ಶೃಂಗೇರಿಯಿಂದ ಕಾಶ್ಮೀರಕ್ಕೆ ಶಾರದಾ ದೇವಿಯ ಚಿನ್ನ ಲೇಪಿತ ಪಂಚಲೋಹದ ವಿಗ್ರಹ; ಬೆಂಗಳೂರಿನ ಕಾಶ್ಮೀರ ಭವನದಲ್ಲಿ ಜ.26ಕ್ಕೆ ದರ್ಶನ

ಈ ಯಾತ್ರೆ ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್, ಜೈಪುರ, ದೆಹಲಿ-ಎನ್‌ಸಿಆರ್, ಚಂಡೀಗಢ, ಅಮೃತಸರ, ಜಮ್ಮು ಮತ್ತು ಕೊನೆಗೆ ಕುಪ್ವಾರದ ಟಿಕ್ಕರ್ ಅಸ್ತಾಪನ್‌ ಮೂಲಕ ಸಾಗಲಿದೆ

ಶೃಂಗೇರಿಯಿಂದ ಕಾಶ್ಮೀರಕ್ಕೆ ಶಾರದಾ ದೇವಿಯ ಚಿನ್ನ ಲೇಪಿತ ಪಂಚಲೋಹದ ವಿಗ್ರಹ; ಬೆಂಗಳೂರಿನ ಕಾಶ್ಮೀರ ಭವನದಲ್ಲಿ ಜ.26ಕ್ಕೆ ದರ್ಶನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 24, 2023 | 3:39 PM

ದೆಹಲಿ: ಶಾರದಾ ದೇವಿಯ (Godess Sharda) ಚಿನ್ನ ಲೇಪಿತ ಪಂಚಲೋಹದ ವಿಗ್ರಹವನ್ನು ಶೃಂಗೇರಿಯಿಂದ ಕಾಶ್ಮೀರದ (Kashmir) ಟೀಟ್‌ವಾಲ್‌ ಎಲ್‌ಒಸಿಗೆ ರಥ ಯಾತ್ರೆಯಲ್ಲಿ ಕೊಂಡೊಯ್ಯುತ್ತಿದ್ದು ಅಲ್ಲಿ ಮಾರ್ಚ್ 22, 2023 ರಂದು ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಸ್ಥಾಪಿಸಲಾಗುವುದು. ಕಾಶ್ಮೀರಿ ಪಂಡಿತರ (Kashmir Pandit) ಮುಖ್ಯ ದೇವತೆ  ಶಾರಾದಾ ಮಾತೆ. ವಿಗ್ರಹವನ್ನು ರಥದಲ್ಲಿ ಕೊಂಡೊಯ್ಯಲಾಗುತ್ತದೆ. ಈ ಯಾತ್ರೆ ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್, ಜೈಪುರ, ದೆಹಲಿ-ಎನ್‌ಸಿಆರ್, ಚಂಡೀಗಢ, ಅಮೃತಸರ, ಜಮ್ಮು ಮತ್ತು ಕೊನೆಗೆ ಕುಪ್ವಾರದ ಟಿಕ್ಕರ್ ಅಸ್ತಾಪನ್‌ ಮೂಲಕ ಸಾಗಲಿದೆ. ಈ ಎಲ್ಲಾ ಸ್ಥಳಗಳಲ್ಲಿ, ದೇವರನ್ನು ಹೊತ್ತ ರಥವನ್ನು ಕಾಶ್ಮೀರಿ ಭವನಗಳಲ್ಲಿ ಭಾರತದಾದ್ಯಂತ ವಾಸಿಸುವ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರ ದರ್ಶನಕ್ಕಾಗಿ ಇರಿಸಲಾಗುತ್ತದೆ.

ಬೆಂಗಳೂರಿನ ಕಾಶ್ಮೀರ ಭವನದಲ್ಲಿನ ಕಾರ್ಯಕ್ರಮ ಹೀಗಿದೆ

ಜನವರಿ 26, 2023 ಮಧ್ಯಾಹ್ನ: ರಥ ಕಾಶ್ಮೀರ ಭವನವನ್ನು ತಲುಪುತ್ತದೆ, ಅಲ್ಲಿ ವಿಗ್ರಹವನ್ನು ಎಲ್ಲಾ ಭಕ್ತರು ಮತ್ತು ಸಾರ್ವಜನಿಕರಿಂದ ದರ್ಶನಕ್ಕಾಗಿ ಇರಿಸಲಾಗುತ್ತದೆ. ಜನವರಿ 27, 2023: ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ದರ್ಶನ. ಕಾಶ್ಮೀರ ಭವನದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಹೋಮ ನಡೆಯಲಿದೆ. ಜನವರಿ 28, 2023: ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ದರ್ಶನ ಎಲ್ಲ ಭಕ್ತರಿಗೆ ಪ್ರಸಾದ ವಿತರಣೆ

ರವೀಂದರ್ ಪಂಡಿತ ನೇತೃತ್ವದ ಶಾರದಾ ಉಳಿಸಿ ಸಮಿತಿಗೆ ಶೃಂಗೇರಿ ಶಾರದಾ ಮಠವು ನೀಡಿದ ಶಾರದಾ ದೇವಿಯ ಪಂಚಲೋಹ ಮೂರ್ತಿಯನ್ನು ಕಾಶ್ಮೀರದ ಟೀಟ್‌ವಾಲ್‌ಗೆ ಎಲ್‌ಒಸಿ ಟೀಟ್‌ವಾಲ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಶಾರದಾ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗಾಗಿ ಕೊಂಡೊಯ್ಯಲಾಗುತ್ತದೆ.

ಯಾತ್ರೆಯು ಜನವರಿ 24, 2023 ರಂದು ಗುರು ತೃತೀಯ(ಪ್ರಾಚೀನ ಕಾಲದಲ್ಲಿ ಶಾರದಾ ಪೀಠದಲ್ಲಿ ವಾರ್ಷಿಕ ಘಟಿಕೋತ್ಸವದ ದಿನವಾಗಿರುತ್ತದೆ) ಪ್ರಾರಂಭವಾಗುತ್ತದೆ.ಶಾರದಾ ಮಾತೆಯ ವಿಗ್ರಹದ ಪ್ರಾಣ ಪ್ರತಿಷ್ಠೆಯು ಮಾರ್ಚ್ 22, 2023 ರಂದು ಬರುವ ಚೈತ್ರ ಮಾಸ ಪ್ರತಿಪದ ನವರಾಹ್ ದಿನದಂದು ನಡೆಯಲಿದೆ. ಪ್ರಾಚೀನ ಶಾರದಾ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲು ಕಾಶ್ಮೀರದ ಶಾರದಾ ಉಳಿಸಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಪ್ರಾಚೀನ ಭಾರತದಲ್ಲಿ ಕಲಿಕೆಯ ಪ್ರಮುಖ ಸ್ಥಾನವಾಗಿದ್ದ ಇದು ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಕ್ರಮಣಕಾರರಿಂದ ಲೂಟಿ, ಧ್ವಂಸವಾಗಿ ಪಾಳು ಬಿದ್ದಿದೆ.

ಬೆಂಗಳೂರಿನ ಸಮುದಾಯದ ಪ್ರತಿನಿಧಿಗಳೊಂದಿಗೆ ಶಾರದಾ ಉಳಿಸಿ ಸಮಿತಿ ಮತ್ತು ಶಾರದಾ ಯಾತ್ರಾ ದೇವಸ್ಥಾನ ಸಮಿತಿಯ ಸದಸ್ಯರು ಜನವರಿ 24 ರಂದು ಶೃಂಗೇರಿಯಲ್ಲಿ ಯಾತ್ರೆಯ ಮೊದಲ ಹಂತದ ಭಾಗವಾಗಲಿದ್ದು, ಜನವರಿ 26 ರಂದು ಮಧ್ಯಾಹ್ನ ಕಾಶ್ಮೀರ ಭವನ, ಜಯನಗರ ಬೆಂಗಳೂರು ತಲುಪಲಿದ್ದಾರೆ. ದೇವರ ದರ್ಶನಕ್ಕಾಗಿ ಜನವರಿ 27ರವರೆಗೆ ವಿಗ್ರಹ ಇಡಲಾಗುವುದು. ಜನವರಿ 27 ರಂದು ಕಾಶ್ಮೀರ ಭವನದಲ್ಲಿ ಹೋಮ (ಹವನ) ನಡೆಯಲಿದೆ.

ಯಾತ್ರೆ ಮುಂಬೈಗೆ ಹೊರಡುವ ಮೊದಲು ಎಲ್ಲಾ ಭಕ್ತರು ಶಾರದಾ ಮಾತೆಯ ದರ್ಶನವನ್ನು ಪಡೆಯಬೇಕೆಂದು ವಿನಂತಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ