AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂಸಾತ್ಮಕ ನಡವಳಿಕೆ ತೋರುವ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನಿರಾಕರಿಸಬಹುದು- ಎನ್​ಎಂಸಿ

NMC ನೋಂದಾಯಿತ ವೈದ್ಯಕೀಯ ಪ್ರಾಕ್ಟೀಷನರ್ ನಿಯಮಗಳು 2023 ರಲ್ಲಿ ವಿವರಿಸಿರುವ ಈ ಕ್ರಮವು ರೋಗಿಗಳು ವೈದ್ಯರ ಮೇಲೆ ನಡೆಸುವ ದಾಳಿಯನ್ನು ತಡೆಗಟ್ಟವ ಗುರಿಯನ್ನು ಹೊಂದಿದೆ.

ಹಿಂಸಾತ್ಮಕ ನಡವಳಿಕೆ ತೋರುವ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನಿರಾಕರಿಸಬಹುದು- ಎನ್​ಎಂಸಿ
ಸಾಂದರ್ಭಿಕ ಚಿತ್ರ
Follow us
ನಯನಾ ಎಸ್​ಪಿ
|

Updated on: Aug 11, 2023 | 1:01 PM

ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಇತ್ತೀಚಿನ ಗೆಜೆಟ್ ಅಧಿಸೂಚನೆಯ ಪ್ರಕಾರ, ಅಶಿಸ್ತಿನ ಅಥವಾ ಹಿಂಸಾತ್ಮಕ ನಡವಳಿಕೆಯನ್ನು ಪ್ರದರ್ಶಿಸುವ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವ ಅಧಿಕಾರವನ್ನು ವೈದ್ಯರಿಗೆ ನೀಡಿದೆ. NMC ನೋಂದಾಯಿತ ವೈದ್ಯಕೀಯ ಪ್ರಾಕ್ಟೀಷನರ್ ನಿಯಮಗಳು 2023 ರಲ್ಲಿ (NMC Registered Medical Practitioner Regulations 2023) ವಿವರಿಸಿರುವ ಈ ಕ್ರಮವು ರೋಗಿಗಳು ವೈದ್ಯರ ಮೇಲೆ ನಡೆಸುವ ದಾಳಿಯನ್ನು ತಡೆಗಟ್ಟವ ಗುರಿಯನ್ನು ಹೊಂದಿದೆ.

ಈ ನಿಯಮಗಳ ಅಡಿಯಲ್ಲಿ, ಚಿಕಿತ್ಸೆಯನ್ನು ನಿರಾಕರಿಸುವ ಅವರ ನಿರ್ಧಾರದ ಜೊತೆಗೆ ರೋಗಿಗಳ ಹಿಂಸೆ ಅಥವಾ ಅಶಿಸ್ತಿನ ನಡವಳಿಕೆಯ ಯಾವುದೇ ನಿದರ್ಶನಗಳನ್ನು ದಾಖಲಿಸಲು ವೈದ್ಯರಿಗೆ ಸೂಚಿಸಲಾಗಿದೆ. ನಂತರ ಪರ್ಯಾಯ ಆರೋಗ್ಯ ಸೌಲಭ್ಯಗಳಿಗೆ ರೋಗಿಯನ್ನು ಶಿಫಾರಸು ಮಾಡಲಾಗುತ್ತದೆ. ಈ ಬೆಳವಣಿಗೆಯು 2002 ರಿಂದ ಪಾಲಿಸುತ್ತಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ವೈದ್ಯಕೀಯ ನೀತಿ ಸಂಹಿತೆಯನ್ನು ಬದಲಿಸುತ್ತದೆ.

ಹೆಚ್ಚುವರಿಯಾಗಿ ಈ ನಿಯಮವು, ಶುಲ್ಕವನ್ನು ಪಾವತಿಸದಿದ್ದರೆ ಚಿಕಿತ್ಸೆಯನ್ನು ತಡೆಹಿಡಿಯಲು ವೈದ್ಯರಿಗೆ ಅಧಿಕಾರ ನೀಡುತ್ತವೆ. ಆದಾಗ್ಯೂ, ಈ ನಿಯಮವು ಸರ್ಕಾರಿ ವೈದ್ಯರು ಅಥವಾ ತುರ್ತು ಪರಿಸ್ಥಿತಿಗಳಿಗೆ ಅನ್ವಯಿಸುವುದಿಲ್ಲ. ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ನಂತರ ಹೊಸ ನಿಯಮಗಳು ಆಗಸ್ಟ್ 2, 2023 ರಿಂದ ಜಾರಿಯಾಗಿದೆ.

ಇದನ್ನೂ ಓದಿ: ಕೋರಿಕೆಯ ಮೇರೆಗೆ ನೆರೆಯ ಹೈಕೋರ್ಟ್​​ಗೆ ಕರ್ನಾಟಕ ನ್ಯಾಯಮೂರ್ತಿ ವರ್ಗಾಯಿಸಲು ಶಿಫಾರಸು

ಈ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ, ವೈದ್ಯರ ಹಕ್ಕುಗಳನ್ನು ರಕ್ಷಿಸಲು ಮತ್ತು ರೋಗಿಯ-ವೈದ್ಯರ ನಡುವಿನ ಸಂಬಂಧಗಳನ್ನು ಹೆಚ್ಚಿಸಲು NMC ಗುರಿಯನ್ನು ಹೊಂದಿದೆ. ವೈದ್ಯಕೀಯ ವೃತ್ತಿಪರರು ಕೆಲವೊಮ್ಮೆ ಎದುರಿಸುವ ಸವಾಲುಗಳನ್ನು ಈ ಕ್ರಮವು ಅಂಗೀಕರಿಸುತ್ತದೆ ಮತ್ತು ಗುಣಮಟ್ಟದ ಆರೈಕೆಯನ್ನು ನೀಡುವಾಗ ಅವರು ತಮ್ಮ ಸುರಕ್ಷತೆ ಮತ್ತು ನೈತಿಕ ಅಭ್ಯಾಸಗಳಿಗೆ ಆದ್ಯತೆ ನೀಡಬಹುದೆಂದು ಖಚಿತಪಡಿಸುತ್ತದೆ.

ಇನ್ನಷ್ಟು ರಾಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​