ವಿಟಮಿನ್ ಡಿ ಕೊರತೆಯು ಮಕ್ಕಳ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಅಧ್ಯಯನದ ಸಮಯದಲ್ಲಿ, ಸಂಶೋಧಕರು 78 ಮಕ್ಕಳನ್ನು ಸಂಶೋಧನೆಗೆ ಒಳಪಡಿಸಿದ್ದು, ಇದರಲ್ಲಿ ಮತ್ತು ವಿಟಮಿನ್ ಡಿ ಸ್ಥಿತಿಗೆ ಸಂಬಂಧಿಸಿದಂತೆ ವಿಟಮಿನ್ ಡಿ ಕೊರತೆ ಇರುವ ಮತ್ತು ಇಲ್ಲದಿರುವ ಮಕ್ಕಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿತ್ತು.

ವಿಟಮಿನ್ ಡಿ ಕೊರತೆಯು ಮಕ್ಕಳ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
Vitamin D deficiencyImage Credit source: Pexels
Follow us
|

Updated on: Aug 11, 2023 | 6:38 AM

ವಿಟಮಿನ್ ಡಿ ಕೊರತೆಯು ಮಕ್ಕಳಲ್ಲಿ ಬಹು ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಈ ಚಯಾಪಚಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡದೆ ಬಿಟ್ಟರೆ ಅದು ಹೃದಯರಕ್ತನಾಳದ ಅಪಾಯದಂತಹ ತೀವ್ರ ತೊಡಕುಗಳಿಗೆ ಕಾರಣವಾಗಬಹುದು ಎಂದು ಮೆಟಾಬೊಲೈಟ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾದ ಅಧ್ಯಯನವೊಂದು ಬಹಿರಂಗಪಡಿಸಿದೆ. ಅಧ್ಯಯನದ ಸಮಯದಲ್ಲಿ, ಸಂಶೋಧಕರು 78 ಮಕ್ಕಳನ್ನು ಸಂಶೋಧನೆಗೆ ಒಳಪಡಿಸಿದ್ದು, ಇದರಲ್ಲಿ ಮತ್ತು ವಿಟಮಿನ್ ಡಿ ಸ್ಥಿತಿಗೆ ಸಂಬಂಧಿಸಿದಂತೆ ವಿಟಮಿನ್ ಡಿ ಕೊರತೆ ಇರುವ ಮತ್ತು ಇಲ್ಲದಿರುವ ಮಕ್ಕಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿತ್ತು. ಸಂಶೋಧಕರ ಪ್ರಕಾರ, ವಿಟಮಿನ್ ಡಿ ಮಾನವ ದೇಹದಲ್ಲಿನ ವಿವಿಧ ಪ್ರಕ್ರಿಯೆಗಳನ್ನು ನಿಯಂತ್ರಣದಲ್ಲಿಡಲು ಮತ್ತು ಅಸ್ಥಿಪಂಜರದ ಅಂಗಾಂಶದಲ್ಲಿ ಮಾತ್ರವಲ್ಲದೆ ಅಡಿಪೋಸ್ ಅಂಗಾಂಶ ಮತ್ತು ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ವಿಟಮಿನ್ ಡಿ ಕೊರತೆಯು ಅಸ್ಥಿಪಂಜರದ ಬೆಳವಣಿಗೆಗೆ ಸಂಬಂಧಿಸಿದ ಕೊಮೊರ್ಬಿಡಿಟಿಗೆ ಕಾರಣವಾಗುತ್ತದೆ. ಸೂರ್ಯನ ಬೆಳಕಿಗೆ ಕಡಿಮೆ ಒಡ್ಡಿಕೊಳ್ಳುವುದು, ಆಹಾರದಲ್ಲಿ ಅಸಮರ್ಪಕ ವಿಟಮಿನ್ ಡಿ ಪೂರೈಕೆ ಅಥವಾ ಮೂತ್ರಪಿಂಡ ಅಥವಾ ಯಕೃತ್ತಿನ ಕಾಯಿಲೆಗಳಿಂದ ಉಂಟಾಗಬಹುದು ಎಂದು ಅಧ್ಯಯನವು ಹೇಳಿದೆ. ವಿಟಮಿನ್ ಡಿ ಕೊರತೆಯಿರುವ ಮಕ್ಕಳು ಗಮನಾರ್ಹವಾದ ಮೆಟಬಾಲಿಕ್ ಸಿಂಡ್ರೋಮ್‌ನ ಪ್ರಮುಖ ಅಂಶಗಳಾಗಿ ಗುರುತಿಸಲ್ಪಟ್ಟಿರುವ ಆಂಥ್ರೊಪೊಮೆಟ್ರಿಕ್ ಮತ್ತು ಜೀವರಾಸಾಯನಿಕ ಮಟ್ಟದಲ್ಲಿ ವ್ಯತ್ಯಾಸಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.

ವಿಟಮಿನ್ ಡಿ ಕೊರತೆಯ ಲಕ್ಷಣಗಳು:

  • ಆಯಾಸ
  • ನಿದ್ರಾಹೀನತೆ
  • ಮೂಳೆ ನೋವು
  • ಖಿನ್ನತೆ ಅಥವಾ ದುಃಖದ ಭಾವನೆಗಳು
  • ಕೂದಲು ಉದುರುವಿಕೆ
  • ಸ್ನಾಯು ದೌರ್ಬಲ್ಯ
  • ಹಸಿವಿನ ನಷ್ಟ
  • ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುವುದು
  • ಚರ್ಮದ ಸಮಸ್ಯೆ

ಇದನ್ನೂ ಓದಿ: ಕೊರೊನಾ ಬಳಿಕ ಹೆಚ್ಚಾಗ್ತಿವೆ ‘ಹೃದಯಾಘಾತ’ ಕೇಸ್,ಚಿಕ್ಕವರನ್ನೇ ಕಾಡುತ್ತಿರುವುದ್ಯಾಕೆ? ಇಲ್ಲಿವೆ ಕಾರಣಗಳು

ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುವುದು ಹೇಗೆ?

  • ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ.
  • ವಿಟಮಿನ್ ಡಿ ಯ ಸಮೃದ್ಧವಾಗಿರುವ ಆಹಾರ ಮೂಲಗಳಲ್ಲಿನ ಮೀನು ಮತ್ತು ಸಮುದ್ರಾಹಾರವನ್ನು ಸೇವಿಸಿ.
  • ವಿಟಮಿನ್ ಡಿ ಯ ಏಕೈಕ ಸಸ್ಯಾಹಾರಿ ಮೂಲವಾಗಿರುವ ಅಣಬೆಗಳನ್ನು ಹೆಚ್ಚು ಸೇವಿಸಿ.
  • ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಮನೆಯಲ್ಲಿ ಕಪ್ಪು, ಕೆಂಪು ಇರುವೆ ಇದ್ದರೆ ಯಾವುದರ ಸಂಕೇತ? ವಿಡಿಯೋ ನೋಡಿ
ಮನೆಯಲ್ಲಿ ಕಪ್ಪು, ಕೆಂಪು ಇರುವೆ ಇದ್ದರೆ ಯಾವುದರ ಸಂಕೇತ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರು ಇಂದು ವಿದೇಶ ಪ್ರಯಾಣ ಮಾಡುವರು
Nithya Bhavishya: ಈ ರಾಶಿಯವರು ಇಂದು ವಿದೇಶ ಪ್ರಯಾಣ ಮಾಡುವರು
‘ದರ್ಶನ್​ಗೆ ಸರ್ಜರಿ ಇಷ್ಟ ಇಲ್ಲ’: ಕಾರಣ ತಿಳಿಸಿದ ಸುಮಲತಾ ಅಂಬರೀಷ್
‘ದರ್ಶನ್​ಗೆ ಸರ್ಜರಿ ಇಷ್ಟ ಇಲ್ಲ’: ಕಾರಣ ತಿಳಿಸಿದ ಸುಮಲತಾ ಅಂಬರೀಷ್
ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್