ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ವೃತ್ತಿಬದುಕು ರೂಪಿಸಿಕೊಳ್ಳಲು ವಿದ್ಯಾರ್ಥಿನಿ ಕೇಳಿದ ಸಲಹೆಗೆ ಸಚಿವ ಜೈಶಂಕರ್ ನೀಡಿದ ಉತ್ತರ ಹೀಗಿದೆ!

ಅಂತರರಾಷ್ಟ್ರೀಯ ಸಂಬಂಧಗಳ ವಿಷಯಕ್ಕೆ ಬಂದರೆ ವಿದ್ಯಾರ್ಥಿಗಳು ಭಾರತದ ವಿದೇಶಾಂಗ ಸಚಿವರನ್ನು ‘ಅತ್ಯಂತ ಸಫಲ ಸಚಿವ’ ಅಂತ ಪರಿಗಣಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಂದರಲ್ಲಿ ವ್ಯಕ್ತವಾಗಿರುವ ಯುವಕರ ಭಾವನೆಗಳಲ್ಲಿ ಇದನ್ನು ಅರ್ಥಮಾಡಿಕೊಳ್ಳಬಹುದು.

ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ವೃತ್ತಿಬದುಕು ರೂಪಿಸಿಕೊಳ್ಳಲು ವಿದ್ಯಾರ್ಥಿನಿ ಕೇಳಿದ ಸಲಹೆಗೆ ಸಚಿವ ಜೈಶಂಕರ್ ನೀಡಿದ ಉತ್ತರ ಹೀಗಿದೆ!
ವಿದೇಶಾಂಗ ಸಚಿವ ಎಸ್ ಜೈಶಂಕರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 30, 2022 | 2:32 PM

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರ ಜನಪ್ರಿಯತೆ ದಿನೇದಿನೆ ಹೆಚ್ಚುತ್ತಿದೆ ಅನ್ನೋದರಲ್ಲಿ ಸಂದೇಹವೇ ಬೇಡ. ವಿದೇಶ ಪ್ರವಾಸಗಳಲ್ಲಿ ಮಾಧ್ಯಮ ಮತ್ತು ಜನರೊಂದಿಗೆ ಅವರ ಸಂವಾದ ಮತ್ತು ಜನ ಕೇಳುವ ಪ್ರಶ್ನೆಗಳಿಗೆ ಅವರು ನೀಡುವ ಹಾಸ್ಯಾಪ್ರಜ್ಞೆ ಮತ್ತು ಅಷ್ಟೇ ಬುದ್ಧಿವಂತಿಕೆಯ (witty) ಉತ್ತರಗಳು ಜನರನ್ನು ಅವರತ್ತ ಮೆಚ್ಚಿಗೆಯಿಂದ ನೋಡುವಂತೆ ಮಾಡಿವೆ. ಪಶ್ಚಿಮ ರಾಷ್ಟ್ರಗಳು ಅಥವಾ ಚೀನಾದೊಂದಿಗಿನ (China) ಸಂಬಂಧಗಳ ಹಿನ್ನೆಲೆಯಲ್ಲಿ ಭಾರತದ ನಿಲುವು ಆಗಿರಬಹುದು ಅಥವಾ ಮತ್ಯಾವುದೇ ಜಾಗತಿಕ ಸಮಸ್ಯೆಯ ಬಗ್ಗೆ ಕೇಳಿದ ಪ್ರಶ್ನೆಯಾಗಿರಬಹುದು, ಜೈಶಂಕರ್ ಸಮರ್ಪಕ ಉತ್ತರ ನೀಡಿ ಭೇಷ್ ಅನಿಸಿಕೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ ಯುವ ವಿದ್ಯಾರ್ಥಿಗಳು ಈ ಜನಪ್ರಿಯ ನಾಯಕನೆಡೆ ಅಭಿಮಾನದಿಂದ ನೋಡುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅಂತರರಾಷ್ಟ್ರೀಯ ಸಂಬಂಧಗಳ ವಿಷಯಕ್ಕೆ ಬಂದರೆ ವಿದ್ಯಾರ್ಥಿಗಳು ಭಾರತದ ವಿದೇಶಾಂಗ ಸಚಿವರನ್ನು ‘ಅತ್ಯಂತ ಸಫಲ ಸಚಿವ’ ಅಂತ ಪರಿಗಣಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಂದರಲ್ಲಿ ವ್ಯಕ್ತವಾಗಿರುವ ಯುವಕರ ಭಾವನೆಗಳಲ್ಲಿ ಇದನ್ನು ಅರ್ಥಮಾಡಿಕೊಳ್ಳಬಹುದು.

ಶಾಲಾ ಬಾಲಕಿಯೊಬ್ಬಳು ಸಚಿವರಿಗೆ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದಂತೆ ವೃತ್ತಿಜೀವನ ರೂಪಿಸಿಕೊಳ್ಳುವ ಕುರಿತು ಸಲಹೆ ಕೇಳುತ್ತಿರುವುದನ್ನು ಈ ವಿಡಿಯೋನಲ್ಲಿ ನೋಡಬಹುದು. ರಾಜಕಾರಣಿಯಾಗುವ ಮೊದಲು ಆಡಳಿತಾತ್ಮಕ ಸೇವೆಗಳ ಅಧಿಕಾರಿಯಾಗಿದ್ದ ಜೈಶಂಕರ್ ಅವರ ವೃತ್ತಿಜೀವನವನ್ನು ಕೊಂಡಾಡಿರುವ ವಿದ್ಯಾರ್ಥಿನಿಯು ಅಂತರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಸಚಿವರ ಮಾರ್ಗದರ್ಶನ ಮತ್ತು ಸಲಹೆಯನ್ನು ಕೋರುತ್ತಾಳೆ.

ಅವಳ ಪ್ರಶ್ನೆಗೆ ಮುಗುಳ್ನಗುವ ಜೈಶಂಕರ್ ಅವರು ಪ್ರಶ್ನೆಗೆ ಉತ್ತರಿಸಲು ಬಹುಶಃ ತಾನು ಸೂಕ್ತ ವ್ಯಕ್ತಿಯಲ್ಲ ಅಂತ ಹೇಳಿ, ‘ರಾಜ್ಯಶಾಸ್ತ್ರ’ ತನ್ನ ಬದುಕಿನ ಮಾರ್ಗ ಅನ್ನೋದನ್ನು ಕಂಡುಕೊಳ್ಳುವ ಮೊದಲು ತಾನು ಹಲವಾರು ಪ್ರಯೋಗಗಳನ್ನು ನಡೆಸಿದ್ದೆ ಅನ್ನುತ್ತಾರೆ.

‘ನಿಜ ಹೇಳಬೇಕೆಂದರೆ, ನಾನೊಬ್ಬ ಕೆಟ್ಟ ಗೈಡ್’ ಎಂದು ಅವರು ಹೇಳುತ್ತಾರೆ. ‘ನಾನು ಏನು ಮಾಡಬೇಕು ಅನ್ನೋದರ ಬಗ್ಗೆ ನನ್ನಲ್ಲಿ ಒಂದು ಸಷ್ಟ ಯೋಜನೆಯೇ ಇರಲಿಲ್ಲ. ನಾನು ಐಐಟಿಯಲ್ಲಿ ಕೆಲವು ತಿಂಗಳು ವ್ಯಾಸಂಗ ಮಾಡಿದೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ನೋಂದಾಯಿಸಿಕೊಂಡಿದ್ದಾಗ ಈ ರಸಾಯನಶಾಸ್ತ್ರ ಮತ್ತು ನನ್ನ ನಡುವೆ ಒಂದು ನೈಸರ್ಗಿಕ ಅನುಬಂಧ ಇಲ್ಲ ಅಂತ ಅರಿತುಕೊಂಡೆ. ಹಾಗಾಗಿ ನಾನು ಅಂತಿಮವಾಗಿ ರಾಜ್ಯಶಾಸ್ತ್ರವನ್ನು ಒಂದು ವಿಷಯವಾಗಿ ಆಯ್ಕೆ ಮಾಡಿಕೊಂಡಾಗ ತಿಂಗಳುಗಳಲ್ಲಿ ಮುಗಿಸಬೇಕಿದ್ದ ಅಧ್ಯಯನವನ್ನು ಕೆಲವು ವಾರಗಳಲ್ಲಿ ಮುಗಿಸಿಬಿಟ್ಟೆ,’ ಎಂದು ಜೈಶಂಕರ್ ಹೇಳುತ್ತಾರೆ.

ವ್ಯಾಸಂಗ ಮಾಡುವಾಗ ನಿಮ್ಮಲ್ಲಿರುವ ಅಭಿರುಚಿಯನ್ನು ಬೆನ್ನಟ್ಟುವುದು ಅತ್ಯವಶ್ಯಕವಾಗಿದೆ ಅನ್ನೋದನ್ನು ಅವರು ಪುನರುಚ್ಛರಿಸುತ್ತಾರೆ. ರಾಜ್ಯಶಾಸ್ತ್ರ ವ್ಯಾಸಂಗ ಮಾಡುವಾಗ ತನಗೆ ಅಧ್ಯಯನ ಹೊರೆ ಅನಿಸಲೇ ಎಂದು ಹೇಳುವ ಜೈಶಂಕರ್, ವಿದ್ಯಾರ್ಥಿಗಳು ತಮ್ಮ ಕನಸುಗಳ ಬೆನ್ನಟ್ಟಬೇಕು, ಎನ್ನುತ್ತಾರೆ.

‘ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಜಾಸ್ತಿ ಇದೆಯೋ ಅದನ್ನು ಅದನ್ನೇ ಆಧ್ಯಯನ ಮಾಡಿ. ನಿಮ್ಮ ಅತ್ಯಾಸಕ್ತಿಯ ವಿಷಯವನ್ನೇ ವೃತ್ತಿಯನ್ನಾಗಿ ಆರಿಸಿಕೊಂಡರೆ ಬದುಕಿನಲ್ಲಿ ಅದ್ಭುತವಾದ ಯಶ ಕಾಣುತ್ತೀರಿ ಎಂದು ನಾನು ಹೇಳಬಲ್ಲೆ,’ ಎಂದು ಸಚಿವರು ಹೇಳುತ್ತಾರೆ.

ವಿದೇಶಾಂಗ ಸಚಿವ ಜೈಶಂಕರ್ ಸದ್ಯಕ್ಕೆ 10-ದಿನ ಯುಎಸ್ ಪ್ರವಾಸದಲ್ಲಿದ್ದಾರೆ. ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಅವರು ಶ್ರಮಿಸುತ್ತಿರುವಾಗಲೇ ಆ ದೇಶದ ಬಗ್ಗೆ ಅವರ ತೀಕ್ಷ್ಣವೆನಿಸುವ ಕಾಮೆಂಟ್ ಗಳು ಭಾರಿ ಯಶ ಕಾಣುತ್ತಿವೆ.