AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ನಡೆಯುವಾಗ ಕಾಲು ನೋವಾಗುತ್ತದೆ, ಜನ ನನ್ನ ಬಳಿಗೆ ಬಂದು ಮಾತನಾಡುವಾಗ ಆ ನೋವು ಮರೆಯುತ್ತೇನೆ: ರಾಹುಲ್ ಗಾಂಧಿ

Bharat Jodo Yatra ಭಾರತ್ ಜೋಡೋ ಯಾತ್ರೆ ಕೇರಳದಲ್ಲಿ ಮುಕ್ತಾಯವಾಗಿದ್ದು ಕರ್ನಾಟಕಕ್ಕೆ ಪ್ರವೇಶಿಸಿದೆ. ಕೇರಳದಲ್ಲಿ ಯಾತ್ರೆ ಮುಗಿದ ನಂತರ ರಾಹುಲ್ ಗಾಂಧಿ ಕಾರ್ಯಕರ್ತರ ಜತೆ ನಡೆಸಿದ ಸಂವಾದ ಇದಾಗಿದೆ...

Watch ನಡೆಯುವಾಗ ಕಾಲು ನೋವಾಗುತ್ತದೆ, ಜನ ನನ್ನ ಬಳಿಗೆ ಬಂದು ಮಾತನಾಡುವಾಗ ಆ ನೋವು ಮರೆಯುತ್ತೇನೆ: ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 30, 2022 | 6:12 PM

Share

ಭಾರತ್ ಜೋಡೋ ಯಾತ್ರೆಯ (Bharat Jodo Yatra) ನಡುವೆ ತಮ್ಮ ಪಕ್ಷದ ಕಾರ್ಯಕರ್ತರ ಜತೆ ಸಂವಾದ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಹೀಗೆ ನಡೆಯುತ್ತಿರುವಾಗ ಕಾಲು ನೋವಾಗುತ್ತದೆ. ಆದರೆ ಜನರ ಬೆಂಬಲ ನನ್ನನ್ನು ಮುಂದೆ ನಡೆಯುವಂತೆ ಪ್ರೇರೇಪಿಸುತ್ತದೆ ಎಂದು ಹೇಳಿರುವ ವಿಡಿಯೊ ಈಗ ವೈರಲ್ ಆಗಿದೆ. ನಡೆಯುವಾಗ ನನ್ನ ಮೊಣಕಾಲಿನಲ್ಲಿ ನೋವು ಆಗುತ್ತದೆ. ಕೆಲವೊಮ್ಮೆ ಸಿಕ್ಕಾಪಟ್ಟೆ ನೋವಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ. ಕಾಲಿನ ನೋವು ವಿಪರೀತ ಆಗಿರುವ  ಹೊತ್ತಲ್ಲೇ ಯಾರಾದರೊಬ್ಬರು ನನ್ನ ಬಳಿ ಬರುತ್ತಾರೆ, ಅವರು ನನ್ನ ಜತೆ ಮಾತನಾಡುತ್ತಾರೆ, ಅವರ ಮಾತುಗಳನ್ನು ನನ್ನ ಜತೆ ಹಂಚಿಕೊಳ್ಳುತ್ತಾರೆ. ಹೀಗಾಗುವಾಗ ನನ್ನ ನೋವು ಶಮನವಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಉದಾಹರಣೆಗೆ ನಿನ್ನೆ ನನಗೆ ಸಿಕ್ಕಾಪಟ್ಟೆ ನೋವಾಗುತ್ತಿತ್ತು. ಆಗ ಹುಡುಗಿಯೊಬ್ಬಳು ಓಡಿ ಬಂದು ನನಗೆ ಈ ಪತ್ರ ಕೊಟ್ಟಳು. ಅದರಲ್ಲಿ ಹೀಗೆ ಬರೆದಿತ್ತು: ಕಷ್ಟದ ಜತೆಗೆ ನೆಮ್ಮದಿ ಇರುತ್ತದೆ. ನಾನು ಕಷ್ಟದ ಪರಿಸ್ಥಿತಿ ಬಗ್ಗೆ ಯೋಚಿಸುತ್ತಿದ್ದಾಗ ಈ ಪತ್ರ ಸಿಕ್ಕಿದೆ. ನೋಡಿ , ನನ್ನ ಕಷ್ಟದ ಹೊತ್ತಲ್ಲೇ ಯಾರಾದರೊಬ್ಬರು ಬಂದು ನನಗೆ ಸಹಾಯ ಮಾಡುತ್ತಾರೆ ಎಂದು ರಾಹುಲ್ ಹೇಳಿದಾಗ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

ನಾನು ನೋವು ಅನುಭವಿಸಿದಾಗಲೆಲ್ಲಾ ನನ್ನ ಪಕ್ಷದ ಕಾರ್ಯಕರ್ತರು ಅಥವಾ ಸಾರ್ವಜನಿಕರಲ್ಲಿ ಯಾರಾದರೂ ಒಬ್ಬರು ಬಂದು ನನ್ನನ್ನು ಕಷ್ಟದಿಂದ ಪಾರು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅದೇ ವಿಡಿಯೊದಲ್ಲಿ ರಾಹುಲ್ ಗಾಂಧಿ ತಮ್ಮ ತಂದೆಯ ಹತ್ಯೆಯ ಬಗ್ಗೆ ಹೇಳುತ್ತಿರುವುದನ್ನು ನೋಡಬಹುದು. “ನೋಡಿ, ಮನೋವಿಜ್ಞಾನ ಏನು ಎಂದು ನಾನು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಹೇಳುವುದಾದರೆ ದೊಡ್ಡ ಪ್ರಮಾಣದ ನೋವು ಅನುಭವಿಸಿದರೆ, ಇದು ನಿಮಗೆ ಸಂಭವಿಸುತ್ತದೆ. ನೀವು ದೊಡ್ಡ ಪ್ರಮಾಣದ ನೋವು ಅನುಭವಿಸಲು ಸಾಧ್ಯವಿಲ್ಲ ಮತ್ತು ನೋವನ್ನೇ ನಂಬುತ್ತಿರುತ್ತೀರಿ . ನೀವು ನೋವನ್ನು ಅನುಭವಿಸಿದರೆ, ನೀವು ಸ್ವಯಂಚಾಲಿತವಾಗಿ ನೋವಿನಿಂದ ಬಳಲುತ್ತಿರುವವರನ್ನು ನೋಡಬಹುದು. ಆಗ ನೀವು, ಓಹ್ ನೋವು ನನಗೆ ಗೊತ್ತು ಅಂತೀರಿ, ನನಗೆ ಆ ನೋವು ಗೊತ್ತು, ನನ್ನ ತಂದೆ ಸತ್ತರು, ನನ್ನ ಅಜ್ಜಿ ಸತ್ತರು, ಏನೇ ಇರಲಿ, ನಾನು ನೋವು ಅನುಭವಿಸಿದ್ದೇನೆ, ಹಾಗಾಗಿ ವ್ಯಕ್ತಿಯು ಅನುಭವಿಸುವ ನೋವು ಏನೆಂದು ನನಗೆ ಗೊತ್ತು ಎಂದಿದ್ದಾರೆ ರಾಹುಲ್.

ಭಾರತ್ ಜೋಡೋ ಯಾತ್ರೆ ಕೇರಳದಲ್ಲಿ ಮುಕ್ತಾಯವಾಗಿದ್ದು ಕರ್ನಾಟಕಕ್ಕೆ ಪ್ರವೇಶಿಸಿದೆ. ಕೇರಳದಲ್ಲಿ ಯಾತ್ರೆ ಮುಗಿದ ನಂತರ ರಾಹುಲ್ ಗಾಂಧಿ ಕಾರ್ಯಕರ್ತರ ಜತೆ ನಡೆಸಿದ ಸಂವಾದ ಇದಾಗಿದೆ. ಗುರುವಾರ ಭಾರತ್ ಜೋಡೋ ಯಾತ್ರೆ ಕೇರಳದ ನಿಲಂಬೂರ್​​ನಿಂದ ತಮಿಳುನಾಡಿನ ಗುಡಲೂರಿಗೆ ಸಾಗಿದ್ದು ಅಲ್ಲಿ ಅವರು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು. 3,570 ಕಿಮೀ ಕ್ರಮಿಸುವ ಈ ಯಾತ್ರೆ ಸೆಪ್ಟೆಂಬರ್ 7ರಂದುಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದು 150ದಿನಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

Published On - 6:04 pm, Fri, 30 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ