ಸಂಸತ್ ಅಹಂನ ಇಟ್ಟಿಗೆಯಿಂದಲ್ಲ, ಸಂವಿಧಾನದ ಮೌಲ್ಯಗಳಿಂದ ನಿರ್ಮಿಸಲಾಗುತ್ತದೆ: ರಾಹುಲ್ ಗಾಂಧಿ

|

Updated on: May 24, 2023 | 5:49 PM

ರಾಷ್ಟ್ರಪತಿಯವರು ಸಂಸತ್ತಿನ ಉದ್ಘಾಟನೆಗೆ ಬರುವುದು ಅಥವಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ. ಸಂಸತ್ತು ಅಹಂಕಾರದ ಇಟ್ಟಿಗೆಗಳಿಂದ ಅಲ್ಲ ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಾಣವಾಗುತ್ತದೆ ಎಂದ ರಾಹುಲ್ ಗಾಂಧಿ

ಸಂಸತ್ ಅಹಂನ ಇಟ್ಟಿಗೆಯಿಂದಲ್ಲ, ಸಂವಿಧಾನದ ಮೌಲ್ಯಗಳಿಂದ ನಿರ್ಮಿಸಲಾಗುತ್ತದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ಪ್ರಧಾನಿ ನರೇಂದ್ರ ಮೋದಿ (Narendra Modi) ನೂತನ ಸಂಸತ್ತಿನ ಸಂಕೀರ್ಣ ಉದ್ಘಾಟನೆ ಮಾಡುವುದನ್ನು 19 ವಿರೋಧ ಪಕ್ಷಗಳು ಬಹಿಷ್ಕರಿಸಲು ನಿರ್ಧರಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಹೇಳಿದ್ದಾರೆ. ಸಂಸತ್ತನ್ನು ಅಹಂಕಾರದ ಇಟ್ಟಿಗೆಗಳಿಂದ ಅಲ್ಲ ಆದರೆ ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಿಸಲಾಗುತ್ತದೆ ಎಂದಿದ್ದಾರೆ ರಾಹುಲ್.

ರಾಷ್ಟ್ರಪತಿಯವರು ಸಂಸತ್ತಿನ ಉದ್ಘಾಟನೆಗೆ ಬರುವುದು ಅಥವಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ. ಸಂಸತ್ತು ಅಹಂಕಾರದ ಇಟ್ಟಿಗೆಗಳಿಂದ ಅಲ್ಲ ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಾಣವಾಗುತ್ತದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.


ಕಾಂಗ್ರೆಸ್, ಎಡಪಕ್ಷಗಳು, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ 19 ವಿರೋಧ ಪಕ್ಷಗಳು, ಪ್ರಜಾಪ್ರಭುತ್ವದ ಆತ್ಮವು ಸಂಸತ್ತಿನಿಂದ ಹೊರಬಂದಾಗ ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಾಣುವುದಿಲ್ಲ ಎಂದು ಪ್ರತಿಪಾದಿಸಿ ಉದ್ಘಾಟನಾ ಸಮಾರಂಭದಿಂದ ಹೊರಗುಳಿಯುವುದಾಗಿ ಹೇಳಿವೆ.

ಬಿಜೆಪಿ ವಕ್ತಾರ ಜೈವೀರ್ ಶೆರ್ಗಿಲ್ ಅವರು ಬುಧವಾರದಂದು ರಾಹುಲ್​​ಗೆ ತಿರುಗೇಟು ನೀಡಿದ್ದು ಸಂವಿಧಾನಿಕ ಔಚಿತ್ಯದ ಕುರಿತು ಸಲಹೆಯನ್ನು ನೀಡುವ ಮೊದಲು ಸ್ವಂತ ಪಕ್ಷದ ಸಹೋದ್ಯೋಗಿಗಳನ್ನು ಹೇಗೆ ಗೌರವಿಸಬೇಕು ಎಂದು ಕಲಿಯಬೇಕೆಂದು ಕೇಳಿದರು.

ಇದನ್ನೂ ಓದಿ: Old Parliament History: ಹೊಸ ಸಂಸತ್ ಉದ್ಘಾಟನೆಗೆ ದಿನಗಣನೆ; ಇತಿಹಾಸದ ಪುಟ ಸೇರಲಿರುವ ಹಳೆ ಸಂಸತ್ ವಿಶೇಷಗಳು ಇಲ್ಲಿವೆ

ರಾಹುಲ್ ಗಾಂಧಿಯವರು ಸಂಪೂರ್ಣ ದುರಹಂಕಾರದಿಂದ ಸುಗ್ರೀವಾಜ್ಞೆಯನ್ನು ಮಾಧ್ಯಮಗಳ ಮುಂದೆ ಹರಿದು ಹಾಕಿಆಗಿನ ಪ್ರಧಾನಿ ಡಾ ಮನಮೋಹನ್ ಸಿಂಗ್ ಜೀ ಅವರನ್ನು ಮುಜುಗರಕ್ಕೀಡುಮಾಡಿದರು ಇಂದು ಅವರು ಹೊಸ ಸಂಸತ್ತಿನ ಉದ್ಘಾಟನೆ ವೇಳೆ ರಾಷ್ಟ್ರಪತಿಯ ಗೌರವ ಬಗ್ಗೆ ಮಾತನಾಡುತ್ತಿದ್ದಾರೆ. ಸಾಂವಿಧಾನಿಕ ಔಚಿತ್ಯದ ಬಗ್ಗೆ ಸಲಹೆ ನೀಡುವ ಮೊದಲು ಸಹೋದ್ಯೋಗಿಗಳು ಮತ್ತು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಲಿ ಎಂದು ಹೇಳಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ತೊರೆದ ಶೆರ್ಗಿಲ್, ಪಕ್ಷದ ನಿರ್ಧಾರ ತೆಗೆದುಕೊಳ್ಳುವವರ ದೃಷ್ಟಿಕೋನದೊಂದಿಗೆ ಸರಿಹೊಂದುತ್ತಿಲ್ಲ ಎಂದು ಆರೋಪಿಸಿದ್ದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಆಹ್ವಾನದ ಮೇರೆಗೆ ಮೋದಿ ಅವರು ಮೇ 28 ರಂದು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿಗಳು ಭಾರತದಲ್ಲಿ ರಾಷ್ಟ್ರದ ಮುಖ್ಯಸ್ಥರು ಮಾತ್ರವಲ್ಲ, ಅವರು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳಿವೆ, ಹಾಗಾಗಿ ರಾಷ್ಟ್ರಪತಿಗಳೇ ಕಟ್ಟಡ ಉದ್ಘಾಟನೆ ಮಾಡಬೇಕೇ ಹೊರತು ಪ್ರಧಾನಿಯಲ್ಲ ಎಂದು ವಾದಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ