ಅನುದಾನ ಕೊರತೆ: ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಲಾಗದೇ ಸರ್ಕಾರಿ ಇಲಾಖೆಗಳ ಪರದಾಟ, 72 ಕೋಟಿ ರೂ. ಬಾಕಿ

ಗದಗ ಹೆಸ್ಕಾಂ ಇಲಾಖೆ ಆರ್ಥಿಕವಾಗಿ ಒದ್ದಾಡುತ್ತಿದೆ. ಸರ್ಕಾರಿ ಇಲಾಖೆಗಳು ಕೋಟ್ಯಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇದು ಹೆಸ್ಕಾಂಗೆ ಭಾರಿ ಹೊಡೆತ ನೀಡಿದೆ. ಒಂದೂವರೆ ವರ್ಷಗಳಿಂದ ಅನುದಾನ ಇಲ್ಲದೇ ಬಹುತೇಕ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಕಟ್ಟದಾಗದೇ ಪರದಾಡುತ್ತಿವೆ. ಆದ್ರೆ, ಹೆಸ್ಕಾಂ ಇಲಾಖೆ ಮಾತ್ರ ಆರ್ಥಿಕವಾಗಿ ಕುಸಿದು ಹೋಗಿದೆ.

ಅನುದಾನ ಕೊರತೆ: ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಲಾಗದೇ ಸರ್ಕಾರಿ ಇಲಾಖೆಗಳ ಪರದಾಟ, 72 ಕೋಟಿ ರೂ. ಬಾಕಿ
ಹೆಸ್ಕಾಂ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Ganapathi Sharma

Updated on: Dec 18, 2024 | 11:26 AM

ಗದಗ, ಡಿಸೆಂಬರ್ 18: ಗದಗ ಹೆಸ್ಕಾಂ ಆರ್ಥಿಕ ಪರಿಸ್ಥಿತಿ ಕುಸಿದು ಹೋಗಿದೆ. ಸರ್ಕಾರಿ ಕಚೇರಿಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಬಿಲ್ ವಸೂಲಿಗೆ ಹೆಣಗಾಡುವ ಸ್ಥಿತಿ ಬಂದಿದೆ. ಒಂದು ವರ್ಷದಿಂದ ಬಹುತೇಕ ಇಲಾಖೆಗಳಿಂದ ವಿದ್ಯುತ್ ಬಿಲ್ ಪಾವತಿಯಾಗಿಲ್ಲ. ಹೀಗಾಗಿ ಕೇವಲ ಸರ್ಕಾರಿ ಕಚೇರಿಗಳಿಂದಲೇ ಬರೊಬ್ಬರಿ ಸುಮಾರು 72 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ.

ಅನುದಾನ ಕೊರತೆಯೇ ಕಾರಣ

ಸರ್ಕಾರಿ ಇಲಾಖೆಗಳ ವಿದ್ಯುತ್ ಬಿಲ್ ಬಾಕಿಗೆ ಪ್ರಮುಖ ಕಾರಣ ಅನುದಾನ ಕೊರತೆ ಎನ್ನಲಾಗಿದೆ. ಒಂದೂವರೆ ವರ್ಷದಿಂದ ನೀರಾವರಿ ನಿಗಮ, ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯತ್ ಸೇರಿದಂತೆ ಬಹುತೇಕ ಇಲಾಖೆಗಳಿಗೆ ಸಮರ್ಪಕ ಅನುದಾನ ಬಂದಿಲ್ಲ. ಹೀಗಾಗಿ ವಿದ್ಯುತ್ ಬಿಲ್ ಪಾವತಿಸಲು ಹಣವಿಲ್ಲದೇ ಸರ್ಕಾರಿ ಇಲಾಖೆಗಳು ಅಂತ ಒದ್ದಾಡುತ್ತಿವೆ. ಈ ಮಧ್ಯೆ ಹೆಸ್ಕಾಂ ಅಧಿಕಾರಿಗಳು ಬಿಲ್ ವಸೂಲಿಗೆ ಪರದಾಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಮತ್ತೊಂದೆಡೆ ಹೆಸ್ಕಾಂನಲ್ಲಿ ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ. ಗದಗ ಜಿಲ್ಲೆಯಲ್ಲಿ ಎರಡು ಹೆಸ್ಕಾಂ ವಿಭಾಗಗಳು ಇವೆ. ಗದಗ ವಿಭಾಗ 70 ಕೋಟಿ ರೂ. ಮತ್ತೊಂದು ರೋಣ ವಿಭಾಗದಲ್ಲಿ 11.68 ಕೋಟಿ ರೂ. ಸೇರಿ ಒಟ್ಟು 82ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿಯಿದೆ.

ಸಾರ್ವಜನಿಕರಿಂದ ವಿದ್ಯುತ್ ಹೆಚ್ಚೇನೂ ಬಾಕಿ ಇಲ್ಲ. ಸರ್ಕಾರಿ ಇಲಾಖೆಗಳಿಂದಲೇ ಕೋಟಿ ಕೋಟಿ ವಿದ್ಯುತ್ ಬಿಲ್ ಬರಬೇಕಿದೆ. ಗದಗ ಜಿಲ್ಲೆಯ ಗದಗ-ಬೆಟಗೇರಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳು ಸೇರಿದಂತೆ ಕುಡಿಯುವ ನೀರು ಯೋಜನೆ, ಬೀದಿ ದೀಪಗಳ ಕೋಟಿ ಕೋಟಿ ಬಿಲ್ ಬಾಕಿ ಇದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್​​ ಕೊರೆಸಿದ ಅತ್ತೆ-ಸೊಸೆಗೆ ಡಿಕೆ ಶಿವಕುಮಾರ್​ ಶ್ಲಾಘನೆ

ಯಾವ ಇಲಾಖೆಯಿಂದ ಎಷ್ಟು ಬಿಲ್ ಬಾಕಿ?

ಗ್ರಾಮ ಪಂಚಾಯತ್ ಗಳಿಂದ 27.60 ಕೋಟಿ ರೂ. ಬಾಕಿ ಇದೆ. 3.69 ಕೋಟಿ ಪಟ್ಟಣ ಪಂಚಾಯತ್​​ಗಳಿಂದ ಬರಬೇಕಿದೆ. ನೀರಾವರಿ ನಿಗಮದಿಂದ ಬರೊಬ್ಬರಿ 37.54 ಕೋಟಿ ರೂ. ಬರಬೇಕಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 1.72 ಕೋಟಿ ರೂ, ಆರೋಗ್ಯ ಇಲಾಖೆ 20 ಲಕ್ಷ ರೂ, ಅರಣ್ಯ ಇಲಾಖೆ 9 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ವಸೂಲಿಗಾಗಿ ಹೆಸ್ಕಾಂ ನೋಟಿಸ್ ನೀಡಿದೆ ಎಂದು ಹೆಸ್ಕಾಂ ಗದಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ