AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vitamin D: ವಿಟಮಿನ್ ಡಿ ಋತುಚಕ್ರದ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅಧ್ಯಯನ

ಮುಟ್ಟಿನ ನೋವು ತುಂಬಾ ಸಾಮಾನ್ಯ. ಆದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಬಿಸಿ ನೀರಿನ ಬಾಟಲಿ ಮತ್ತು ಔಷಧಿಗಳನ್ನು ಮೀರಿ ಏನಾದರೂ ಇದೆಯೇ? ಎಂಬ ಪ್ರಶ್ನೆಗಳಿಗೆ ಅಧ್ಯಯನದಿಂದ ಉತ್ತರ ದೊರೆತಿದೆ. ಇದರಲ್ಲಿ ವಿಟಮಿನ್ ಡಿ ಇರುವ ಪೂರಕಗಳು ಮುಟ್ಟಿನ ಸೆಳೆತವನ್ನು ಕೆಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

Vitamin D: ವಿಟಮಿನ್ ಡಿ ಋತುಚಕ್ರದ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 13, 2023 | 10:35 AM

Share

ಹೆಚ್ಚಿನ ಮಹಿಳೆಯರಲ್ಲಿ ಋತುಚಕ್ರದ (periods) ನೋವು ಪ್ರತಿ ತಿಂಗಳು ತಪ್ಪದೇ ಬಾಗಿಲು ತಟ್ಟುತ್ತದೆ. ಇದಕ್ಕೆ ಕೆಲವರು ಮನೆಮದ್ದು (home remedies) ಗಳನ್ನು ಪ್ರಯತ್ನಿಸಿದರೆ, ಇತರರು ಮುಟ್ಟಿನ ಸೆಳೆತಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸಲು ಯೋಗ ಮಾಡುತ್ತಾರೆ. ಆದರೆ ಈ ಬಗ್ಗೆ ನಡೆದ ಅಧ್ಯಯನ (study) ಇದರ ಹೊರತಾಗಿ ಮುಟ್ಟಿನ ನೋವನ್ನು ನಿವಾರಿಸಲು ನಿಮಗೆ ವಿಟಮಿನ್ ಡಿ ಪೂರಕಗಳು ಸಹಾಯ ಮಾಡಲಿದೆ ಎಂದು ತಿಳಿಸಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನವು ವಿಟಮಿನ್ ಡಿ ಕೊರತೆ ಮತ್ತು ಪ್ರಾಥಮಿಕ ಡಿಸ್ಮೆನೋರಿಯಾ ಹೊಂದಿರುವ ಮಹಿಳೆಯರಿಗೆ ಬೇಕಾದ ಪೂರಕಗಳನ್ನು ನೀಡಿದಾಗ, ಇದು ಮುಟ್ಟಿನ ನೋವಿನ ತೀವ್ರತೆ ಮತ್ತು ಆವರ್ತನವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ತೋರಿಸಿದೆ. ವಿಟಮಿನ್ ಡಿ ಮತ್ತು ಮುಟ್ಟಿನ ನೋವಿನ ನಡುವಿನ ಸಂಬಂಧದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಋತುಚಕ್ರದ ಸೆಳೆತ ಎಂದರೇನು?

ಡಿಸ್ಮೆನೋರಿಯಾ ಎಂದೂ ಕರೆಯಲ್ಪಡುವ ಋತುಚಕ್ರದ ಸೆಳೆತಗಳು ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಅಥವಾ ಪೆಲ್ವಿಕ್ ಪ್ರದೇಶದಲ್ಲಿ ನೀವು ಅನುಭವಿಸುವ ನೋವಿನ ಸಂವೇದನೆಗಳಾಗಿವೆ. ಗರ್ಭಾಶದಲ್ಲಿರುವ ಒಳಪದರ ಬೀಳುವಾಗ ಅದರ ಸಂಕೋಚನದಿಂದ ಸೆಳೆತ ಉಂಟಾಗುತ್ತದೆ.

ವಿಟಮಿನ್ ಡಿ ಮತ್ತು ಋತುಚಕ್ರದ ಸೆಳೆತ:

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದಂತಹ ಕೆಲವು ಅಧ್ಯಯನಗಳ ಪ್ರಕಾರ, ವಿಟಮಿನ್ ಡಿ ಮುಟ್ಟಿನ ನೋವಿನ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರಬಹುದು. ಋತುಚಕ್ರದ ನೋವನ್ನು ಕಡಿಮೆ ಮಾಡಲು ವಿಟಮಿನ್ ಡಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅನ್ವೇಷಿಸಲು ನವದೆಹಲಿಯ ಪ್ರಿಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀ ರೋಗತಜ್ಞೆ ಮತ್ತು ಪ್ರಸೂತಿ ಸಲಹೆಗಾರ್ತಿ ಡಾ. ರಶ್ಮಿ ಬಲಿಯಾನ್, ಅವರು ಕೆಲವು ಸಲಹೆ ನೀಡಿದ್ದಾರೆ. ತಜ್ಞರ ಪ್ರಕಾರ, ವೈಯಕ್ತಿಕವಾಗಿ ಫಲಿತಾಂಶ ಬದಲಾಗಬಹುದು ಹಾಗಾಗಿ ಯಾವುದೇ ಹೊಸ ದಿನಚರಿ ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಮುಟ್ಟಿನ ಸೆಳೆತ ನಿವಾರಣೆಗೆ ವಿಟಮಿನ್ ಡಿ:

ಋತುಚಕ್ರದ ಸೆಳೆತದ ಪರಿಹಾರಕ್ಕಾಗಿ ವಿಟಮಿನ್ ಡಿ ಅನ್ನು ಸಂಭಾವ್ಯವಾಗಿ ಬಳಸಲು ಮತ್ತು ದೇಹದಲ್ಲಿ ನೈಸರ್ಗಿಕವಾಗಿ ಸಿಗುವ ವಿಟಮಿನ್ ಡಿ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಅದು ಹೇಗೆ? ಇಲ್ಲಿದೆ ಮಾಹಿತಿ

• ಸೂರ್ಯನ ಬೆಳಕಿಗೆ ನಿಮ್ಮನ್ನು ಒಡ್ಡಿಕೊಳ್ಳುವುದು. ಇದು ನಿಮ್ಮ ಚರ್ಮದಲ್ಲಿ ವಿಟಮಿನ್ ಡಿ ಸಂಶ್ಲೇಷಣೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ.

• ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು.

• ನಿಮ್ಮ ವೈದ್ಯರು ಸೂಚಿಸಿದಂತೆ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದು.

ಇದನ್ನೂ ಓದಿ:  ದೇಹದಲ್ಲಿ ವಿಟಮಿನ್ ಡಿ ಕೊರತೆಯುಂಟಾಗಲು ಕಾರಣಗಳೇನು? ಇಲ್ಲಿದೆ ಮಾಹಿತಿ

ವಿಟಮಿನ್ ಡಿ ಕೊರತೆ ಮತ್ತು ಮುಟ್ಟು:

ವಿಟಮಿನ್ ಡಿ ಕೊರತೆಯು ಮಹಿಳೆಯ ಋತುಚಕ್ರದ ಮೇಲೆ ಪರಿಣಾಮ ಬೀರಬಹುದು, ಆದರೆ ವಿಟಮಿನ್ ಡಿ ಮತ್ತು ಋತುಚಕ್ರದ ನಡುವಿನ ಸಂಬಂಧವನ್ನು ಇನ್ನೂ ಅಧ್ಯಯನ ಮಾಡಬೇಕಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಡಿಮೆ ಮಟ್ಟದ ವಿಟಮಿನ್ ಡಿ ಅನಿಯಮಿತ ಮತ್ತು ನೋವಿನ ಋತುಚಕ್ರಕ್ಕೆ ಸಂಬಂಧಿಸಿದೆ ಎಂದು ತಜ್ಞರು ಗಮನಿಸಿದ್ದು, ವಿಟಮಿನ್ ಡಿ ಕೊರತೆಯನ್ನು ಋತುಚಕ್ರದ ಸೆಳೆತಕ್ಕೆ ನೇರವಾಗಿ ಸಂಪರ್ಕಿಸುವ ನಿರ್ಣಾಯಕ ಪುರಾವೆಗಳಿಲ್ಲದಿದ್ದರೂ, ಒಟ್ಟಾರೆ ಆರೋಗ್ಯಕ್ಕಾಗಿ ಈ ವಿಟಮಿನ್ ನ ಮಟ್ಟವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ಋತುಚಕ್ರದ ನೋವನ್ನು ಇನ್ನಷ್ಟು ಹದಗೆಡಿಸುವ ಪೋಷಕಾಂಶಗಳ ಕೊರತೆ:

ವಿಟಮಿನ್ ಡಿ ಹೊರತಾಗಿ, ಪೋಷಕಾಂಶಗಳ ಕೊರತೆಗಳಿವೆ, ಅದು ಮುಟ್ಟಿನ ನೋವನ್ನು ಇನ್ನಷ್ಟು ಹದಗೆಡಿಸುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ:

1. ಮೆಗ್ನೀಸಿಯಮ್

ದೇಹದಲ್ಲಿರುವ ಮೆಗ್ನೀಸಿಯಮ್ ಮಟ್ಟವು ಮುಟ್ಟಿನ ಸೆಳೆತದ ತೀವ್ರತೆಯೊಂದಿಗೆ ಸಂಬಂಧಿಸಿದೆ ಎಂದು ಡಾ. ಬಲಿಯಾನ್ ಹೇಳುತ್ತಾರೆ. ಸೊಪ್ಪುಗಳು , ಬೀಜ ಮತ್ತು ಧಾನ್ಯಗಳಂತಹ ಮೆಗ್ನೀಸಿಯಮ್ ಸಮೃದ್ಧ ಆಹಾರಗಳನ್ನು ಸೇವಿಸುವುದು ಅಥವಾ ಮೆಗ್ನೀಸಿಯಮ್ ಪೂರಕಗಳನ್ನು ತೆಗೆದುಕೊಳ್ಳುವುದು ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

2. ಒಮೆಗಾ -3 ಕೊಬ್ಬಿನಾಮ್ಲಗಳು

ಈ ಅಗತ್ಯ ಕೊಬ್ಬುಗಳು ಉರಿಯೂತದ ಗುಣಲಕ್ಷಣಗಳನ್ನು ಬಗೆಹರಿಸುತ್ತದೆ ಮತ್ತು ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೀನು, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳಂತಹ ಆಹಾರಗಳು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳಾಗಿವೆ.

3. ಕ್ಯಾಲ್ಸಿಯಂ

ಕಡಿಮೆ ಕ್ಯಾಲ್ಸಿಯಂ ಮಟ್ಟವು ಹೆಚ್ಚು ತೀವ್ರವಾದ ಋತುಚಕ್ರದ ಸೆಳೆತಕ್ಕೆ ಸಂಬಂಧಿಸಿದೆ. ಆದ್ದರಿಂದ, ಡೈರಿ ಉತ್ಪನ್ನಗಳು, ಸೊಪ್ಪು, ತರಕಾರಿಗಳು ಮತ್ತು ಹಾಲಿನಂತಹ ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಲು ಪ್ರಾರಂಭಿಸಿ.

ಇದನ್ನೂ ಓದಿ: Vitamin D deficiency: ನಿಮ್ಮ ನಾಲಿಗೆಯ ಮೇಲಿನ ಈ ಲಕ್ಷಣಗಳೇ ವಿಟಮಿನ್ ಡಿ ಕೊರತೆಯ ಸಂಕೇತ

ಮುಟ್ಟಿನ ಸೆಳೆತವನ್ನು ನಿಲ್ಲಿಸುವ ಮಾರ್ಗಗಳು:

1. ವ್ಯಾಯಾಮ

ವಾಕಿಂಗ್ ಅಥವಾ ಸೌಮ್ಯ ಸ್ಟ್ರೆಚಿಂಗ್ ನಂತಹ ಲಘು ಮತ್ತು ಮಧ್ಯಮ ವ್ಯಾಯಾಮ ಮಾಡುವುದರಿಂದ ಎಂಡಾರ್ಫಿನ್ (ಸಂತೋಷದ ಹಾರ್ಮೋನ್) ಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುವ ಮೂಲಕ ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ನೋವು ನಿವಾರಕಗಳು

ಇಬುಪ್ರೊಫೇನ್ ಅಥವಾ ನಾಪ್ರೋಕ್ಸೆನ್ ಸೋಡಿಯಂನಂತಹ ನೋವು ನಿವಾರಕ ಔಷಧಿಗಳು ಮುಟ್ಟಿನ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಕೇವಲ ನೀವೇ ಔಷಧಿ ತೆಗೆದುಕೊಳ್ಳಬೇಡಿ, ನಿಮ್ಮ ವೈದ್ಯರು ಶಿಫಾರಸು ಮಾಡಿದ ಡೋಸೇಜ್ ಅನ್ನು ಮಾತ್ರ ಅನುಸರಿಸಿ. ಎಲ್ಲರ ದೇಹದ ಪ್ರಕೃತಿ ಒಂದೇ ಆಗಿರುವುದಿಲ್ಲ. ಹಾಗಾಗಿ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

3. ವಿಶ್ರಾಂತಿ

ಆಳವಾದ ಉಸಿರಾಟ, ಧ್ಯಾನ ಮತ್ತು ಯೋಗದಂತಹ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ, ಋತುಚಕ್ರದ ಸೆಳೆತವನ್ನು ಸರಾಗಗೊಳಿಸುತ್ತದೆ.

4. ಸರಿಯಾದ ಆಹಾರದ ಆಯ್ಕೆ

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.

5. ಗಿಡಮೂಲಿಕೆ ಪರಿಹಾರಗಳು

ಶುಂಠಿ, ದಾಲ್ಚಿನ್ನಿ ಮತ್ತು ಕ್ಯಾಮೊಮೈಲ್ನಂತಹ ಕೆಲವು ಗಿಡಮೂಲಿಕೆ ಪೂರಕಗಳನ್ನು ಸಾಂಪ್ರದಾಯಿಕವಾಗಿ ಮುಟ್ಟಿನ ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಅವುಗಳ ಪರಿಣಾಮಕಾರಿತ್ವವು ಒಬ್ಬರಿಂದ ಒಬ್ಬರಿಗೆ ಬದಲಾಗಬಹುದು.

ಋತುಚಕ್ರದ ಸೆಳೆತವು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವಷ್ಟು ತೀವ್ರವಾಗಿದ್ದರೆ ಅಥವಾ ಇತರ ಸಂಬಂಧಿತ ರೋಗಲಕ್ಷಣಗಳಿದ್ದರೆ, ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್