ಪಂಜಾಬ್​ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆಗೈದ ಬಿಎಸ್​ಎಫ್​ ಯೋಧರು

|

Updated on: Aug 11, 2023 | 12:17 PM

ಗಡಿ ಭದ್ರತಾ ಪಡೆ(BSF)ಯ ಯೋಧರು ಪಂಜಾಬ್​ನ ತರ್ನ್​ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಈ ಕುರಿತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಜಾಬ್​ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆಗೈದ ಬಿಎಸ್​ಎಫ್​ ಯೋಧರು
ಗಡಿ ಭದ್ರತಾ ಪಡೆ
Follow us on

ಗಡಿ ಭದ್ರತಾ ಪಡೆ(BSF)ಯ ಯೋಧರು ಪಂಜಾಬ್​ನ ತರ್ನ್​ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಈ ಕುರಿತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ ತೆಕಲನ್ ಗ್ರಾಮದ ಬಳಿ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲನವಲನವನ್ನು ಗಡಿ ಭದ್ರತಾ ಪಡೆಗಳು ಕಂಡಿದ್ದವು.

ಆತ ಗಡಿಯೊಳಗೆ ಬರುತ್ತಿರುವಾಗ ಸೈನಿಕರು ಆತನನ್ನು ಪ್ರಶ್ನಿಸಿದ್ದರು, ಆದರೂ ಮಾತು ಕೇಳದೆ ಮುಂದೆ ಬರುತ್ತಲೇ ಇದ್ದ, ಹೀಗಾಗಿ ಅನಿವಾರ್ಯವಾಗಿ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸುವ ಅನಿವಾರ್ಯತೆ ಉಂಟಾಗಿತ್ತು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾರ್ಚ್​ನಲ್ಲಿ ಕೂಡ ಗಡಿ ಭದ್ರತಾ ಪಡೆ(BSF)ಯು ಪಂಜಾಬ್​ನ ಅಮೃತಸರದ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಬಂಧಿಸಿತ್ತು. ಅಮೃತಸರ ಸೆಕ್ಟರ್​ನ ರಜತಾಲ್​ನಲ್ಲಿರುವ ಬಾರ್ಡರ್ ಔಟ್ ಪೋಸ್ಟ್​ನಲ್ಲಿ ಮಾರ್ಚ್​ 8ರ ಮಧ್ಯರಾತ್ರಿ ಪಾಕಿಸ್ತಾನದ ಕಡೆಯಿಂದ ಒಳನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಬಿಎಸ್​ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ಓದಿ: Pakistani Intruder: ಪಂಜಾಬ್​ನ ಅಮೃತಸರದಲ್ಲಿ ಪಾಕಿಸ್ತಾನಿ ಒಳನುಸುಳುಕೋರನ ಬಂಧನ

ಕರ್ತವ್ಯ ನಿರತ ಬಿಎಸ್​ಎಫ್ ಪಡೆಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಬಂಧಿಸಲಾಗಿತ್ತು. ಪ್ರಾಥಮಿಕ ತನಿಖೆಯ ವೇಳೆಗೆ ಅವರು ಬಾಂಗ್ಲಾದೇಶದ ಪ್ರಜೆ ಎಂದು ತಿಳಿಸಿದ್ದಾರೆ, ಅವರ ವಿಚಾರಣೆಯನ್ನು ಮುಂದುವರೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ