Heart Failure Symptoms: ಹೃದಯ ವೈಫಲ್ಯದ ಈ ಲಕ್ಷಣಗಳನ್ನು ಎಂದು ನಿರ್ಲಕ್ಷಿಸಬೇಡಿ

ಯುವಕರಲ್ಲಿ ಹೃದಯ ವೈಫಲ್ಯದ ಸಮಸ್ಯೆಯ ಹಿಂದಿರುವ ಪ್ರಮುಖ ಕಾರಣವೆಂದರೆ, ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು, ಹೆಚ್ಚುತ್ತಿರುವ ಒತ್ತಡ ಮತ್ತು ಮಾಲಿನ್ಯಕ್ಕೆ ಒಗ್ಗಿಕೊಂಡಿರುವ ಜಂಕ್ ಫುಟ್​ಗಳು. ಇವು ನಿಮ್ಮ ಆರೋಗ್ಯವನ್ನು ದುರ್ಬಲಗೊಳಿಸುತ್ತವೆ ಮತ್ತು ಹೃದಯ ವೈಫಲ್ಯ ಸಮಸ್ಯೆಯನ್ನು ಹೆಚ್ಚಿಸಬಹುದು.

Heart Failure Symptoms: ಹೃದಯ ವೈಫಲ್ಯದ ಈ ಲಕ್ಷಣಗಳನ್ನು ಎಂದು ನಿರ್ಲಕ್ಷಿಸಬೇಡಿ
ಸಾಂದರ್ಭಿಕ ಚಿತ್ರ
Follow us
| Updated By: shruti hegde

Updated on:Sep 24, 2021 | 3:26 PM

ಭಾರತದಲ್ಲಿ ಹೃದಯ ವೈಫಲ್ಯದ ಪ್ರಕರಣಗಳು ನಿರಂತವಾಗಿ ಹೆಚ್ಚುತ್ತಿದೆ. ವಯಸ್ಸಾದಂತೆ ದೇಹಯ ಸ್ನಾಯು ಗಟ್ಟಿಯಾಗುತ್ತದೆ ಮತ್ತು ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ದೇಹದ ಪ್ರಮುಖ ಅಂಗಗಳಿಗೆ ಸಾಗುವ ಆಮ್ಲಜನಕ ಮತ್ತು ಪೋಷಕಾಂಶಗಳಿಗೆ ಅಡ್ಡಿಯುಂಟಾಗುತ್ತದೆ. ಮುಖ್ಯವಾಗಿ ಯುವಕರಲ್ಲಿ ಹೃದಯ ವೈಫಲ್ಯದ ಸಮಸ್ಯೆಯ ಹಿಂದಿರುವ ಪ್ರಮುಖ ಕಾರಣವೆಂದರೆ, ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು, ಹೆಚ್ಚುತ್ತಿರುವ ಒತ್ತಡ ಮತ್ತು ಮಾಲಿನ್ಯಕ್ಕೆ ಒಗ್ಗಿಕೊಂಡಿರುವ ಜಂಕ್ ಫುಟ್​ಗಳು. ಇವು ನಿಮ್ಮ ಆರೋಗ್ಯವನ್ನು ದುರ್ಬಲಗೊಳಿಸುತ್ತವೆ ಮತ್ತು ಹೃದಯ ವೈಫಲ್ಯ ಸಮಸ್ಯೆಯನ್ನು ಹೆಚ್ಚಿಸಬಹುದು.

ಹೃದಯ ವೈಫಲ್ಯಕ್ಕೆ ಕಾರಣವಾಗುವ ಲಕ್ಷಣಗಳು ಆಯಾಸ ಒತ್ತಡ ಪಾದದ ಊತ ಉಸಿರಾಟ ತೊಂದರೆ

ಆರೋಗ್ಯಕರ ಹೃದಯಕ್ಕಾಗಿ ಸಲಹೆಗಳು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ ಸೋಡಿಯಂ ದೇಹದಲ್ಲಿ ನೀರು ಉಳಿಸಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಹೃದಯ ವೈಫಲ್ಯದ ಲಕ್ಷಣಗಳನ್ನು ನಿರ್ವಹಿಸಲು ಉಪ್ಪು ಸೇವನೆಯನ್ನು ಕಡಿಮೆ ಮಾಡಿ. ದೇಹದಲ್ಲಿ ಅಧಿಕವಾದ ನೀರಿನ ಅಂಶ ಹೃದಯವು ಸರಿಯಾಗಿ ಪಂಪ್ ಮಾಡಲು ಅಡ್ಡಿಯುಂಟು ಮಾಡುತ್ತದೆ.

ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಿ ಮದ್ಯಪಾನ ಮತ್ತು ಧೂಮಪಾನವು ಹೃದಯವನ್ನು ತೀವ್ರವಾಗಿ ಹಾನಿಗೊಳಗಾಗಿಸುತ್ತದೆ. ಆಲ್ಕೊಹಾಲ್ ಸೇವನೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗಿ ದೇಹಯ ವೈಫಲ್ಯ ಹೊಂದಿರುವ ರೋಗಿಗಳಿಗೆ ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ತಜ್ಞರು ಸಲಹೆ ನೀಡುತ್ತಾರೆ.

ಮಿತವಾಗಿ ವ್ಯಾಯಾಮ ಮತ್ತು ವಾಕಿಂಗ್ ಮಾಡಿ ದೈನಂದಿನ ದಿನಚರಿಯ ಭಾಗವಾಗಿ ದಿನದಲ್ಲಿ 20 ರಿಂದ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ವ್ಯಾಯಾಮ ಮತ್ತು ನಿಯಮಿತವಾದ ವಾಕಿಂಗ್ ಹೃದಯ ಸ್ನಾಯುವನ್ನು ಬಲಪಡಿಸುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೃದಯ ವೈಫಲ್ಯದ ಸಮಸ್ಯೆ ಹೊಂದಿರುವವರು ವೈದ್ಯರನ್ನು ಸಂಪರ್ಕಿಸಿ ಯೋಗ ಭಂಗಿಗಳನ್ನು ಮಾಡುವುದರ ಕುರಿತಾಗಿ ಚರ್ಚಿಸುವುದು ಒಳ್ಳೆಯದು.

ಆರೋಗ್ಯಕರ ಆಹಾರ ಹೃದಯ ವೈಫಲ್ಯದ ರೋಗಿಗಳಿಗೆ ಆಹಾರ ಪದ್ಧತಿಯ ಮೇಲೆ ಸರಿಯಾದ ನಿಯಂತ್ರಣವನ್ನು ಇಟ್ಟುಕೊಳ್ಳುವುದು ಮುಖ್ಯ. ಆಹಾರದಲ್ಲಿ ತರಕಾರಿ, ಹಣ್ಣುಗಳು ಮತ್ತು ಹಸಿರು ಸೊಪ್ಪುಗಳಿರಲಿ. ಇವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ:

Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!

Health Tips: ಹಲಸಿನ ಹಣ್ಣಿನ ಸೇವನೆಯ ಆರೋಗ್ಯ ಪ್ರಯೋಜನಗಳು ಬಹಳಷ್ಟಿವೆ; ಈ ಕೆಲವು ಸಲಹೆಗಳು ನಿಮಗಾಗಿ

(don’t neglect these 5 heart failure symptoms)

Published On - 3:24 pm, Fri, 24 September 21

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ