ಚುನಾವಣಾ ಪ್ರಣಾಳಿಕೆಯಲ್ಲಿ ಭಾರತದ ತಪ್ಪು ಭೂಪಟ; ಉದ್ದೇಶಪೂರ್ವಕ ಮಾಡಿದ್ದಲ್ಲ, ಕ್ಷಮೆಯಾಚಿಸಿದ ಶಶಿ ತರೂರ್

ಶಶಿ ತರೂರ್ ಅವರ ಪ್ರಣಾಳಿಕೆಯಲ್ಲಿನ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಮತ್ತು ಲಡಾಖ್ ಅನ್ನು ಕೈಬಿಡಲಾಗಿದೆ. ಈ ಪ್ರಮಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದಾಗ ತರೂರ್ ಅವರ ಕಚೇರಿ ತಿದ್ದುಪಡಿ ಮಾಡಿ..

ಚುನಾವಣಾ ಪ್ರಣಾಳಿಕೆಯಲ್ಲಿ ಭಾರತದ ತಪ್ಪು ಭೂಪಟ; ಉದ್ದೇಶಪೂರ್ವಕ ಮಾಡಿದ್ದಲ್ಲ, ಕ್ಷಮೆಯಾಚಿಸಿದ ಶಶಿ ತರೂರ್
ಶಶಿ ತರೂರ್
TV9kannada Web Team

| Edited By: Rashmi Kallakatta

Sep 30, 2022 | 8:08 PM

ಕಾಂಗ್ರೆಸ್ ಅಧ್ಯಕ್ಷ (Congress President Election) ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಶಶಿ ತರೂರ್ (Shashi Tharoor)ಅವರ ಚುನಾವಣಾ ಪ್ರಣಾಳಿಕೆಯಲ್ಲಿ  ಭಾರತದ ತಪ್ಪಾದ ಭೂಪಟ ಮುದ್ರಿಸಲಾಗಿದೆ. ಈ ಬಗ್ಗೆ ಆಕ್ಷೇಪ ಕೇಳಿ ಬಂದ ಬೆನ್ನಲ್ಲೇ ತಪ್ಪಿನ ಅರಿವಾದ ಕೇರಳದ ಸಂಸದ ತರೂರ್, ಈ ರೀತಿಯ ತಪ್ಪುಗಳನ್ನು ಯಾರೂ ಉದ್ದೇಶಪೂರ್ವಕ ಮಾಡಿಲ್ಲ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ. ಶಶಿ ತರೂರ್ ಅವರು ಭಾರತದ ತಪ್ಪಾದ ಭೂಪಟವನ್ನು ಬಳಸಿದ್ದು ಇದೇ ಮೊದಲೇನೂ ಅಲ್ಲ. ತರೂರ್ ಅವರ ಪ್ರಣಾಳಿಕೆಯಲ್ಲಿನ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಮತ್ತು ಲಡಾಖ್ ಅನ್ನು ಕೈಬಿಡಲಾಗಿದೆ. ಈ ಪ್ರಮಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದಾಗ ತರೂರ್ ಅವರ ಕಚೇರಿ ತಿದ್ದುಪಡಿ ಮಾಡಿ ಸರ್ಕಾರದಿಂದ ಅನುಮೋದಿತ ನಕ್ಷೆಯನ್ನು ಬಳಸಿತು. ಕಾಂಗ್ರೆಸ್ ಮುಖಂಡ ತರೂರ್ ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು.

ಬಿಜೆಪಿಯ ಅಮಿತ್ ಮಾಳವಿಯಾ ಅವರು ತರೂರ್ ಅವರನ್ನು “ಪುನರಾವರ್ತಿತ ಅಪರಾಧಿ” ಎಂದು ಕರೆದಿದ್ದು ಈ ಹಿಂದೆ ತರೂರ್ ಹಂಚಿಕೊಂಡಿದ್ದ ತಪ್ಪಾದ ಭೂಪಟದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ .

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿರುವಾಗ, ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿ ಭಾರತವನ್ನು ಛಿದ್ರಗೊಳಿಸಲು ಹೊರಟಿದ್ದಾರೆ. ಬಹುಶಃ ಇದು ಗಾಂಧಿಯವರ ಪರವಾಗಿರಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ ಎಂದು ಮಾಳವಿಯಾ ವಾಗ್ದಾಳಿ ನಡೆಸಿದ್ದಾರೆ.

ಇದು ತಪ್ಪು ಅಥವಾ ಪ್ರಮಾದವಲ್ಲ, ಇದು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಕಾಂಗ್ರೆಸ್‌ನ ನೀತಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಆರ್‌ಪಿ ಸಿಂಗ್ ಹೇಳಿದ್ದಾರೆ. #ThinkTomorrowThinkTharoor ಎಂಬ ಅಡಿಬರಹದೊಂದಿಗೆ ಕಾಂಗ್ರೆಸ್ ಅನ್ನು “ಪುನರುಜ್ಜೀವನಗೊಳಿಸಲು” ತರೂರ್ ಅವರ ಹತ್ತು ತತ್ವಗಳ ಕುರಿತು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ಪ್ರಸ್ತುತಪಡಿಸಿದ ತತ್ವಗಳೆಂದರೆ: ಪುನಶ್ಚೇತನದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಿ, ಸಂಸ್ಥೆಯನ್ನು ವಿಕೇಂದ್ರೀಕರಿಸಿ, ಎಐಸಿಸಿ ಪ್ರಧಾನ ಕಚೇರಿಯ ಪಾತ್ರವನ್ನು ಮರುರೂಪಿಸಿ; ಪಕ್ಷದ ಪ್ರಮುಖ ನಂಬಿಕೆಗಳನ್ನು ಪುನರುಚ್ಚರಿಸಬೇಕು, ಪಕ್ಷದಲ್ಲಿ ವ್ಯಾಪಕ ಭಾಗವಹಿಸುವಿಕೆ, ಚುನಾವಣಾ ನಿರ್ವಹಣೆಯನ್ನು ಪುನಶ್ಚೇತನಗೊಳಿಸುವುದು, ಯುವಜನತೆಯ ಮೇಲೆ ಹೆಚ್ಚಿನ ಗಮನ, ಮಹಿಳೆಯರಿಗೆ ದೊಡ್ಡ ಪಾತ್ರ; ಉದ್ಯಮ ಮತ್ತು ವೃತ್ತಿಪರರನ್ನು ತಲುಪುವುದು ಮತ್ತು ಸಾಮಾಜಿಕ ಕಾರ್ಯವಾಗಿ ರಾಜಕೀಯದ ನೀತಿಗೆ ಮರಳುವುದು.

ಕಾಂಗ್ರೆಸ್ ಅಧ್ಯಕ್ಷೀಯ ರೇಸ್‌ನಲ್ಲಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಸ್ಪರ್ಧಿಗಳಾಗಿದ್ದು, ಇಬ್ಬರೂ  ಇಂದು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada