ಗದಗ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಆರು ಜನರಿಗೆ ಚಾಕು ಇರಿತ, ಓರ್ವನ ಸ್ಥಿತಿ ಗಂಭೀರ

ಗದಗದಲ್ಲಿ ಗುರುವಾರ ಸಂಜೆ ನಡೆದ ಗುಂಪು ಹಿಂಸಾಚಾರದಲ್ಲಿ ಆರು ಜನರಿಗೆ ಚೂರಿಯಿಂದ ಇರಿತವಾಗಿದೆ. ಜುಮ್ಮಾ ಮಸೀದಿ ಬಳಿ ನಡೆದ ಈ ಘಟನೆಯಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಹಿಂದಿನ ದಿನಗಳಲ್ಲಿ ನಡೆದ ಜಗಳದ ಪರಿಣಾಮವಾಗಿ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗದಗ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಆರು ಜನರಿಗೆ ಚಾಕು ಇರಿತ, ಓರ್ವನ ಸ್ಥಿತಿ ಗಂಭೀರ
ಸಾಂದರ್ಭಿಕ ಚಿತ್ರ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Ganapathi Sharma

Updated on: Dec 27, 2024 | 2:17 PM

ಗದಗ, ಡಿಸೆಂಬರ್ 27: ಗದಗ ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಜುಮ್ಮಾ ಮಸೀದಿ ಬಳಿ ಗುರುವಾರ ಸಂಜೆ ಆರು ಜನರಿಗೆ ಚೂರಿಯಿಂದ ಇರಿತಯಲಾಗಿದ್ದು, ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅನಿಲ್ ಮುಳ್ಳಾಳ (27), ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಶಾರುಖ್ ಮುಲ್ಲಾ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ ಹೀಗೆ ಆರು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಅನಿಲ್ ಮುಳ್ಳಾಳ್ ಹಾಗೂ ವಿನಾಯಕ್ ಮುಳ್ಳಾಳ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೂಲಗಳ ಪ್ರಕಾರ, ಈ ಹಲ್ಲೆ ಮೊದಲೇ ನಡೆದ ಗಲಾಟೆಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಡಿಸೆಂಬರ್ 20 ರಂದು, ಚೇತನ್ ಮುಳ್ಳಾಳ್ ಮತ್ತು ನಿಸಾರ್ ಅಹ್ಮದ್ ನಡುವೆ ಗಲಾಟೆ ನಡೆದುತ್ತು. ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಆದರೆ, ಅದೇ ಕಾರಣಕ್ಕೆ ಈಗ ಮತ್ತೆ ಘರ್ಷಣೆ ಸಂಭವಿಸಿದೆ.

ನಡೆದಿದ್ದೇನು?

ಡಿಸೆಂಬರ್ 20 ರಂದು ನಿಸಾರ್ ಹಾಗೂ ಚೇತನ್ ಗಲಾಟೆ ಮಾಡಿಕೊಂಡಿದ್ದರು. ನಂತರ ಸುಮ್ಮನಾಗಿದ್ದರು. ಆರು ದಿನದ ನಂತರ, ಅಂದರೆ ಡಿಸೆಂಬರ್ 26 ನೇ ತಾರೀಕು ಗುರುವಾರ ಜುಮ್ಮಾ ಮಸೀದಿ ಬಳಿ ನಿಸಾರ್​​ನನ್ನು ಚೇತನ್ ನೋಡಿದ್ದ. ನಿಸಾರ್​​ನನ್ನು ತೋರಿಸಿ, ಇವನೇ ಗಲಾಟೆ ಮಾಡಿದ್ದ ಎಂದು ಅಣ್ಣ ಅನಿಲ್​ಗೆ ತಿಳಿಸಿದ್ದ. ನಂತರ, ಯಾಕೆ ಗಲಾಟೆ ಮಾಡಿದ್ದು ಎಂದು ನಿಸಾರ್​ನನ್ನು ಅನಿಲ್ ಪ್ರಶ್ನೆ ಮಾಡಿದ್ದ. ಇದರಿಂದ ಮಾತಿಗೆ ಮಾತು ಬೆಳೆದು ಚೇತನ್ ಹಾಗೂ ಸ್ಥಳಕ್ಕೆ ಬಂದಿದ್ದ ವಿನಾಯಕ್ ಮೇಲೆ ನಿಸಾರ್ ಹಲ್ಲೆ ನಡೆಸಿದ್ದಾನೆ. ವಿನಾಯಕ್​​ನನ್ನು ರಕ್ಷಿಸಲು ಬಂದ ಅನಿಲ್ ಕುತ್ತಿಗೆಗೆ ಸ್ಕ್ರೂ ಡ್ರೈವರ್ ಚುಚ್ಚಿದ್ದಾನೆ. ಜೊತೆಗೆ ಸ್ಥಳದಲ್ಲಿದ್ದ ಐದು ಜನರಿಗೂ ಚೂರಿಯಿಂದ ಇರಿದಿದ್ದಾನೆ. ಘಟನೆಯಲ್ಲಿ ನಿಸಾರ್ ಜೊತೆಗೆ 20/30 ಯುವಕ ಗ್ಯಾಂಗ್ ಶಾಮಲಾಗಿದೆ.

ನಡೆದುಕೊಂಡು ಹೋಗುತ್ತಿದ್ದವರ ಮೇಲೂ ಹಲ್ಲೆ

ರಸ್ತೆಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ ಅಭಿಷೇಕ್, ಕಿರಣ್ ಎಂಬವರ ಮೇಲೂ ಹಲ್ಲೆ‌ ಮಾಡಲಾಗಿದೆ. ಗಾಯಾಳುಗಳ ಪೈಕಿ ಅನಿಲ್, ಶ್ರೀರಾಮ ಸೇನೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಅನಿಲ್​ನನ್ನೇ ಗುರಿಯಾಗಿಸಿ ಹಲ್ಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಗದಗ: ಮನೆಯಲ್ಲಿ ಪೂಜಿಸುವ ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ದೇವರ ಫೋಟೊಗಳನ್ನು ಹೊರಗೆಸೆದ ಕುಟುಂಬ!

ಆಸ್ಪತ್ರೆಗೆ ಹೆಚ್ಚುವರಿ ಎಸ್ಪಿ ಎಂಬಿ ಸಂಕದ, ಡಿವೈಎಸ್ಪಿ ಪ್ರಭುಗೌಡ, ಸಿಪಿಐ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ