Earthquake: ಮ್ಯಾನ್ಮಾರ್‌ನಲ್ಲಿ 5.2 ತೀವ್ರತೆಯ ಭೂಕಂಪ, ಈಶಾನ್ಯ ಭಾಗದಲ್ಲಿ ಕಂಪನ

ಇಂದು (ಶುಕ್ರವಾರ) ಮುಂಜಾನೆ 3:52 ಕ್ಕೆ ಮ್ಯಾನ್ಮಾರ್‌ನಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ. ಅಸ್ಸಾಂ, ಮಣಿಪುರ ಮತ್ತು ಮೇಘಾಲಯ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳಲ್ಲಿ ಕಂಪನದ ಅನುಭವವಾಗಿದೆ.

Earthquake: ಮ್ಯಾನ್ಮಾರ್‌ನಲ್ಲಿ 5.2 ತೀವ್ರತೆಯ ಭೂಕಂಪ, ಈಶಾನ್ಯ ಭಾಗದಲ್ಲಿ ಕಂಪನ
Earthquake
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 30, 2022 | 11:37 AM

ಮ್ಯಾನ್ಮಾರ್‌: ಇಂದು (ಶುಕ್ರವಾರ) ಮುಂಜಾನೆ 3:52 ಕ್ಕೆ ಮ್ಯಾನ್ಮಾರ್‌ನಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ. ಅಸ್ಸಾಂ, ಮಣಿಪುರ ಮತ್ತು ಮೇಘಾಲಯ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ಬರ್ಮಾದಿಂದ 162 ಕಿಮೀ ವಾಯುವ್ಯಕ್ಕೆ 140 ಕಿಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದ ಕಾಮ್‌ಜಾಂಗ್‌ನಲ್ಲಿ 3.8 ತೀವ್ರತೆಯ ಮತ್ತೊಂದು ಭೂಕಂಪವು ಈ ಪ್ರದೇಶವನ್ನು ಕಂಡುಬಂದಿದೆ. ಇದು ಬೆಳಗ್ಗೆ 7.53ಕ್ಕೆ ವರದಿಯಾಗಿದೆ. ಆದರೆ, ಇದುವರೆಗೆ ಈ ಬಗ್ಗೆ ಯಾವುದೇ ಕಾರಣಗಳು ವರದಿಯಾಗಿಲ್ಲ. ಈಶಾನ್ಯ ಪ್ರದೇಶವು ಹೆಚ್ಚಿನ ಭೂಕಂಪನ ವಲಯ ಎಂದು ಗುರುತಿಸಲಾಗಿದೆ. ಇದರಿಂದಾಗಿ ಭೂಕಂಪಗಳು ಇಲ್ಲಿ ಆಗಾಗ್ಗೆ ಸಂಭವಿಸುತ್ತವೆ.

ನಿನ್ನೆ 4.5 ತೀವ್ರತೆಯ ಭೂಕಂಪವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಿಗ್ಲಿಪುರದಿಂದ 150 ಕಿಮೀ ಉತ್ತರದಲ್ಲಿ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

Published On - 11:37 am, Fri, 30 September 22