‘ಸಬ್ ಕುಚ್ ಫ್ರೀ ಮೇ ಚಾಹಿಯೇ’ ಐಐಟಿ ಟಾಪರ್ ಪೋಷಕರ ಡಿಮ್ಯಾಂಡ್ ನೋಡ್ರಪ್ಪಾ..
ಒಬ್ಬ ಟಾಪರ್ ಅನ್ನು ಮನೆಯಾಗಿರಲಿ ಅಥವಾ ಶಾಲೆಯಾಗಿರಲಿ ಅವರನ್ನು ನೋಡುವ ರೀತಿಯೇ ಬೇರೆ. ವಿದ್ಯಾರ್ಥಿ ಹೇಳಿದ್ದೇ ನಡೆಯಬೇಕು, ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಬೇಕು.
ಒಬ್ಬ ಟಾಪರ್ ಅನ್ನು ಮನೆಯಾಗಿರಲಿ ಅಥವಾ ಶಾಲೆಯಾಗಿರಲಿ ಅವರನ್ನು ನೋಡುವ ರೀತಿಯೇ ಬೇರೆ. ವಿದ್ಯಾರ್ಥಿ ಹೇಳಿದ್ದೇ ನಡೆಯಬೇಕು, ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಬೇಕು. ಆ ವಿದ್ಯಾರ್ಥಿಗೆ ಯಾರಿಗೂ ನೀಡದಂತಹ ಗೌರವ ಸಿಗುತ್ತದೆ, ಅದಕ್ಕೆ ತಕ್ಕಂತೆ ಅವರ ಡಿಮ್ಯಾಂಡೂ ಹೆಚ್ಚುತ್ತದೆ, ಅವರು ಏನೇ ಹೇಳಿದರೂ ಅನುಮತಿಸುತ್ತಾರೆ ಎನ್ನುವ ಹುಂಬುತನವೂ ಬೆಳಯುತ್ತದೆ. ಆದರೆ ಈ ಐಐಟಿ ಟಾಪರ್ ಪೋಷಕರ ಬೇಡಿಕೆಗಳು ಬೆಚ್ಚುಬೀಳಿಸುವಂತಿದೆ.
ಜೆಇಇ ಅಡ್ವಾನ್ಸ್‌ನಲ್ಲಿ ಐಐಟಿ ಬಾಂಬೆಯಿಂದ ರ್ಯಾಂಕ್ ಪಡೆದ ವಿದ್ಯಾರ್ಥಿಯ ಪೋಷಕರು ಅಸಮಂಜಸವಾದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇದೀಗ ವೈರಲ್ ಆಗಿರುವ ಫೇಸ್‌ಬುಕ್ ಪೋಸ್ಟ್‌ನಲ್ಲಿ , ಐಐಟಿ ಬಾಂಬೆಯ ನಿರ್ದೇಶಕರಾದ ಪ್ರೊಫೆಸರ್ ಚೌಧರಿ ಅವರು ಜೆಇಇ ಅಡ್ವಾನ್ಸ್‌ನ ಉನ್ನತ ರ್ಯಾಂಕ್ ಪಡೆದ ವಿದ್ಯಾರ್ಥಿಯೊಬ್ಬರ ಪೋಷಕರ ಜತೆ ನಡೆಸಿದ ಟೆಲಿಫೋನ್ ಸಂಭಾಷಣೆಯನ್ನು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
JEE (adv) ಯಲ್ಲಿನ ಅತ್ಯಂತ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯೊಬ್ಬನ ಪೋಷಕರು ನನ್ನ ಬಳಿ ಮಾತನಾಡಿ ಎರಡು ಬೇಡಿಕೆಗಳನ್ನು ಮುಂದಿಟ್ಟರು. ಮೊದಲನೆಯದು, ನನ್ನ ಮಗ ಐಐಟಿಬಿಗೆ ಸೇರಿದರೆ ಆತನಿಗೆ ನೀವು ವಿದ್ಯಾರ್ಥಿ ವೇತನವನ್ನು ನೀಡುತ್ತೀರಾ? ಎಂದು. ಅದಕ್ಕೆ ನಾನು ಪೋಷಕರ ಆದಾಯವು ಕಡಿಮೆ ಇದ್ದರೆ , ವಿದ್ಯಾರ್ಥಿಯು ಅರ್ಜಿ ಸಲ್ಲಿದರೆ ಖಂಡಿತವಾಗಿಯೂ ನೀಡೋಣ, ಇಲ್ಲದಿದ್ದರೆ ಇಲ್ಲ ಎಂದು ಹೇಳಿದೆ ಎಂದು ವಿವರಿಸಿದ್ದಾರೆ.
IITB ನಿರ್ದೇಶಕರನ್ನು ಕೇಳಿದ ಮುಂದಿನ ಪ್ರಶ್ನೆ ಸ್ವಲ್ಪ ವಿಚಿತ್ರವಾಗಿತ್ತು. ಹಾಗೂ ಅವರಿಗೆ ತಮಾಷೆ ಅನಿಸಿತ್ತು. ನೀವು ನನ್ನ ಮಗನಿಗೆ ಕ್ಯಾಂಪಸ್‌ನಲ್ಲಿ ಫ್ಲಾಟ್ ಒದಗಿಸಬಹುದೇ ಎನ್ನುವ ಮತ್ತೊಂದು ಪ್ರಶ್ನೆಯನ್ನು ಅವರ ಮುಂದಿಟ್ಟಿರು ಅದಕ್ಕೆ ನಿರ್ದೇಶಕರಿಗೆ ಒಮ್ಮೆ ಆಶ್ಚರ್ಯವಾಯಿತು.
ನಿಮಗೆ ನಿಮ್ಮ ಮಗುವಿನ ಭವಿಷ್ಯ ಹೇಗೆ ಮುಖ್ಯವೋ ಹಾಗೆಯೇ ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯು ನನಗೆ ಒಂದೇ ಸಮಾನ, ಒಬ್ಬರನ್ನು ವಿಶೇಷವಾಗಿ ನೋಡಲು ಸಾಧ್ಯವಿಲ್ಲ ಎಂದು ಉತ್ತರಿಸಿಬಿಟ್ಟರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಮೆಂಟ್ಗಳು ಬಂದಿದ್ದು, ನಿರ್ದೇಶಕರ ಉತ್ತರವೇ ಸರಿ ಎಂದಿದ್ದಾರೆ.
ಯಾರು ಟಾಪರ್ ಅಥವಾ ಯಾರು ಚೆನ್ನಾಗಿ ಓದುವುದಿಲ್ಲ ಎಂಬುದು ಮುಖ್ಯವಲ್ಲ, ಅಂತ್ಯವಾಗಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಭವಿಷ್ಯವೇ ಮುಖ್ಯ ಎಂದು ಕಮೆಂಟ್ಗಳನ್ನು ಮಾಡಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ