ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್​ರಾಜ್ ವಿಧಿವಶ

|

Updated on: Aug 17, 2020 | 7:44 PM

ದೆಹಲಿ: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್​ರಾಜ್ ​(90) ಇಂದು ವಿಧಿವಶರಾಗಿದ್ದಾರೆ. ಅಮೆರಿಕಾದ ನ್ಯೂ ಜರ್ಸಿಯಲ್ಲಿ ಪಂಡಿತ್ ಜಸ್​ರಾಜ್ ನಿಧನರಾಗಿದ್ದಾರೆ. ಶಾಸ್ತ್ರೀಯ ಸಂಗೀತ ಲೋಕದ ಉತ್ತುಂಗಕ್ಕೆ ಏರಿದ್ದ ಮಹಾನ್​ ವಿದ್ವಾನ್ ಅಂದ್ರೆ ಅದು ಪಂಡಿತ್​ ಜಸ್​ರಾಜ್​. ಬರೋಬ್ಬರಿ 80 ವರ್ಷಗಳ ಕಾಲ ಕಲಾಸೇವೆಯಲ್ಲಿ ತೊಡಗಿದ್ದ ಪಂಡಿತ್ ಜಸ್​ರಾಜ್​ ಮೇವಾಟಿ ಘರಾಣಾ ಪರಂಪರೆಯ ಶೈಲಿಯಲ್ಲಿ ತಮ್ಮ 14 ವಯಸ್ಸಿನಲ್ಲಿಯೇ ತಾಲೀಮು ಆರಂಭಿಸಿದ್ದರು. ಶಾಸ್ತ್ರೀಯ ಸಂಗೀತ ಲೋಕಕ್ಕೆ ಪಂಡಿತ್ ​ಜಸ್​ರಾಜ್​ ಅವರ ಅಪಾರ ಕೊಡುಗೆಯನ್ನ ಗುರುತಿಸಿ ಅಂದಿನ ಕೇಂದ್ರ […]

ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್​ರಾಜ್ ವಿಧಿವಶ
Follow us on

ದೆಹಲಿ: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್​ರಾಜ್ ​(90) ಇಂದು ವಿಧಿವಶರಾಗಿದ್ದಾರೆ. ಅಮೆರಿಕಾದ ನ್ಯೂ ಜರ್ಸಿಯಲ್ಲಿ ಪಂಡಿತ್ ಜಸ್​ರಾಜ್ ನಿಧನರಾಗಿದ್ದಾರೆ.

ಶಾಸ್ತ್ರೀಯ ಸಂಗೀತ ಲೋಕದ ಉತ್ತುಂಗಕ್ಕೆ ಏರಿದ್ದ ಮಹಾನ್​ ವಿದ್ವಾನ್ ಅಂದ್ರೆ ಅದು ಪಂಡಿತ್​ ಜಸ್​ರಾಜ್​. ಬರೋಬ್ಬರಿ 80 ವರ್ಷಗಳ ಕಾಲ ಕಲಾಸೇವೆಯಲ್ಲಿ ತೊಡಗಿದ್ದ ಪಂಡಿತ್ ಜಸ್​ರಾಜ್​ ಮೇವಾಟಿ ಘರಾಣಾ ಪರಂಪರೆಯ ಶೈಲಿಯಲ್ಲಿ ತಮ್ಮ 14 ವಯಸ್ಸಿನಲ್ಲಿಯೇ ತಾಲೀಮು ಆರಂಭಿಸಿದ್ದರು.

ಶಾಸ್ತ್ರೀಯ ಸಂಗೀತ ಲೋಕಕ್ಕೆ ಪಂಡಿತ್ ​ಜಸ್​ರಾಜ್​ ಅವರ ಅಪಾರ ಕೊಡುಗೆಯನ್ನ ಗುರುತಿಸಿ ಅಂದಿನ ಕೇಂದ್ರ ಸರ್ಕಾರ ಪಂಡಿತರಿಗೆ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನ ನೀಡಿ ಗೌರವಿಸಿತ್ತು.

ಪಂಡಿತ್​ ಜಸ್​ರಾಜ್​ರ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.