ಜಾರ್ಖಂಡ್‌: ಮಕ್ಕಳ ಮೇಲೆ ಶಿಕ್ಷಕನ ಕ್ರೌರ್ಯ; 13 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಜಾರ್ಖಂಡ್‌ನ ಗುಮ್ಲಾದ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಜಾರ್ಖಂಡ್‌: ಮಕ್ಕಳ ಮೇಲೆ ಶಿಕ್ಷಕನ ಕ್ರೌರ್ಯ; 13 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಸಾಂಧರ್ಬಿಕ ಚಿತ್ರ
TV9kannada Web Team

| Edited By: Vivek Biradar

Sep 30, 2022 | 8:49 PM

ರಾಂಚಿ: ಜಾರ್ಖಂಡ್‌ನ ಗುಮ್ಲಾದ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಶಿಕ್ಷಕ 13 ವಿದ್ಯಾರ್ಥಿಗಳಿಗೆ ಮರದ ಬೆತ್ತದಿಂದ ಥಳಿಸಿದ್ದು, ಏಟು ತಿಂದ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿಕ್ಷಕ 6 ನೇ ತರಗತಿಯ 13 ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ಥಳಿಸಿದ್ದಾನೆ. ಇದರಿಂದ ಗಾಯಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಇಂಡಿಯಾ ಡಾಟ್​ ಕಾಮ್​ ವರದಿ ಮಾಡಿದೆ. ಗುಮ್ಲಾದ ಸೈಂಟ್ ಮೈಕೆಲ್ ಶಾಲೆಯ ವಿಕಾಸ್ ಸಿರಿಲ್ ಎಂಬ ಶಿಕ್ಷಕ, 6 ನೇ ತರಗತಿಯ ವಿದ್ಯಾರ್ಥಿಗಳು ತನ್ನ ಆದೇಶದ ಮೇರೆಗೆ ನೃತ್ಯ ಮಾಡಲು ನಿರಾಕರಿಸಿದಾಗ ಕೋಪಗೊಂಡು ಥಳಿಸಿದ್ದಾನೆ.

ಶಿಕ್ಷಕರು ಪ್ರಾಣಿಗಳಂತೆ ವರ್ತಿಸುತ್ತಾರೆ: ಪೋಷಕರು

ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ಶಿಕ್ಷಕರು ತಮ್ಮ ಮಕ್ಕಳೊಂದಿಗೆ ‘ಪ್ರಾಣಿ’ಗಳಂತೆ ವರ್ತಿಸುತ್ತಿದ್ದಾರೆ. ಈ ಹಿಂದೆಯೂ ಇಂತಹ ಘಟನೆಗಳು ವರದಿಯಾಗಿದ್ದವು. ಶಿಕ್ಷಕನ ಹಲ್ಲೆ ನಂತರ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

13 ವಿದ್ಯಾರ್ಥಿಗಳಿಂದ ದೂರು ಅರ್ಜಿಗಳನ್ನು ಸ್ವೀಕರಿಸಿದ್ದು, ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಟೇಷನ್ ಹೌಸ್ ಆಫೀಸರ್ ಅಶುತೋಷ್ ಸಿಂಗ್ ತಿಳಿಸಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ, ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಶಿಶಿರ್ ಕುಮಾರ್ ಸಿಂಗ್ ಅವರು ತನಿಖೆಗೆ ತಂಡವನ್ನು ರಚಿಸಿದ್ದಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೋಷಕರಿಗೆ ಭರವಸೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada