ಅಪ್ಪ ಡ್ರಮ್​ನೊಳಗಿದ್ದಾರೆ, ಮುಗ್ಧ ಮಗುವಿನಿಂದ ಬಯಲಾಯ್ತಾ ಸೌರಭ್ ಕೊಲೆಯ ಭಯಾನಕ ಸತ್ಯ

|

Updated on: Mar 21, 2025 | 8:33 AM

ಮೀರತ್​ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಪ್ರೀತಿಸಿ ಕುಟುಂಬದವರ ವಿರೋಧ ಕಟ್ಟಿಕೊಂಡು ಆಕೆಯೇ ಬೇಕೆಂದು ಮದುವೆಯಾಗಿದ್ದ ಸೌರಭ್ ಕೊನೆಗೆ ತಾನು ಪ್ರೀತಿಸಿದವಳಿಂದಲೇ ಕೊಲೆಯಾಗಿದ್ದ. ಹಾಗಾದರೆ ಈ ಕೊಲೆ ಎಲ್ಲರೆದುರು ಬಯಲಾಗಿದ್ದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಸೌರಭ್ ತನ್ನ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಲಂಡನ್​ನಿಂದ ಭಾರತಕ್ಕೆ ಬಂದಿದ್ದ.

ಅಪ್ಪ ಡ್ರಮ್​ನೊಳಗಿದ್ದಾರೆ, ಮುಗ್ಧ ಮಗುವಿನಿಂದ ಬಯಲಾಯ್ತಾ ಸೌರಭ್ ಕೊಲೆಯ ಭಯಾನಕ ಸತ್ಯ
ಸೌರಭ್
Image Credit source: NDTV
Follow us on

ಮೀರತ್, ಮಾರ್ಚ್​ 21: ಮೀರತ್​ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಪ್ರೀತಿಸಿ ಕುಟುಂಬದವರ ವಿರೋಧ ಕಟ್ಟಿಕೊಂಡು ಆಕೆಯೇ ಬೇಕೆಂದು ಮದುವೆಯಾಗಿದ್ದ ಸೌರಭ್ ಕೊನೆಗೆ ತಾನು ಪ್ರೀತಿಸಿದವಳಿಂದಲೇ ಕೊಲೆಯಾಗಿದ್ದ. ಹಾಗಾದರೆ ಈ ಕೊಲೆ ಎಲ್ಲರೆದುರು ಬಯಲಾಗಿದ್ದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಸೌರಭ್ ತನ್ನ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಲಂಡನ್​ನಿಂದ ಭಾರತಕ್ಕೆ ಬಂದಿದ್ದ.

ಕೊಲೆಯ ನಂತರ ಪಿಹು ತನ್ನ ಅಜ್ಜಿಯ ಬಳಿ ಅಪ್ಪ ಡ್ರಮ್​ನಲ್ಲಿದ್ದಾರೆ ಎಂದು ಹೇಳಿದ್ದಳು. ಅದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು ಎಂದು ಸೌರಭ್ ತಾಯಿ ಹೇಳಿದ್ದರೂ ಕೂಡ, ಪೊಲೀಸರು ಇದನ್ನು ಅಲ್ಲಗಳೆದಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕವೇ ಮಗುವಿಗೆ ವಿಚಾರ ತಿಳಿದಿದೆ ಎಂದು ಹೇಳಿದ್ದಾರೆ. ಮುಸ್ಕಾನ್ ಘಟನೆಯನ್ನು ಕುಟುಂಬ ಸದಸ್ಯರಿಗೆ ವಿವರಿಸುವುದನ್ನು ಮಗು ಕೇಳಿರಬೇಕು. ಕೊಲೆಯ ಬಗ್ಗೆ ಅವಳಿಗೆ ಮೊದಲೇ ತಿಳಿದಿರಲಿಲ್ಲ ಎಂದಿದ್ದಾರೆ.

ಸೌರಭ್ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಆತನನ್ನು ಕೊಲೆ ಮಾಡಿ, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿದ್ದರು. ಇಷ್ಟೇ ಅಲ್ಲ, ತನ್ನ ಗಂಡನನ್ನು ಕೊಂದ ನಂತರ ಯಾರಿಗೂ ಅನುಮಾನ ಬರದಂತೆ ನೋಡಿಕೊಳ್ಳಲು, ಮುಸ್ಕಾನ್ ತನ್ನ ಮೊಬೈಲ್‌ನಿಂದ ಸೌರಭ್‌ನ ಕುಟುಂಬಕ್ಕೆ ಸಂದೇಶಗಳನ್ನು ಕಳುಹಿಸಿದಳು, ಇದರಿಂದ ಅವನು ಜೀವಂತವಾಗಿದ್ದಾನೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು.

ಇದನ್ನೂ ಓದಿ
ನಾಪತ್ತೆಯಾಗಿ ಐದು ದಿನಗಳ ಬಳಿಕ ಕಾಲುವೆಯಲ್ಲಿ ಯುವತಿ ಶವ ಪತ್ತೆ
ಮಗಳನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ ಆರೋಪಿ ಮಹಿಳೆಯ ಪೋಷಕರು
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಪತಿಯನ್ನು ಕೊಲೆ ಮಾಡಿ, ಕತ್ತರಿಸಿ ಡ್ರಮ್​ನಲ್ಲಿ ತುಂಬಿಟ್ಟಿದ್ದ ಮಹಿಳೆ

ಸೌರಭ್​ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ

ಸೌರಭ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಅನುಮಾನ ಬಂತು ಎಂದು ಸೌರಭ್ ಸಹೋದರಿ ಹೇಳಿದ್ದಾರೆ. ಹಾಗೆಯೇ ಮಗು ಅಪ್ಪ ಡ್ರಮ್​ನೊಳಗಿದ್ದಾರೆ ಎಂಬ ಮಾತಿನಿಂದ ಸೌರಭ್ ತಾಯಿಗೆ ಅನುಮಾನ ಬಂದಿತ್ತು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಮತ್ತಷ್ಟು ಓದಿ: ಮೀರತ್ ಕೊಲೆ ಪ್ರಕರಣ; ಕೊಲೆಯಾದ ಗಂಡನ ಜೊತೆ ಹಂತಕಿ ಮುಸ್ಕಾನ್ ಡ್ಯಾನ್ಸ್ ಮಾಡಿದ ಹಳೇ ವಿಡಿಯೋ ವೈರಲ್

ಮಾದಕ ದ್ರವ್ಯ ಬೆರೆಸಿ ಕೊಲೆ

ಮಾರ್ಚ್ 4 ರ ರಾತ್ರಿ, ಮುಸ್ಕಾನ್ ಸೌರಭ್ ಅವರ ಆಹಾರದಲ್ಲಿ ಸ್ವಲ್ಪ ಮಾದಕ ದ್ರವ್ಯವನ್ನು ಬೆರೆಸಿದ್ದರಿಂದ ಸೌರಭ್ ಪ್ರಜ್ಞೆ ತಪ್ಪಿದ್ದರು. ನಂತರ, ಮುಸ್ಕಾನ್ ಸಾಹಿಲ್‌ಗೆ ಕರೆ ಮಾಡಿದ್ದಾಳೆ, ಇಬ್ಬರೂ ಒಟ್ಟಾಗಿ ಸೌರಭ್​ನನ್ನು ಕೊಲೆ ಮಾಡಿದ್ದರು. ದೇಹವನ್ನು ವಿಲೇವಾರಿ ಮಾಡಲು ಸುಲಭವಾಗುವಂತೆ, ಅವರ ಕೈಗಳನ್ನು ಕತ್ತರಿಸಲಾಯಿತು. ಮರುದಿನ, ಅವನು ಮಾರುಕಟ್ಟೆಯಿಂದ ಒಂದು ದೊಡ್ಡ ಪ್ಲಾಸ್ಟಿಕ್ ಡ್ರಮ್, ಸಿಮೆಂಟ್ ಮತ್ತು ಮರಳನ್ನು ಖರೀದಿಸಿ, ಅದರೊಳಗೆ ಶವವನ್ನು ಮುಚ್ಚಿ ಮನೆಯಲ್ಲಿ ಅಡಗಿಸಿಟ್ಟಿದ್ದರು.

ಕೊಲೆ ಮಾಡಿ ಇಬ್ಬರು ಟ್ರಿಪ್​ಗೆ ಹೋಗಿದ್ದರು. ಮುಸ್ಕಾನ್ ತನ್ನ ಪತಿಯೊಂದಿಗೆ ಹಿಮಾಚಲಕ್ಕೆ ಹೋಗುತ್ತಿರುವುದಾಗಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಳು. ಪೊಲೀಸರು ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡರು.

ಮುಸ್ಕಾನ್ ಸಾಹಿಲ್ ಇಬ್ಬರು  ಬಾಲ್ಯ ಸ್ನೇಹಿತರು

ಮುಸ್ಕಾನ್ ಮತ್ತು ಸಾಹಿಲ್ ಬಾಲ್ಯದ ಸ್ನೇಹಿತರಾಗಿದ್ದರು ಮತ್ತು 2019 ರಲ್ಲಿ ವಾಟ್ಸಾಪ್ ಗುಂಪಿನ ಮೂಲಕ ಮತ್ತೆ ಸಂಪರ್ಕಕ್ಕೆ ಬಂದರು. ಸಾಹಿಲ್ ಅವಳನ್ನು ಮಾದಕ ದ್ರವ್ಯಗಳ ವ್ಯಸನಿಯನ್ನಾಗಿ ಮಾಡಿದ್ದ ಮತ್ತು ಸೌರಭ್ ಅವನನ್ನು ತಡೆಯುತ್ತಿದ್ದ, ಆದ್ದರಿಂದ ಮುಸ್ಕಾನ್ ಆತನನ್ನು ಕೊಂದಿರಬಹುದೆಂದು ಮುಸ್ಕಾನ್ ತಂದೆ ಹೇಳಿದ್ದಾರೆ. ನ್ಯಾಯಾಲಯ ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.ಸೌರಭ್ ರಜಪೂತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಮನೆಗೆ ತರಲಾಯಿತು, ತಡರಾತ್ರಿ ಅಂತ್ಯಕ್ರಿಯೆ ನಡೆಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ