. ಭಯೋತ್ಪಾದಕರನ್ನು ಮಟ್ಟ ಹಾಕಿದರೇ ಮಾತ್ರ ಭಾರತದೊಂದಿಗೆ ಮಾತುಕತೆ ಯಶಸ್ವಿಯಾಗಲಿದೆ.ಭಯೋತ್ಪಾದನೆ ಮಟ್ಟ ಹಾಕುವಲ್ಲಿ ಪಾಕಿಸ್ತಾನದ್ದೇ ಮುಖ್ಯ ಪಾತ್ರ, ಪಾಕಿಸ್ತಾನ ಭಯೋತ್ಪಾದನೆ ಮಟ್ಟಹಾಕೋದನ್ನೇ ನಾವು ಎದುರು ನೋಡ್ತಿದ್ದೇವೆ ಅಂತಾ ಅಮೆರಿಕ ಪಾಪಿ ಪಾಕಿಸ್ತಾನಕ್ಕೆ ಖಡಕ್ ರೀಪ್ಲೇ ಕೊಟ್ಟಿದೆ.

ಟ್ರಂಪ್‌ ಜೊತೆ ಭಾರತಕ್ಕೆ ಬರಲಿದೆ 12 ಸದಸ್ಯರ ನಿಯೋಗ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಗೆ ಭಾರತ ಸಿದ್ಧವಾಗಿದೆ. ಇಂಡಿಯಾಗೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಟ್ರಂಪ್‌ರನ್ನು ಸ್ವಾಗತಿಸಲು ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಈ ನಡುವೆಯೇ ಟ್ರಂಪ್‌ ಜತೆ ಭಾರತಕ್ಕೆ 12 ಸದಸ್ಯರ ನಿಯೋಗ ಕೂಡ ಭೇಟಿ ನೀಡಲಿದ್ದು 2 ದಿನದ ಪ್ರವಾಸದಲ್ಲಿ ಹಲವು ಕಾರ್ಯಕ್ರಮಗಳು ನಿಗದಿಯಾಗಿವೆ. ಟ್ರಂಪ್‌ ಜೊತೆ ಯುಎಸ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್‌ ಒಬ್ರೇಯನ್‌, ಹಣಕಾಸು ಸಚಿವ ವಿಲ್ಬರ್‌ ರಾಸ್‌, ಟ್ರಂಪ್‌ ಪುತ್ರಿ ಇವಾಂಕಾ ಹಾಗೂ ಅಳಿಯ ಜರೇದ್‌ ಕುಷ್ನರ್‌ ಆಗಮಿಸಲಿದ್ದಾರೆ.

ಪ್ರಧಾನಿ ಮೋದಿ, ಟ್ರಂಪ್ ರೋಡ್ ಶೋ: ಟ್ರಂಪ್‌ ಫೆಬ್ರವರಿ 24 ಮತ್ತು 25ರಂದು 2 ದಿನ ಭಾರತದ ಪ್ರವಾಸ ಕೈಗೊಳ್ಳಲಿದ್ದು, ರಾಜತಾಂತ್ರಿಕ ಸಭೆಗಳಿಗೆ ಪ್ರವಾಸ ವೇದಿಕೆಯಾಗಲಿದೆ. ಅಹಮದಾಬಾದ್ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಮೊಟೆರಾವನ್ನ ಟ್ರಂಪ್‌ ಉದ್ಘಾಟಿಸಲಿದ್ದಾರೆ. ಅಮೆರಿಕದ ಹ್ಯೂಸ್ಟನ್‌ನಲ್ಲಿ ಆಯೋಜಿಸಲಾಗಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದ ರೀತಿಯಲ್ಲೇ ಭಾರತದಲ್ಲಿ ನಮಸ್ತೆ ಟ್ರಂಪ್‌ ಕಾರ್ಯಕ್ರಮ ಆಯೋಜನೆಯಾಗಿದೆ. ಮೊಟೆರಾದಲ್ಲಿ ನಡೆವ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸೋ ನಿರೀಕ್ಷೆಯಿದೆ.

ಸಮಾವೇಶಕ್ಕೆ ಮುನ್ನ, ಡೊನಾಲ್ಡ್‌ ಟ್ರಂಪ್‌ ಪಿಎಂ ಮೋದಿ ಜೊತೆ ಅಹಮದಾಬಾದ್‌ನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಮೊದಲ ದಿನ ಅಹಮದಾಬಾದ್‌ ಪ್ರವಾಸವಾದರೆ 2ನೇ ದಿನ ದೆಹಲಿಯಲ್ಲಿ ನಿಗದಿಯಾಗಿರುವ ಹಲವು ಕಾರ್ಯಕ್ರಮಗಳಲ್ಲಿ ಅಮೆರಿಕ ಅಧ್ಯಕ್ಷರು ಭಾಗಿಯಾಗಲಿದ್ದಾರೆ. ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜೊತೆ ಸಭೆ ನಡೆಸಲಿರುವ ಟ್ರಂಪ್‌, ನಂತರ ರಾಷ್ಟ್ರಪತಿ ಭವನದಲ್ಲಿ ರಾಮನಾಥ್‌ ಕೋವಿಂದ್‌ ಆಯೋಜಿಸಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.

ಒಟ್ನಲ್ಲಿ ಅಮೆರಿಕ ಅಧ್ಯಕ್ಷರ ಭೇಟಿಗೆ ಭಾರತ ಕುತೂಹಲದಿಂದ ಕಾಯ್ತಿದೆ. ನೆರೆಹೊರೆಯ ವೈರಿ ದೇಶಗಳಿಗೆ ಇದು ಉರಿ ತರಿಸಿದ್ದರೆ, ಭಾರತದ ಮಿತ್ರ ರಾಷ್ಟ್ರಗಳಿಗೆ ಹೆಮ್ಮೆಯ ವಿಚಾರವಾಗಿದೆ. ಹೀಗಾಗಿ, ಟ್ರಂಪ್ ಭೇಟಿಯ ವೇಳೆ ಯಾವುದೇ ಕುಂದುಕೊರತೆ ಎದುರಾಗದಂತೆ ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada