ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಯುವಕರನ್ನು ಬ್ರೈನ್ವಾಶ್ ಮಾಡಿದ ಆರೋಪದಲ್ಲಿ ಜೈಲಿನಲ್ಲಿದ್ದ ಅರ್ಷಿ ಖುರೇಷಿ ಖುಲಾಸೆ
ಮುಂಬೈ ಮೂಲದ ಅಬ್ದುಲ್ ಎಂಬಾತ ತನ್ನ ಮಗ ಅಶ್ಫಾಕ್ ಮಜೀದ್ಗೆ ಅರ್ಷಿ ಬ್ರೈನ್ ವಾಶ್ ಮಾಡಿದ್ದಾನೆ ಎಂಬ ಆರೋಪದ ಆಧಾರದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯುವಕರನ್ನು ಇಸ್ಲಾಮಿಕ್ ಸ್ಟೇಟ್ (IS) ಭಯೋತ್ಪಾದಕ ಸಂಘಟನೆಗೆ ಸೇರುವಂತೆ ಉಪದೇಶ ಮಾಡಿದ ಆರೋಪದಲ್ಲಿ ಜೈಲಿನಲ್ಲಿದ್ದ ಅರ್ಷಿ ಖುರೇಷಿಯನ್ನು ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ಈತನ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. 2016 ರಿಂದ ಜೈಲಿನಲ್ಲಿರುವ ಖುರೇಷಿ ವಿವಾದಿತ ನಾಯಕ ಝಾಕಿರ್ ನಾಯ್ಕ್ ಸ್ಥಾಪಿಸಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ನಲ್ಲಿ ಅತಿಥಿ ಸಂಬಂಧ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. ಮುಂಬೈ ಮೂಲದ ಅಬ್ದುಲ್ ಎಂಬಾತ ತನ್ನ ಮಗ ಅಶ್ಫಾಕ್ ಮಜೀದ್ಗೆ ಅರ್ಷಿ ಬ್ರೈನ್ ವಾಶ್ ಮಾಡಿದ್ದಾನೆ ಎಂಬ ಆರೋಪದ ಆಧಾರದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಶೇಷ ನ್ಯಾಯಾಧೀಶ ಎ ಎಂ ಪಾಟೀಲ್ ಶುಕ್ರವಾರ ತೀರ್ಪು ಪ್ರಕಟಿಸಿದ್ದು, ಖುರೇಷಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ಸಿಗದ ಕಾರಣ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗುತ್ತಿದೆ ಎಂದು ಹೇಳಿದರು. ಖುರೇಷಿ ಮತ್ತು ಇತರ ಇಬ್ಬರ ವಿರುದ್ಧ ದೂರು ನೀಡಲು ಅಬ್ದುಲ್ ಅವರು ಆಗಸ್ಟ್ 2016 ರಲ್ಲಿ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ಅವರು ತನ್ನ ಮಗ ಅಶ್ಫಾಕ್, ತನ್ನ ಪತ್ನಿ ಮತ್ತು ಮಗಳನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಗೆ ಸೇರ್ಪಡೆ ಮಾಡಲು ಅರ್ಷಿ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
2017 ರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದು ಖುರೇಷಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ಆತನೊಂದಿಗೆ ಬಂಧಿತರಾಗಿರುವ ಇತರ ಇಬ್ಬರ ವಿರುದ್ಧ ತಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಎನ್‌ಐಎ ಹೇಳಿದ್ದರಿಂದ ಅವರನ್ನು ಚಾರ್ಜ್‌ಶೀಟ್ ಮಾಡಿರಲಿಲ್ಲ. ಖುರೇಷಿ ಮುಂಬೈನಲ್ಲಿದ್ದಾಗ ಅಶ್ಫಾಕ್ ಸಂಪರ್ಕಕ್ಕೆ ಬಂದಿದ್ದ ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಹೇಳಿಕೊಂಡಿತ್ತು.
ವಿಚಾರಣೆ ವೇಳೆ ಸಂಬಂಧಿಕರು ಸೇರಿದಂತೆ 57 ಸಾಕ್ಷಿದಾರರು ಖುರೇಷಿ ತಮ್ಮನ್ನು ಬ್ರೈನ್ ವಾಶ್ ಮಾಡಿದ್ದಾರೆ ಎಂದು ಆರೋಪಿಸಿದ್ದು ಇದರಲ್ಲಿ 8 ಮಂದಿ ಹಗೆತನಹೊಂದಿದ್ದರು ಎಂದು ತಿಳಿದುಬಂದಿದೆ. ಖುರೇಷಿ ಯುವಕರ ಮೇಲೆ ಪ್ರಭಾವ ಬೀರಿದ್ದಾರೆ ಅಥವಾ ಅವರು ಐಎಸ್‌ಗೆ ಸೇರಿದ್ದಾರೆ ಎಂಬುದನ್ನು ತೋರಿಸಲು ಪ್ರಾಸಿಕ್ಯೂಷನ್‌ನಿಂದ ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿವಾದಿ ವಕೀಲರು ಸಲ್ಲಿಸಿದ್ದರು. ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಖುರೇಷಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
Published On - 4:53 pm, Fri, 30 September 22