AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vitamin B12 Deficiency: ದೇಹಕ್ಕೆ ವಿಟಮಿನ್ ಬಿ12 ಏಕೆ ಮುಖ್ಯ? ಕೊರತೆಯನ್ನು ನೀಗಿಸುವುದು ಹೇಗೆ?

ವಿಟಮಿನ್ ಬಿ12 ಕೊರತೆಯಿಂದ ಏನಾಲ್ಲಾ ಆರೋಗ್ಯ ಸಮಸ್ಯೆಗಳು ಕಾಡಬಹುದು ಮತ್ತು ಈ ಕೊರತೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.

Vitamin B12 Deficiency: ದೇಹಕ್ಕೆ ವಿಟಮಿನ್ ಬಿ12 ಏಕೆ ಮುಖ್ಯ? ಕೊರತೆಯನ್ನು ನೀಗಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on: Aug 28, 2021 | 8:15 AM

Share

ಆರೋಗ್ಯವಾಗಿರಲು ಹಲವು ವಿಧದ ವಿಟಮಿನ್​, ಪೋಷಕಾಂಶಗಳು, ಪ್ರೋಟೀನ್​, ಫೈಬರ್ ಮತ್ತು ಕಾರ್ಬೋಹೈಡ್ರೇಟ್​ಗಳು ಬೇಕಾಗುತ್ತದೆ. ಸಾಮಾನ್ಯವಾಗಿ ಆಹಾರ ಮತ್ತು ಪಾನೀಯಗಳಿಂದ ಪೋಷಕಾಂಶಗಳನ್ನು, ಪ್ರೋಟೀನ್​ಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ವಿಟಮಿನ್ ಬಿ12 ಪೋಷಕಾಂಶದ ಕೊರತೆಯಿಂದ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಸಾಮಾನ್ಯವಾಗಿ ಸಸ್ಯಹಾರಿ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುವುದಿಲ್ಲ. ಮಾಂಸಹಾರಿಗಳಲ್ಲಿ ಕಂಡುಬರುವ ವಿಟಮಿನ್ ಬಿ12 ಕೊರತೆಯಿಂದ ಪರಿಹಾರ ಪಡೆಯಲು ಯಾವ ಪದಾರ್ಥಗಳನ್ನು ಸೇವಿಸಬೇಕು ಎಂಬ ಮಾಹಿತಿ ಈ ಕೆಳಗಿನಂತಿದೆ.

ವಿಟಮಿನ್ ಬಿ12ವನ್ನು ಕೋಬಾಲಾಮಿನ್ ಎಂದೂ ಕರೆಯಲಾಗುತ್ತದೆ. ವಿಟಮಿನ್ ಬಿ12 ಕೊರತೆಯಿಂದ ಏನಾಲ್ಲಾ ಆರೋಗ್ಯ ಸಮಸ್ಯೆಗಳು ಕಾಡಬಹುದು ಮತ್ತು ಈ ಕೊರತೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.

ದೇಹದಲ್ಲಿ ಕೆಂಪು ರಕ್ತಕಣಗಳ ರಚನೆ ಮತ್ತು ನರಮಂಡಲವನ್ನು ಆರೋಗ್ಯವಾಗಿರಿಸುವಲ್ಲಿ ವಿಟಮಿನ್ ಬಿ12 ಮುಖ್ಯ ಪಾತ್ರವಹಿಸುತ್ತದೆ. ಇದು ಮಾನಸಿಕ ಆರೋಗ್ಯ ಸುಧಾರಣೆಗೆ ಉಪಯುಕ್ತವೆಂದು ಪರಿಗಣಿಸಲಾಗಿದೆ. ವಿಟಮಿನ್ ಬಿ12 ಮೆದುಳಿನ ಹಾನಿ ಮತ್ತು ರೋಗಗಳಿಂದ ರಕ್ಷಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಈ ಪೋಷಕಾಂಶವನ್ನು ಆಹಾರದ ಮೂಲಕ ಸೇವಿಸಲಾಗುತ್ತದೆ.

ರಕ್ಷಹೀನತೆ, ಆಯಾಸ, ದೇಹದ ದೌರ್ಬಲ್ಯ, ಹಸಿವು ಕಡಿಮೆಯಾಗುವುದು, ಕಿರಿಕಿರಿ, ಕೈಕಾಲುಗಳಲ್ಲಿ ಬಿಗಿತ, ಬಾಯಿ ಹುಣ್ಣು, ಮಲಬದ್ಧತೆ, ನೆನಪಿನ ಶಕ್ತಿ ಕಳೆದುಕೊಳ್ಳುವುದು, ಅತಿಯಾದ ಒತ್ತಡ, ತಲೆನೋವು, ಉಸಿರಾಟದ ತೊಂದರೆ, ಹಳದಿ ಚರ್ಮ, ಕಣ್ಣಿನ ದೃಷ್ಟಿ ಈ ಸಮಸ್ಯೆಯ ಮುಖ್ಯ ಲಕ್ಷಣಗಳು.

ವಿಟಮಿನ್ ಬಿ12 ಮೀನು, ಕೋಳಿ, ಮೊಟ್ಟೆ ಮತ್ತು ಸೀಗಡಿಗಳಲ್ಲಿ ಕಂಡುಬರುತ್ತದೆ. ನೀವು ಮಾಂಸಹಾರಿಗಳಾಗಿದ್ದರೆ ಇವುಗಳನ್ನು ಸೇವಿಸಿ. ಸಸ್ಯಹಾರಿಗಳು ಈ ಸಮಸ್ಯೆಯನ್ನು ಸ್ವಲ್ಪ ಟ್ಟಿಗೆ ಮೊಸರು, ಓಟ್ಸ್, ಸೋಯಾಬೀನ್​ಗಳಿಂದ ನೀಗಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದರೆ ತಜ್ಞರ ಸಲಹೆಗಳೊಂದಿಗೆ ವಿಟಮಿನ್ ಬಿ12 ಪೂರಕಗಳನ್ನು ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ:

Vitamin D: ವಿಟಮಿನ್​ ಡಿ ಕೊರತೆಯಿಂದ ಉಂಟಾಗುವ ರೋಗ ಲಕ್ಷಣಗಳು ಮತ್ತು ಪರಿಹಾರ ಕ್ರಮಗಳು

Health Tips: ಪೌಷ್ಠಿಕಾಂಶಯುಕ್ತ ಸಾಮಗ್ರಿಗಳೇ ಅಡುಗೆ ಕೋಣೆಯಲ್ಲಿ ತುಂಬಿರಲಿ, ಪ್ರೋಟೀನ್​ಯುಕ್ತ ಆಹಾರವನ್ನೇ ಸೇವಿಸಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ