ವಂದೇ ಭಾರತ್ ಪ್ರಯಾಣದ ಸುಖ ಅರಿತವರು ಆಮೇಲೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿ ಅದರ ಖುಷಿ ಅರಿತರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಂದೇ ಭಾರತ್ ಪ್ರಯಾಣದ ಸುಖ ಅರಿತವರು ಆಮೇಲೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ
Narendra Modi
TV9kannada Web Team

| Edited By: Nayana Rajeev

Sep 30, 2022 | 2:40 PM

ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿ ಅದರ ಖುಷಿ ಅರಿತರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಚಲಿಸಿದರೆ ವಿಮಾನದಲ್ಲಿ ಹೋಗುವ ಮನಸ್ಸಾಗುವುದಿಲ್ಲ ಎಂದರು.

ಅಹಮದಾಬಾದ್ ಮಹಾನಗರ ಇಂದು ನನ್ನ ಹೃದಯ ಗೆದ್ದಿದೆ, ಅವಳಿ ನಗರವು ಹೇಗೆ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಗಾಂಧಿನಗರ-ಅಹಮದಾಬಾದ್ ಉತ್ತಮ ಉದಾಹರಣೆಯಾಗಿದೆ. ಅದೇ ಮಾದರಿಯನ್ನು ಅನುಸರಿಸಿ ಗುಜರಾತ್‌ನಲ್ಲಿ ವಿವಿಧ ಅವಳಿ ನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಜನರು ಇಲ್ಲಿಯವರೆಗೆ ನ್ಯೂಯಾರ್ಕ್-ನ್ಯೂಜೆರ್ಸಿ ಬಗ್ಗೆ ಮಾತನಾಡುತ್ತಿದ್ದರು. ನನ್ನ ಭಾರತವನ್ನು ಬಿಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹೇಳಿದ್ದಾರೆ.

ವಿಮಾನಕ್ಕೆ ಹೋಲಿಸಿದರೆ ವಂದೇ ಭಾರತ್ ರೈಲಿನೊಳಗೆ 100 ಪಟ್ಟು ಕಡಿಮೆ ಶಬ್ದ ಮಾಡುತ್ತದೆ.. ವಿಮಾನದಲ್ಲಿ ಪ್ರಯಾಣಿಸುವ ಜನರು ಅದನ್ನು ಅನುಭವಿಸಿದ ನಂತರ ವಂದೇ ಭಾರತ್ ರೈಲಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ.

ತಾನು ಅಹಮದಾಬಾದ್‌ನಲ್ಲಿ ಬೆಳೆದಿದ್ದೇನೆ ಎಂದು ಹೇಳಿದ ಪ್ರಧಾನಿ ಮೋದಿ, ವಿಶೇಷವಾಗಿ ನವರಾತ್ರಿ ಸಮಯದಲ್ಲಿ ಇಂತಹ ಬೃಹತ್ ಸಭೆಯನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಅಹಮದಾಬಾದ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ನಾನು ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಹಮದಾಬಾದ್ ಮೆಟ್ರೋ ಮೂಲಕ ಪ್ರಯಾಣಿಸಿದ್ದೇನೆ ಎಂದು ಹೇಳಿದರು.

ಇದು ಕೆಲವು ನಿಮಿಷಗಳ ಪ್ರಯಾಣ ಆದರೆ ನನಗೆ ಇದು ಅತ್ಯಂತ ಹೆಮ್ಮೆಯ ಸಮಯ ಎಂದು ಅವರು ಹೇಳಿದರು, ನಿಗದಿತ ಸಮಯಕ್ಕಿಂತ 20 ನಿಮಿಷಗಳ ಮೊದಲು ತಲುಪಿದೆವು ಎಂದು ಹೇಳಿದರು.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada