ಮಗ ಮಾಡಿದ್ದ ಸಾಲಕ್ಕೆ ತಾಯಿಗೆ ಕಿರುಕುಳ: ಫೈನಾನ್ಸ್ ಸಿಬ್ಬಂದಿ ದುಂಡಾವರ್ತನೆಗೆ ಸ್ಥಳೀಯರ ಆಕ್ರೋಶ

ಗದಗ ಬಜಾಜ್ ಫೈನಾನ್ಸ್ ಕಂಪನಿಯು ಮಗನ ಸಾಲಕ್ಕಾಗಿ ತಾಯಿಯನ್ನು ಕಿರುಕುಳ ನೀಡಿದ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಗನ ಎರಡು ತಿಂಗಳ ಸಾಲದ ಕಂತು ಬಾಕಿ ಇದ್ದ ಕಾರಣ, ಫೈನಾನ್ಸ್ ಸಿಬ್ಬಂದಿ ತಾಯಿಯನ್ನು ಇಡೀ ದಿನ ಕಚೇರಿಯಲ್ಲಿ ಕೂಡಿಹಾಕಿ ಕಿರುಕುಳ ನೀಡಿದ್ದಾರೆ. ಸ್ಥಳೀಯರು ಫೈನಾನ್ಸ್ ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಗ ಮಾಡಿದ್ದ ಸಾಲಕ್ಕೆ ತಾಯಿಗೆ ಕಿರುಕುಳ: ಫೈನಾನ್ಸ್ ಸಿಬ್ಬಂದಿ ದುಂಡಾವರ್ತನೆಗೆ ಸ್ಥಳೀಯರ ಆಕ್ರೋಶ
ಮಗ ಮಾಡಿದ್ದ ಸಾಲಕ್ಕೆ ತಾಯಿಗೆ ಕಿರುಕುಳ: ಫೈನಾನ್ಸ್ ಸಿಬ್ಬಂದಿ ದುಂಡಾವರ್ತನೆಗೆ ಸ್ಥಳೀಯರ ಆಕ್ರೋಶ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2024 | 9:14 PM

ಗದಗ, ಡಿಸೆಂಬರ್​ 28: ಖಾಸಗಿ ಫೈನಾನ್ಸ್ ಕಂಪನಿ (Finance Company) ಕಾಟಕ್ಕೆ ಆ ಬಡ ತಾಯಿ ಅಕ್ಷರಶಃ ಕಂಗಾಲಾಗಿದ್ದಾರೆ. ಮಗ ಮಾಡಿದ ಸಾಲಕ್ಕೆ ಫೈನಾನ್ಸ್ ಸಿಬ್ಬಂದಿಗಳು ಬಡ ತಾಯಿಗೆ ಶಿಕ್ಷೆ ನೀಡಿದ್ದಾರೆ. ಬೆಳಗ್ಗೆ ನಿದ್ದೆಯಿಂದ ಎಬ್ಬಿಸಿ ಫೈನಾನ್ಸ್ ಕಚೇರಿಗೆ ತಂದು ಇಡೀ ದಿನ ಕೂಡಿ ಹಾಕಿ ಕಾಟ ನೀಡಿದ್ದಾರೆ. ನನ್ನ ಬಿಟ್ಟರೆ ಸಾಲ ಮಾಡಿಯಾದರೂ ಹಣ ಕಟ್ಟುತ್ತೇನೆ ಅಂದ್ರೂ ಫೈನಾನ್ಸ್ ಸಿಬ್ಬಂದಿ ತಾಯಿಯನ್ನು ಬಿಡದೇ ಇಡೀ ದಿನ ಕೂಡಿ ಹಾಕಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಫೈನಾನ್ಸ್​ಗೆ ನುಗ್ಗಿ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಬ್ಬಂದಿಗಳಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ತರಾಟೆ

ಗದಗ ನಗರದ ಬಜಾಜ್ ಫೈನಾನ್ಸ್ ಕಂಪನಿ ಕಚೇರಿಯಲ್ಲಿ ಘಟನೆ ನಡೆದಿದೆ. ಗಂಗವ್ವಳನ್ನು ಕೂಡಿ ಹಾಕಿ ಕಿರುಕುಳ ನೀಡಿದ ಸಿಬ್ಬಂದಿಗಳನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗಂಗವ್ವಳ ಪುತ್ರ ಹೂವಯ್ಯಾ 2021ರಲ್ಲಿ ಅಕ್ಕನ ಮದುವೆ ಹಾಗೂ ಗಂಗವ್ವಳ ಅನಾರೋಗ್ಯ ಅಂತ ಗದಗ ನಗರದ ಬಜಾಜ್ ಫೈನಾನ್ಸ್​ನಿಂದ 1.30 ಲಕ್ಷ ರೂ. ಸಾಲ ಪಡೆದಿದ್ದರು. 2021ರಿಂದ ಪ್ರತಿ ತಿಂಗಳು ಸರಿಯಾಗಿ ಕಂತು ಪಾವತಿ ಮಾಡುತ್ತಿದ್ದರು.

ಇದನ್ನೂ ಓದಿ: ಗದಗ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಆರು ಜನರಿಗೆ ಚಾಕು ಇರಿತ, ಓರ್ವನ ಸ್ಥಿತಿ ಗಂಭೀರ

ಎರಡು ತಿಂಗಳಿಂದ ಕಂತು ತುಂಬದ ಕಾರಣ ಬಾಕಿ ಉಳಿದಿತ್ತು. ಹೂವಯ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸೈಕ್ಲೋನ್ ಎಫೆಕ್ಟ್​ನಿಂದ ನಿರಂತರ ಮಳೆಯಿಂದ ಕೆಲಸಕ್ಕೆ ಹೋಗಿಲ್ಲ. ಹೀಗಾಗಿ ಹಣಕಾಸಿನ ಸಮಸ್ಯೆಯಾಗಿದೆ. ಜೊತೆಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ ಎರಡು ತಿಂಗಳ ಹಣ ಕಟ್ಟಲು ಸಮಸ್ಯೆಯಾಗಿ, ಮುಂದಿನ ತಿಂಗಳು ಎಲ್ಲ ಕಂತಿನ ಹಣ ತುಂಬಿ ಸರಿ ಮಾಡುವುದಾಗಿ ಹೇಳಿದ್ದಾರೆ. ಆದರೆ ಫೈನಾನ್ಸ್ ಸಿಬ್ಬಂದಿ ಇದ್ಯಾವುದೂ ಕೇಳದೆ ಹೂವಯ್ಯನ ತಾಯಿ ಗಂಗವ್ವಳನ್ನು ಕಚೇರಿಗೆ ಕರ್ಕೊಂಡು ಬಂದು ಕಿರುಕುಳ ನೀಡಿದ್ದಾರೆ. ಸಿಬ್ಬಂದಿ ವರ್ತನೆಗೆ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೂವಯ್ಯಾ ಬೆಂಗಳೂರಿನಲ್ಲಿ ರ್ಯಾಪಿಡ್ ಕಂಪನಿಯಲ್ಲಿ ಬೈಕ್​ನಲ್ಲಿ ಪಿಕಪ್, ಡ್ರಾಪ್ ಮಾಡುವ ಕೆಲಸ ಮಾಡ್ತಾಯಿದ್ದಾರೆ. ಫೈನಾನ್ಸ್ ಸಿಬ್ಬಂದಿ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಹೂವಯ್ಯಾ ಕಾಲ್ ರೀಸಿವಿ ಮಾಡಿಲ್ಲ. ಹೀಗಾಗಿ ಫೈನಾನ್ಸ್ ಸಿಬ್ಬಂದಿಗಳು ಗದಗ ನಗರದ ಡಂಬಳ ನಾಕಾದಲ್ಲಿರುವ ತಾಯಿ ಗಂಗವ್ವಳನ್ನನ್ನು ಸಾಲ ಮರುಪಾವತಿಗೆ ದುಂಬಾಲು ಬಿದ್ದಿದ್ದಾರೆ. ಗಂಗವ್ವ ಸ್ಪಂದಿಸಿದ್ದಾರೆ. ಹಣ ತುಂಬುವುದಾಗಿ ಹೇಳಿದ್ದಾರೆ. ತಕ್ಷಣ ಹಣ ತುಂಬಬೇಕು ಅಂತ ಕಿರುಕುಳ ನೀಡಿದ್ದಾರೆ.

ಸೂಕ್ತ ಕ್ರಮಕ್ಕೆ ಒತ್ತಾಯ

ತಕ್ಷಣ ಹಣ ತುಂಬದ ಕಾರಣ ಮೊನ್ನೆ ಅಂದ್ರೆ ಡಿಸೆಂಬರ್ 26ರಂದು ಗಂಗವ್ವಳನ್ನು ಬೆಳಗ್ಗೆ 6ಗಂಟೆಗೆ ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಕರೆದುಕೊಂಡು ಫೈನಾನ್ಸ್ ಕೂರಿಸಿ ಕಿರುಕುಳ ನೀಡಿದ್ದಾರೆ. ಇಡೀ ದಿನ ಕೂರಿಸಿಕೊಂಡು ಶಿಕ್ಷೆ ನೀಡಿದ್ದಾರೆ. ಈ ವಿಷಯ ಸ್ಥಳೀಯರಿಗೆ ಗೊತ್ತಾಗಿದೆ. ಅಷ್ಟೇ 20ಕ್ಕೂ ಅಧಿಕ ಜನರು ಫೈನಾನ್ಸ್ ಕಚೇರಿಗೆ ನುಗ್ಗಿ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಫೈನಾನ್ಸ್ ಸಿಬ್ಬಂದಿಳ ಕಿರುಕುಳದಿಂದ ನಿನ್ನೆ ಇಡೀ ದಿನ ಮನೆಬಿಟ್ಟು ಗಂಗವ್ವ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಬೆಂಗಳೂರಿನಿಂದ ಮಗ ಹೂವಯ್ಯಾ ಬಂದ ಬಳಿಕ ಮನೆಗೆ ಬಂದಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಾನೂನು ಕೈಗೆ ತೆಗೆದುಕೊಂಡು ಬಡ ಜನರಿಗೆ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡ್ತಾಯಿದ್ದಾರೆ. ಇಂತವರ ಮೇಲೆ ಪೊಲೀಸ್ ಇಲಾಖೆ ಕೂಡಾ ಕ್ರಮ ಕೈಗೊಳ್ಳಬೇಕು, ಸಾಲ ಮರುಪಾವತಿ ಮಾಡದಿದ್ರೆ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅದನ್ನು ಬಿಟ್ಟು ಕೂಡಿ ಹಾಕಿದ್ರೆ ಕಾನೂನು ಉಲ್ಲಂಘನೆ ಆಗುತ್ತದೆ. ಅಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಪಿನ್​ ಸೆಟ್​ ಮಾಡಿಕೊಡುತ್ತೇನೆ ಅಂತ ATM ಕಾರ್ಡ್ ಬದಲಾಯಿಸಿ ಅಮಾಯಕರ ಖಾತೆಯಿಂದ ಹಣ ದೋಚುತ್ತಿದ್ದ ಆರೋಪಿ ಅರೆಸ್ಟ್​

ಆರ್​​ಬಿಐ ನಿಯಮದ ಪ್ರಕಾರ ಕಂತು ಬಾಕಿ ಉಳಿದರೆ ಮೊದಲು 3 ನೋಟಿಸ್ ನೀಡಬೇಕು. ನೋಟಿಸ್​ಗೆ ಉತ್ತರ ಬರದಿದ್ದರೆ, ಮುಂದಿನ ಕ್ರಮ ಕೈಗೊಳ್ಳಬೇಕು. ಆದರೆ ಈ ಫೈನಾನ್ಸ್ ಸಿಬ್ಬಂದಿಗಳು ಯಾವುದೇ ನೋಟಿಸ್ ನೀಡದೇ ಮಗ ಮಾಡಿದ ಸಾಲಕ್ಕೆ ತಾಯಿಗೆ ಹಿಂಸೆ ನೀಡಿದ್ದಾರೆ. ಏನೂ ತಪ್ಪು ಮಾಡದಿದ್ದರೂ ಇಡೀ ದಿನ ಫೈನಾನ್ಸ್​ನಲ್ಲಿ ಕೂರಿಸಿದ್ದಾರೆ ಅಂತ ಭಾವುಕರಾಗಿದ್ದಾರೆ. ಫೈನಾನ್ಸ್ ಸಿಬ್ಬಂದಿಗಳು ಮಹಿಳೆಯೊಂದಿಗೆ ಈ ರೀತಿ ಅಮಾನವೀಯವಾಗಿ ನಡೆದಿಕೊಂಡಿದ್ದು ಗದಗ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ