ತೆಲಂಗಾಣ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ಪೊಲೀಸರೇ ಟ್ರ್ಯಾಕ್ಟರ್ ಮುಖಾಂತರ ಉಕ್ಕಿಹರಿಯುತ್ತಿರುವ ಹಳ್ಳವನ್ನು ದಾಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಧಾರಾಕಾರ ಮಳೆಯಿಂದಾಗಿ ನಗರಕ್ಕೂ ಹಾಗೂ ಗ್ರಾಮಕ್ಕೂ ಸಂಪರ್ಕ ಸೇರಿಸುವ ರಸ್ತೆ ಮಧ್ಯದಲ್ಲಿ ಹಳ್ಳವೊಂದು ಉಕ್ಕಿ ಹರಿಯುತ್ತಿದೆ.
ಇದರಿಂದಾಗಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ಪೊಲೀಸರು ಟ್ರ್ಯಾಕ್ಟರ್ ಮುಖಾಂತರ, ಉಕ್ಕಿಹರಿಯುತ್ತಿರುವ ಹಳ್ಳವನ್ನು ದಾಟಿ, ಕೋಟಪಲ್ಲಿ ಮಂಡಲದ ಚೆನ್ನೂರಿನಲ್ಲಿರುವ ಆಸ್ಪತ್ರೆಗೆ ಸುರಕ್ಷಿತವಾಗಿ ಸೇರಿಸಿದ್ದಾರೆ. ಪೊಲೀಸರ ಈ ಸಾಹಸ ಈಗ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.