Mohan Bhagwat: ನಾನ್ ವೆಜ್ ಒಂದು ತಪ್ಪು ಆಹಾರ, ಮಾಂಸ ತಿನ್ನುವವರಿಗೆ ಮೋಹನ್ ಭಾಗವತ್ ಹೇಳಿದ್ದೇನು?
ನೀವು ತಪ್ಪು ರೀತಿಯ ಆಹಾರವನ್ನು ಸೇವಿಸಿದರೆ, ಅದು ನಿಮ್ಮನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತದೆ. ಹೆಚ್ಚು ಹಿಂಸೆಯನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬಾರದು. ಇದು ಭಾರತ ಆಹಾರ ಪದ್ಧತಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಅವರು ಮಾಂಸಹಾರವನ್ನು ಸೇವೆನೆ ಮಾಡುವುದರಿಂದ ಅತಿಯಾದ ಹಿಂಸಾಚಾರವನ್ನು ಮಾಡುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಭಾರತ್ ವಿಕಾಸ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು ಮಾತನಾಡಿದ ಅವರು ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದ್ದರು.
ಮೋಹನ್ ಭಾಗವತ್ ಅವರು ಪಿಟಿಐ ವರದಿಯನ್ನು ಉಲ್ಲೇಖಿಸಿ, ನೀವು ತಪ್ಪು ರೀತಿಯ ಆಹಾರವನ್ನು ಸೇವಿಸಿದರೆ, ಅದು ನಿಮ್ಮನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತದೆ. ಹೆಚ್ಚು ಹಿಂಸೆಯನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬಾರದು. ಪಾಶ್ಚಿಮಾತ್ಯ ದೇಶಗಳಲ್ಲಿ ಮಾಂಸಾಹಾರಿ ತಿನ್ನುವವರ ಮತ್ತು ಭಾರತದಲ್ಲಿನ ಮಾಂಸಾಹಾರಿ ನಡುವಿನ ಹೋಲಿಕೆಯನ್ನು ಮಾಡಿದ್ದಾರೆ, ವಿಶ್ವದ ಇತರೆಡೆಗಳಲ್ಲಿ ಮಾಂಸವನ್ನು ತಿನ್ನುವ ಜನರು ಭಾರತದಲ್ಲಿದ್ದಾರೆ, ಆದರೆ ನಮ್ಮ ದೇಶದಲ್ಲಿ ಮಾಂಸಾಹಾರಿಗಳು ಸಹ ಸಂಯಮವನ್ನು ಅನುಸರಿಸುತ್ತಾರೆ.
ಇಲ್ಲಿ ಮಾಂಸಾಹಾರ ಸೇವಿಸುವ ಜನರು ಇಡೀ ಶ್ರಾವಣ ಮಾಸದಲ್ಲಿ ಅದನ್ನು ತಿನ್ನುವುದಿಲ್ಲ. ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರದಂದು ಅವರು ತಿನ್ನುವುದಿಲ್ಲ. ಅವರು ತಮ್ಮ ಮೇಲೆ ಕೆಲವು ನಿಯಮಗಳನ್ನು ವಿಧಿಸುತ್ತಾರೆ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆಯ ಬಗ್ಗೆ ಪ್ರಮುಖ ಚರ್ಚೆಗಳು ನಡೆಯುತ್ತಿದೆ.
ಭಾರತವು ಶ್ರೀಲಂಕಾ, ಮಾಲ್ಡೀವ್ಸ್‌ಗೆ ಸಹಾಯ ಮಾಡಿದೆ
‘ಆಧ್ಯಾತ್ಮಿಕತೆ ಭಾರತದ ಆತ್ಮ’ ಎಂದು ಹೇಳಿದ್ದಾರೆ ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದೇಶಗಳು ಸಂಕಷ್ಟದಲ್ಲಿದ್ದಾಗ ಇತರ ದೇಶಗಳು ವ್ಯಾಪಾರ ಅವಕಾಶಗಳನ್ನು ಹುಡುಕಲು ಆಸಕ್ತಿ ಹೊಂದಿದ್ದಾಗ ಸಹಾಯ ಮಾಡಿದ್ದು ಭಾರತ ಮಾತ್ರ ಎಂದು ಹೇಳಿದರು.
ಆಧ್ಯಾತ್ಮಿಕತೆಯು ಭಾರತದ ಆತ್ಮವಾಗಿದೆ. ಭಾರತವು ಏನು ಮಾಡಬೇಕಾಗಿದೆ? ಈ ಆಧ್ಯಾತ್ಮಿಕತೆಯ ಆಧಾರದ ಮೇಲೆ ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನು ನಮ್ಮದೇ ಉದಾಹರಣೆಯ ಮೂಲಕ ಎಲ್ಲರಿಗೂ ತಿಳಿಸುವುದು ಎಂದು ಅವರು ಹೇಳಿದರು.
ಅಹಂ ಇಲ್ಲದೆ ಜೀವನ ನಡೆಸುವುದು ಭಾರತದ ಆತ್ಮ ಎಂದು ಅವರು ಹೇಳಿದರು. ಚೀನಾ, ಯುನೈಟೆಡ್ ಸ್ಟೇಟ್ಸ್ ಮತ್ತು ಪಾಕಿಸ್ತಾನದಂತಹ ದೇಶಗಳು ಶ್ರೀಲಂಕಾದಲ್ಲಿ ವ್ಯಾಪಾರ ಅವಕಾಶಗಳನ್ನು ಕಂಡಾಗ ತಮ್ಮ ಗಮನವನ್ನು ಹರಿಸಿದವು ಎಂದು ಅವರು ಹೇಳಿದರು.
Published On - 6:25 pm, Fri, 30 September 22