ವೀಸಾಗೆ ಕಾಯುವ ಸಮಯ ಕಡಿಮೆ ಮಾಡಲು ಕ್ರಮ; ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಲಿದೆ ಯುಎಸ್ ರಾಯಭಾರಿ ಕಚೇರಿ
ವಾಷಿಂಗ್ಟನ್ ನಮಗೆ ತಾತ್ಕಾಲಿಕವಾಗಿ ಸಿಬ್ಬಂದಿ ಕಳುಹಿಸುತ್ತಿದೆ. ನಾವು ಇತರ ದೊಡ್ಡ ರಾಯಭಾರ ಕಚೇರಿಗಳಿಂದ ತಾತ್ಕಾಲಿಕ ಸಿಬ್ಬಂದಿಗಳನ್ನ ಪಡೆಯಲಿದ್ದೇವೆ. ಆದ್ದರಿಂದ, ನಾವು ಈಗ ಮತ್ತು ಮುಂದಿನ ದಿನಗಳಲ್ಲಿ ಸ್ವಲ್ಪ ಹೆಚ್ಚು ನಿಭಾಯಿಸಲು ಸಾಧ್ಯವಾಗುವ ಹಂತಕ್ಕೆ ಬರಬೇಕು
ದೆಹಲಿ: ವೀಸಾಗಳಿಗಾಗಿ (Visa) ಹೆಚ್ಚು ಹೊತ್ತು ಕಾಯುವ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ (Antony Blinken) ಅವರ ಗಮನಕ್ಕೆ ತಂದ ಕೆಲವೇ ದಿನಗಳಲ್ಲಿ ದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಈ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಈ ಬಗ್ಗೆ ನವದೆಹಲಿಯಲ್ಲಿ ಯುಎಸ್ ರಾಯಭಾರ ಕಚೇರಿಯಲ್ಲಿ ಕಾನ್ಸುಲರ್ ವ್ಯವಹಾರಗಳ ಸಚಿವ ಡಾನ್ ಹೆಫ್ಲಿನ್ ಗುರುವಾರ ಮಾತನಾಡಿ, ಭಾರತದಲ್ಲಿನ ಕಾನ್ಸುಲೇಟ್‌ಗಳಲ್ಲಿ ಸಿಬ್ಬಂದಿ ಸಂಖ್ಯೆ ಒಂದು ವರ್ಷದೊಳಗೆ ಕೋವಿಡ್ ಪೂರ್ವ ಮಟ್ಟಕ್ಕೆ ಮರಳುವ ನಿರೀಕ್ಷೆಯಿದೆ. ತಾತ್ಕಾಲಿಕ ಸಿಬ್ಬಂದಿಯನ್ನು ಪಡೆಯುವುದು ಮತ್ತು ಹೆಚ್ಚಿನ ಡ್ರಾಪ್ ಬಾಕ್ಸ್‌ಗಳನ್ನು ಅನುಮತಿಸುವುದು (ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ಈಗಾಗಲೇ ಯುಎಸ್ ವೀಸಾವನ್ನು ಹೊಂದಿರುವವರಿಗೆ ಯಾವುದೇ ಅಪಾಯಿಂಟ್‌ಮೆಂಟ್ ಅಗತ್ಯವಿಲ್ಲ) ಮಧ್ಯಂತರದಲ್ಲಿ ಕಾಯುವ ಅವಧಿಯನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ಮುಂದಿನ ಕೆಲವು ವಾರಗಳಲ್ಲಿ ಎಚ್ ಮತ್ತು ಎಲ್ ವರ್ಕರ್ ವೀಸಾ ವರ್ಗಗಳಿಗೆ 1 ಲಕ್ಷ ನೇಮಕಾತಿಗಳನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 2023ರ ಹೊತ್ತಿಗೆ ಸಿಬ್ಬಂದಿಗಳ ಸಂಖ್ಯೆ ಶೇ100ಕ್ಕೆ ತಲುಪಲಿದೆ: ಅಮೆರಿಕ ರಾಯಭಾರ ಕೋವಿಡ್ ಕಾಲದಲ್ಲಿ ವೀಸಾ ಕಾಯುವ ಅವಧಿ ದೀರ್ಘವಾಗಿರುವುದರಿಂದಾಗಿ ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯು ಸಿಬ್ಬಂದಿಯನ್ನು ಒಂದು ವರ್ಷದೊಳಗೆ ಕೋವಿಡ್ ಪೂರ್ವದ ಮಟ್ಟಕ್ಕೆ ಅಂದರೆ ಶೇ 100 ಮಾಡಬೇಕು ಎಂದು ಹೇಳಿದೆ. ಈ ವಾರದ ಆರಂಭದಲ್ಲಿ, ತಮ್ಮ ಯುಎಸ್ ಪ್ರತಿನಿಧಿಗಳೊಂದಿಗೆ ಈ ವಿಷಯ ಚರ್ಚಿಸಿದಾಗ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ಅಧಿಕಾರಿಗಳಿಗೆ ಭಾರತ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಕೋವಿಡ್ ನಂತರ ಚೇತರಿಸಿಕೊಂಡಿದ್ದು ಸಿಬ್ಬಂದಿ ಸಮಸ್ಯೆ ಪರಿಹರಿಸಲಾಗುತ್ತದೆ.. ಕೋವಿಡ್‌ನ ಉತ್ತುಂಗದಲ್ಲಿ ಮತ್ತು ಸ್ವಲ್ಪ ಸಮಯದ ನಂತರ, ನಾವು ಹೊಂದಿರಬೇಕಾದ (ವೀಸಾ ಸಿಬ್ಬಂದಿ) ಶೇ 50 ಅನ್ನು ಮಾತ್ರ ಹೊಂದಿದ್ದೇವೆ. ಈಗ , ನಾವು ಸುಮಾರು ಶೇ70 ರಷ್ಟಿದ್ದೇವೆ. ಮುಂದಿನ ವರ್ಷ ಈ ಸಮಯಕ್ಕೆ ಸ್ವಲ್ಪ ಮೊದಲು ನಾವು ಸುಮಾರು ಶೇ 100 ಸಿಬ್ಬಂದಿಯಾಗಲಿದ್ದೇವೆ .ಆ ಸಮಯದಲ್ಲಿ ನಾವು ಶೇ100 ನಷ್ಟು ಪ್ರಕರಣಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ಕಾನ್ಸುಲರ್ ವ್ಯವಹಾರಗಳ ಸಚಿವ ಸಲಹೆಗಾರ ಡಾನ್ ಹೆಫ್ಲಿನ್ ಹೇಳಿದರು.
ವಾಷಿಂಗ್ಟನ್ ನಮಗೆ ತಾತ್ಕಾಲಿಕವಾಗಿ ಸಿಬ್ಬಂದಿ ಕಳುಹಿಸುತ್ತಿದೆ. ನಾವು ಇತರ ದೊಡ್ಡ ರಾಯಭಾರ ಕಚೇರಿಗಳಿಂದ ತಾತ್ಕಾಲಿಕ ಸಿಬ್ಬಂದಿಗಳನ್ನ ಪಡೆಯಲಿದ್ದೇವೆ. ಆದ್ದರಿಂದ, ನಾವು ಈಗ ಮತ್ತು ಮುಂದಿನ ದಿನಗಳಲ್ಲಿ ಸ್ವಲ್ಪ ಹೆಚ್ಚು ನಿಭಾಯಿಸಲು ಸಾಧ್ಯವಾಗುವ ಹಂತಕ್ಕೆ ಬರಬೇಕು ಎಂದು ಹೆಫ್ಲಿನ್ ಹೇಳಿದ್ದಾರೆ.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವೆಬ್‌ಸೈಟ್ ಪ್ರಕಾರ, ಮುಂಬೈ ಮತ್ತು ದೆಹಲಿಯಲ್ಲಿ ಸಂದರ್ಶಕರ ವೀಸಾಕ್ಕಾಗಿ ಅಪಾಯಿಂಟ್‌ಮೆಂಟ್ ಕಾಯುವ ಸಮಯ ಈಗ ಕ್ರಮವಾಗಿ 848 ಮತ್ತು 833 ದಿನಗಳು ಆಗಿದ್ದು, ಬೀಜಿಂಗ್‌ನಲ್ಲಿ 2 ಮತ್ತು ಗುವಾಂಗ್‌ಝೌನಲ್ಲಿ 18 ದಿನಗಳಾಗಿವೆ. B1 (ವ್ಯವಹಾರ) ಮತ್ತು B2 (ಸಂದರ್ಶಕರು) ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು ಹೆಚ್ಚುಕಾಯಬೇಕು ಎಂದು ಹೇಳಿದ ಅವರು ದಿನ ಕೆಲವು ತಿಂಗಳುಗಳಲ್ಲಿ ನಾವು ಅದನ್ನು ಕಡಿಮೆ ಮಾಡಲು ಕೆಲಸ ಮಾಡಲಿದ್ದೇವೆ. ಸ್ವಲ್ಪ ಕಾಯಿರಿ, ನಾವು ಚೇತರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಅಮೆರಿಕದಲ್ಲಿ H1 ವೀಸಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಹಿಂದಿರುಗುವ ಮೊದಲು ತಮ್ಮ ಪಾಸ್‌ಪೋರ್ಟ್‌ಗಳನ್ನು ಸ್ಟ್ಯಾಂಪ್ ಮಾಡಬೇಕಾಗಿರುವುದರಿಂದ ಮನೆಗೆ ಬರಲು ಸಾಧ್ಯವಾಗಲಿಲ್ಲ. ಅವರ ಬಗ್ಗೆ ಮಾತನಾಡಿದ ಹೆಫ್ಲಿನ್ ಕೋವಿಡ್ ಪ್ರಾರಂಭವಾದಾಗಿನಿಂದ ಮನೆಗೆ ಬಂದು ಅವರ ಕುಟುಂಬವನ್ನು ನೋಡಲು ಸಾಧ್ಯವಾಗದ H ಮತ್ತು L ವೀಸಾ ಹೊಂದಿರುವ ಜನರು ಅಮೆರಿಕದಲ್ಲಿದ್ದಾರೆ. ನಾವು ಅವರ ಬಗ್ಗೆ ಸಾಕಷ್ಟು ಸಹಾನುಭೂತಿ ಹೊಂದಿದ್ದೇವೆ. ಈ ವರ್ಗದ ವೀಸಾಗಳಿಗಾಗಿ ಒಂದು ಲಕ್ಷ ನೇಮಕಾತಿಗಳನ್ನು ಮಾಡುತ್ತೇವೆ.
ಮುಂಬೈನಲ್ಲಿನ ನಮ್ಮ ವಲಸಿಗರ ವೀಸಾ ಕಾರ್ಯಾಚರಣೆಯು ಬಾಕಿ ಉಳಿದ ವೀಸಾ ಅರ್ಜಿಗಳನ್ನು ಕ್ಲಿಯರ್ ಮಾಡುತ್ತಿದೆ. ಕೋವಿಡ್ ಸಾಂಕ್ರಾಮಿಕಕ್ಕಿಂತ ಮುನ್ನ ಮುಂಬೈ ವಿಶ್ವದಲ್ಲೇ ಅತಿ ಹೆಚ್ಚು ಕರೆಸಿಕೊಳ್ಳುವ ದೊಡ್ಡ ವಲಸೆಗಾರರ ವೀಸಾ ಪೋಸ್ಟ್‌ಗಳಲ್ಲಿ ಒಂದಾಗಿದೆ. ಮುಂದಿನ ವರ್ಷದಲ್ಲಿ ಅವರು ಕೋವಿಡ್-ಪೂರ್ವಕ್ಕೆ ಹಿಂತಿರುಗುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೆಫ್ಲಿನ್ ಹೇಳಿದ್ದಾರೆ.