Vitamin D deficiency: ನಿಮ್ಮ ನಾಲಿಗೆಯ ಮೇಲಿನ ಈ ಲಕ್ಷಣಗಳೇ ವಿಟಮಿನ್ ಡಿ ಕೊರತೆಯ ಸಂಕೇತ

ಸೂರ್ಯನ ಕಿರಣಗಳು ವಿಟಮಿನ್​ ಡಿ ಯನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುವ ಪ್ರಾಥಮಿಕ ಮೂಲವಾಗಿದೆ. ಏಕೆಂದರೆ ವಿಟಮಿನ್​ ಡಿ ಆಹಾರದಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಇರುತ್ತದೆ.

Vitamin D deficiency: ನಿಮ್ಮ ನಾಲಿಗೆಯ ಮೇಲಿನ ಈ ಲಕ್ಷಣಗಳೇ ವಿಟಮಿನ್ ಡಿ ಕೊರತೆಯ ಸಂಕೇತ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on:Sep 24, 2021 | 1:14 PM

ವಿಟಮಿನ್ ಡಿ ನಮ್ಮ ದೇಹವು ಆರೋಗ್ಯವಾಗಿರಲು ಅಗತ್ಯವಿರುವ ಅನೇಕ ಪೋಷಕಾಂಶಗಳಲ್ಲಿ ಒಂದಾಗಿದೆ. ಇದು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ದೇಹದಿಂದ ಉತ್ಪತ್ತಿಯಾಗುವ ಕೊಬ್ಬಿನಲ್ಲಿ ಕರಗುವ ಪೋಷಕಾಂಶವಾಗಿದೆ. ಸೂರ್ಯನ ಕಿರಣ ಈ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುವ ಪ್ರಾಥಮಿಕ ಮೂಲವಾಗಿದೆ. ಏಕೆಂದರೆ ವಿಟಮಿನ್​ ಡಿ (Vitamin D) ಆಹಾರದಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಇರುತ್ತದೆ.

ನಮ್ಮ ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಆರೋಗ್ಯವಾಗಿಡಲು ವಿಟಮಿನ್ ಡಿ  ಪ್ರಮುಖ ಪಾತ್ರ ವಹಿಸುತ್ತದೆ. ಈ ಪೋಷಕಾಂಶದ ಕೊರತೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಮಸ್ಯೆಯೊಡ್ಡುತ್ತದೆ. ಆದರೂ, ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರಿಗೆ ವಿಟಮಿನ್ ಡಿ ಕೊರತೆಯಿದೆ. ಸಾಮಾನ್ಯವಾಗಿ, ವಿಟಮಿನ್ ಡಿ ಕೊರತೆಯನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗುತ್ತದೆ. ಈಗ ಸಂಶೋಧಕರು ಈ ಸಮಸ್ಯೆಯನ್ನು ಪತ್ತೆಹಚ್ಚಲು ಇನ್ನೊಂದು ಸುಲಭವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಾಲಿಗೆಯಲ್ಲಿನ ಈ ಕೆಲವು ಲಕ್ಷಣಗಳು ಕೂಡ ವಿಟಮಿನ್ ಡಿ ಕೊರತೆಯ ಬಗ್ಗೆ ಎಚ್ಚರಿಸುತ್ತದೆ.

ನಾಲಿಗೆಯ ಮೇಲಿನ ಈ ಲಕ್ಷಣಗಳು ವಿಟಮಿನ್​ ಡಿ ಕೊರತೆಯ ಸಂಕೇತ 2017 ರಲ್ಲಿ ಡರ್ಮಟಾಲಜಿ ವಿಭಾಗ, ಮೇಯೊ ಕ್ಲಿನಿಕ್, ರೋಚೆಸ್ಟರ್ (ಯುಎಸ್ಎ) ನಡೆಸಿದ ಅಧ್ಯಯನದ ಪ್ರಕಾರ, ಬಿಎಂಎಸ್ (burning mouth syndrome) ಹೊಂದಿರುವ ಜನರು ವಿಟಮಿನ್ ಡಿ (ಡಿ 2 ಮತ್ತು ಡಿ 3), ವಿಟಮಿನ್ ಬಿ6, ಸತು, ವಿಟಮಿನ್ ಬಿ1, ಮತ್ತು ಟಿಎಸ್​ಹೆಚ್​ ಬಗ್ಗೆ ಗಮನಹರಿಸುವುದು ಸೂಕ್ತ.

ಸುಡುವ ಅಥವಾ ಉರಿಯಾದಂತೆ ಭಾಸವಾಗುವುದು. ನೋವು ಅಥವಾ ಬಿಸಿ ಸಂವೇದನೆಯನ್ನು ಸಾಮಾನ್ಯವಾಗಿ ತುಟಿಗಳು ಅಥವಾ ನಾಲಿಗೆ ಅಥವಾ ಬಾಯಿಯಲ್ಲಿ ಹೆಚ್ಚು ವ್ಯಾಪಕವಾಗಿ ಅನುಭವಿಸಲಾಗುತ್ತದೆ. ಅದರ ಜೊತೆಯಲ್ಲಿ, ಒಬ್ಬ ವ್ಯಕ್ತಿಯು ಬಾಯಿಯಲ್ಲಿ ಮರಗಟ್ಟುವಿಕೆ, ಶುಷ್ಕತೆ ಮತ್ತು ಅಹಿತಕರ ರುಚಿಯನ್ನು ಅನುಭವಿಸಬಹುದು. ಏನನ್ನಾದರೂ ತಿನ್ನುವಾಗ ನೋವು ಹೆಚ್ಚಾಗಬಹುದು. ಈ ಸಮಸ್ಯೆಯ ಮೂಲ ಕಾರಣವನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಆಗ ಬಿಎಂಎಸ್ (burning mouth syndrome) ಉಂಟಾಗುತ್ತದೆ.

ಈ ಸಮಸ್ಯೆಗೆ ಪರಿಹಾರ ಏನು? ಕೊವಿಡ್ ಸಮಯದಲ್ಲಿ ವಿಟಮಿನ್ ಡಿ ಬಗ್ಗೆ ನಿಗಾ ವಹಿಸುವ ಅಗತ್ಯ ಹೆಚ್ಚಾಗಿದೆ. ವಿಟಮಿನ್ ಡಿ ಕೊರತೆಯು ಉರಿಯೂತದ ಸೈಟೊಕಿನ್‌ಗಳು, ನ್ಯುಮೋನಿಯಾ, ಶ್ವಾಸೇಂದ್ರಿಯ ಪ್ರದೇಶದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನೀವು ಈ ರೋಗಲಕ್ಷಣವನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅದರಲ್ಲೂ ಬಾಯಿ ಸಿಂಡ್ರೋಮ್ ಇತರ ಪೋಷಕಾಂಶಗಳ ಕೊರತೆಯೊಂದಿಗೆ ಸಂಬಂಧ ಹೊಂದಿದ್ದರೂ, ವಿಟಮಿನ್​ ಡಿ ಕೊರತೆ ಇದಕ್ಕೆ ಪ್ರಮುಖ ಕಾರಣ. ಹೀಗಾಗಿ  ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ವಿಟಮಿನ್ ಡಿ ಕೊರತೆಯ ಇತರ ಸಾಮಾನ್ಯ ಲಕ್ಷಣಗಳು ಆಯಾಸ, ಮೂಳೆ ನೋವು, ಸ್ನಾಯು ಸೆಳೆತ ಮತ್ತು ಆಗಾಗ ಬದಲಾಗುವ ಮನಸ್ಥಿತಿ.

ವಿಟಮಿನ್ ಡಿ ಪಡೆಯಲು ಎಷ್ಟು ದಿನ ಬಿಸಿಲಿನಲ್ಲಿರಬೇಕು? ದೈನಂದಿನ ಶಿಫಾರಸ್ಸಿನ ಪ್ರಕಾರ, ವಿಟಮಿನ್ ಡಿ ಯ ಆಹಾರ ಸೇವನೆಯ (ಆರ್‌ಡಿಐ) ಮಟ್ಟವು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ 600 ಐಯು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ 800 ಐಯು ಆಗಿದೆ.

ಪ್ರತಿದಿನ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ನಿಮ್ಮ ದೇಹವು ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಯನ್ನು ವೃದ್ಧಿಸಿಕೊಳ್ಳಬಹುದು. ಆಯಾ ಋತುವಿಗೆ ಸೂರ್ಯನ ಬೆಳಕಿನ ಸಮಯ ಬದಲಾಗುತ್ತದೆ. ಉದಾಹರಣೆಗೆ ಸೂರ್ಯನ ಬೆಳಕಿನ ತೀವ್ರತೆಯಿಂದಾಗಿ ಬೆಸಿಗೆಯಕಾಲದಲ್ಲಿ 10 ರಿಂದ 20 ನಿಮಿಷಗಳನ್ನು ಬಿಸಿಲಿನಲ್ಲಿ ಕಳೆಯುವುದು ಉತ್ತಮ. ಆದರೆ ಚಳಿಗಾಲದಲ್ಲಿ ವ್ಯಕ್ತಿಯು ಶಿಫಾರಸು ಮಾಡಿದ ವಿಟಮಿನ್ ಡಿ ಪಡೆಯಲು ಕನಿಷ್ಠ 2 ಗಂಟೆಗಳ ಕಾಲ ಬಿಸಿಲಿನಲ್ಲಿ ಇರಬೇಕಾಗುತ್ತದೆ.

ವಿಟಮಿನ್ ಡಿ ಯ ಇತರ ಮೂಲಗಳು ಸೂರ್ಯನ ಬೆಳಕು  ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಆದರೆ ನೀವು ಈ ಪೋಷಕಾಂಶದ ಸೇವನೆಯನ್ನು ಹೆಚ್ಚಿಸಲು ಬಯಸಿದರೆ  ಈ ಕೆಳಕಂಡ ಆಹಾರಗಳನ್ನು ಸೇವಿಸಬಹುದು

ಕಿತ್ತಳೆ

ಚಾಕಲೇಟ್​

ಸೋಯಾಬೀನ್

ಬೆಳ್ಳುಳ್ಳಿ

ಸಾರ್ಡೀನ್ ಮತ್ತು ಸಾಲ್ಮನ್ ನಂತಹ ಮೀನು

ಸಾಸಿವೆ

ಇದನ್ನೂ ಓದಿ:

Vitamin D: ವಿಟಮಿನ್​ ಡಿ ಕೊರತೆಯಿಂದ ಉಂಟಾಗುವ ರೋಗ ಲಕ್ಷಣಗಳು ಮತ್ತು ಪರಿಹಾರ ಕ್ರಮಗಳು

Vitamin B12 Deficiency: ದೇಹಕ್ಕೆ ವಿಟಮಿನ್ ಬಿ12 ಏಕೆ ಮುಖ್ಯ? ಕೊರತೆಯನ್ನು ನೀಗಿಸುವುದು ಹೇಗೆ?

Published On - 1:10 pm, Fri, 24 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ