Parliament: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ: ರಾಹುಲ್ ಗಾಂಧಿ

|

Updated on: Feb 11, 2021 | 7:04 PM

Lok Sabha: ಇದು ರೈತರ ಪ್ರತಿಭಟನೆ ಮಾತ್ರ ಅಲ್ಲ, ದೇಶದ ಜನರ ಪ್ರತಿಭಟನೆ. ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇ ಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. 

Parliament: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ: ರಾಹುಲ್ ಗಾಂಧಿ
ಲೋಕಸಭೆಯಲ್ಲಿ ರಾಹುಲ್ ಗಾಂಧಿ
Follow us on

ನವದೆಹಲಿ: ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೃಷಿ ಕಾಯ್ದೆಗಳು ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ ಎಂದಿದ್ದಾರೆ. ಕೃಷಿ ಕಾಯ್ದೆಯಲ್ಲಿನ ಮೊದಲ ಅಂಶವೆಂದರೆ ದೇಶದ ಯಾವುದೇ ಭಾಗದಲ್ಲಿ ಯಾರಿಗೆ ಬೇಕಾದರೂ ಆಹಾರ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ಅನಿಯಮಿತವಾಗಿ ಖರೀದಿ ಮಾಡಬಹುದು. ಅನಿಯಮಿತವಾಗಿ ಖರೀದಿಗೆ ಸಾಧ್ಯವಾಗುವುದಾದರೆ ಮಂಡಿಗಳಿಗೆ ಹೋಗುವವರು ಯಾರು? ಕೃಷಿ ಕಾಯ್ದೆಯ ಮೊದಲನೇ ಅಂಶವೇ ಮಂಡಿಗಳನ್ನು ನಾಶಪಡಿಸುವುದಾಗಿದೆ ಎಂದು ಹೇಳಿದ್ದಾರೆ.

ರೈತ ಹೋರಾಟದಲ್ಲಿ ಸಾವನ್ನಪ್ಪಿದ ರೈತರಿಗೆ ಲೋಕಸಭೆಯಲ್ಲಿ ಎರಡು ನಿಮಿಷ ಮೌನಾಚರಣೆ ಮೂಲಕ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಿದೆ. ಶ್ರದ್ಧಾಂಜಲಿ ಸಲ್ಲಿಕೆಗೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದ್ದು ಸದನ‌ ನಡೆಸುವ ಜವಾಬ್ದಾರಿ ನನ್ನದು ಎಂದ ಸ್ಪೀಕರ್ ಓಂಬಿರ್ಲಾ ಹೇಳಿದ್ದಾರೆ.

ರಾಹುಲ್ ಕೃಷಿ ಕಾಯ್ದೆ ವಿಷಯ ಪ್ರಸ್ತಾಪ ಮಾಡಿದಾಗ ಸದನದಲ್ಲಿ ಗದ್ದಲವುಂಟಾಯಿತು. ಈ ನಡುವೆ ಕೃಷಿ ಕಾಯ್ದೆ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸಭಾಪತಿ ಹೇಳಿದಾಗ ನಾನು ಬಜೆಟ್ ಬಗ್ಗೆ ಮಾತನಾಡುವುದಿಲ್ಲ, ಕೃಷಿ ಕಾಯ್ದೆ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ರಾಹುಲ್  ಉತ್ತರಿಸಿದ್ದಾರೆ. ಇದು ರೈತರ ಪ್ರತಿಭಟನೆ ಮಾತ್ರ ಅಲ್ಲ , ದೇಶದ ಜನರ ಪ್ರತಿಭಟನೆ, ರೈತರು ದಾರಿ ತೋರಿಸುತ್ತಿದ್ದಾರೆ. ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇ ಬೇಕು ಎಂದು ಅವರು  ಒತ್ತಾಯಿಸಿದ್ದಾರೆ.

ಅದಾನಿ, ಅಂಬಾನಿ ದವಸ ಧಾನ್ಯ, ತರಕಾರಿ ಖರೀದಿ ಮಾಡುತ್ತಾರೆ ಎಂದು ರಾಹುಲ್ ಹೇಳಿದ್ದಾರೆ. ಇದನ್ನ ಸಾಬೀತು ಮಾಡಲಿ ಎಂದು ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.

ಗದ್ದಲದ ನಡುವೆಯೇ ಭಾಷಣ ಮುಂದುವರಿಸಿದ ರಾಹುಲ್  ಕಾರ್ಮಿಕರು, ಸಣ್ಣ ವ್ಯಾಪಾರಿಗಳ‌ ವ್ಯವಹಾರ ಬಂದ್ ಆಗಲಿದೆ. ಕೃಷಿ ಕಾಯ್ದೆಗಳಿಂದ ರೈತರಿಗೂ ತೊಂದರೆ ಖಚಿತ. ದೇಶದ ಆಹಾರ ಭದ್ರತಾ ವ್ಯವಸ್ಥೆ ಸಂಪೂರ್ಣ ಹಾಳಾಗಲಿದೆ. ಜನ ಹಸಿವಿನಿಂದ ಸಾಯಬೇಕಾಗುತ್ತೆ, ಉದ್ಯೋಗ ಸೃಷ್ಟಿಯಾಗಲ್ಲ. ಪ್ರಧಾನಿ ಹಮ್ ದೋ, ಹಮಾರೇ ದೋಗಾಗಿ ನೋಟು ಅಮಾನ್ಯೀಕರಣ ಮಾಡಿದರು. ಬಳಿಕ ಪ್ರಧಾನಿ ಮೋದಿ ಗಬ್ಬರ್​ಸಿಂಗ್ ಟ್ಯಾಕ್ಸ್ ಜಾರಿಗೆ ತಂದರು ಎಂದಿದ್ದಾರೆ.

ಕೃಷಿ ಕಾಯ್ದೆಯಲ್ಲಿನ ಎರಡನೇ ಕಾಯ್ದೆಯು ಕಾರ್ಪರೇಟ್ ಸಂಸ್ಥೆಗಳಿಗೆ ಅಕ್ರಮ ದಾಸ್ತಾನು ಮಾಡಲು ಅನುಮತಿ ನೀಡುತ್ತದೆ ಎಂದು ರಾಹುಲ್ ಹೇಳಿದ್ದಾರೆ. ಎರಡನೇ ಕಾಯ್ದೆಯು ಏನು ಹೇಳುತ್ತದೆ ಅಂದರೆ ದೊಡ್ಡ ಕಾರ್ಪರೇಟ್ ಸಂಸ್ಥೆಗಳು ಉತ್ಪನ್ನಗಳನ್ನು ಎಷ್ಟು ಬೇಕಾದರೂ ಸಂಗ್ರಹಿಸಿಡಬಹುದು. ಇದು ಅಗತ್ಯ ಸರಕು ಕಾಯ್ದೆಗೆ ಮಾರಕವಾಗಲಿದ್ದು, ಅಕ್ರಮ ದಾಸ್ತಾನುಗಳು ಹೆಚ್ಚುವಂತೆ ಮಾಡುತ್ತದೆ. ಮೂರನೇ ಕಾಯ್ದೆಯು ರೈತ ತಾನು ಬೆಳೆದ ಬೆಳೆಗೆ ನ್ಯಾಯವಾದ ದರವನ್ನು ಪಡೆಯಲು  ಕಾರ್ಪರೇಟ್ ಸಂಸ್ಥೆಗಳ ಮುಂದೆ ಹೋಗಬೇಕಾಗುತ್ತದೆ. ಅವನು ಕೋರ್ಟ್ ಮೊರೆ ಹೋಗದಂತೆ ಈ ಕಾಯ್ದೆ ತಡೆಯುತ್ತದೆ.

ಇದನ್ನೂ ಓದಿ:  India China Border Conflict | ಗಡಿ ಸಂಘರ್ಷ ಕೊನೆ, 9 ಹಂತದ ಮಾತುಕತೆ ಬಳಿಕ ಗಡಿಯಿಂದ ಕಾಲ್ತೆಗೆಯಲು ನಿರ್ಧರಿಸಿದ ಚೀನಾ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಾಹುಲ್ ಗಾಂಧಿ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ

ಕೆಲವರು ಬಜೆಟ್ ವೇಳೆ, ದೇಶದಲ್ಲಿ ಹೆಚ್ಚು ಇರಲ್ಲ. ಹೀಗಾಗಿ ಬಜೆಟ್ ಬಗ್ಗೆ ಮಾತನಾಡಲು ಸಿದ್ದವಾಗಿರಲೇ ಇಲ್ಲ ಎಂದು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅನುರಾಗ್ ಠಾಕೂರ್ ಭಾಷಣದ ವೇಳೆ ಸದನದಿಂದ ರಾಹುಲ್ ಗಾಂಧಿ ಎದ್ದು‌ ಹೊರಗೆ ಹೋದಾಗಈಗಲೂ ಎದ್ದು ಹೋಗುತ್ತಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.

ಇದಕ್ಕಿಂತ ಮುನ್ನ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೂರ್ವ ಲಡಾಖ್‌ನ ಗಡಿ ವಾಸ್ತವಿಕ ರೇಖೆ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಿಯೋಜನೆ ಮತ್ತು ಗಸ್ತು ತಿರುಗಲು ಸಂಬಂಧಿಸಿದಂತೆ ಇನ್ನೂ ಕೆಲವು ಸಮಸ್ಯೆಗಳಿವೆ ಎಂದು ಸದನವು ತಿಳಿದಿರಬೇಕು. ಚೀನಾದೊಂದಿಗೆ ನಡೆಯಲಿರುವ ಚರ್ಚೆಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. ಉಭಯ ರಾಷ್ಟ್ರಗಳು ಶೀಘ್ರವಾಗಿ ಸಂಪೂರ್ಣವಾಗಿ ಸೇನೆಯನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ದ್ವಿಪಕ್ಷೀಯ ಒಪ್ಪಂದಗಳು, ನಿಬಂಧನೆಗಳಿಗೆ ಸಂಪೂರ್ಣವಾಗಿ ಬದ್ಧರಾಗಿರಬೇಕು ಎಂಬುದಕ್ಕೆ ನಾವು ಒಪ್ಪಿದ್ದೇವೆ ಎಂದಿದ್ದಾರೆ.

Published On - 6:14 pm, Thu, 11 February 21