ದೇಶವನ್ನು ಮಾರುವುದು ನಿಮ್ಮ ಕೆಲಸವಲ್ಲ: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನಿಮ್ಮ ಕೆಲಸ ನೀವು ಮಾಡಿ ಅನ್ನೋದು ಪ್ರಧಾನಿಗೆ ನಾನು ಮಾಡುವ ಕಳಕಳಿಯ ವಿನಂತಿ. ರೈತರನ್ನು ತಬ್ಬಿಕೊಳ್ಳಿ, ಸಂತೈಸಿ. ಅವರ ಸಮಸ್ಯೆ ಪರಿಹಾರ ಮಾಡಿ. ಇದು ನಿಮ್ಮ ಆದ್ಯತೆಯ ಕೆಲಸವಾಗಬೇಕು ಎಂದುರಾಹುಲ್ ಗಾಂಧಿ ಹೇಳಿದ್ದಾರೆ.

ದೇಶವನ್ನು ಮಾರುವುದು ನಿಮ್ಮ ಕೆಲಸವಲ್ಲ: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಹುತಾತ್ಮ ಸೈನಿಕರಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅಪಚಾರ ಎದಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 03, 2021 | 4:57 PM

ದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಆರ್ಥಿಕ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.

ಬುಧವಾರ ಸುದ್ದಿಗೋಷ್ಠಿ ನಡೆಸಿದ ರಾಹುಲ್, ಕೇಂದ್ರ ಸರ್ಕಾರ ರೈತರ ಮಾತನ್ನು ಆಲಿಸಬೇಕು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸರ್ಕಾರ ರೈತರನ್ನ ಹೆದರಿಸುತ್ತಿದೆಯೇ? ರೈತರನ್ನು ಹೆದರಿಸುವುದೇ ಕೇಂದ್ರ ಸರ್ಕಾರದ ಕೆಲಸವೇ? ದೆಹಲಿ ಗಡಿಗಳಲ್ಲಿ ಯಾಕೆ ಅಷ್ಟೊಂದು ಭದ್ರತೆ? ದೆಹಲಿಯಲ್ಲಿ ಕೋಟೆಯಾಗಿ ಏಕೆ ಪರಿವರ್ತಿಸಿದ್ದೀರಿ? ರೈತರನ್ನ ಏಕೆ ಬೆದರಿಸುತ್ತೀರಿ, ಏಕೆ ಹೊಡೆಯುತ್ತೀರಿ? ಸರ್ಕಾರ ಅವರೊಂದಿಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಸಮಸ್ಯೆ ದೇಶಕ್ಕೆ ಒಳ್ಳೆಯದಲ್ಲ. ಇದರಿಂದ ಕೇಂದ್ರ ಸರ್ಕಾರವೇ ಹಿಂದೆ ಸರಿಯಬೇಕು. ರೈತರು ಹಿಂದೆ ಸರಿಯಲ್ಲ, ರೈತರನ್ನು ನಾನು ಚೆನ್ನಾಗಿ ಬಲ್ಲೆ ಎಂದರು.

ರಾಹುಲ್ ಸುದ್ದಿಗೋಷ್ಠಿಯ ವಿಡಿಯೊ ಇಲ್ಲಿದೆ

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಜೆಟ್​ ಕೇವಲ 10-15 ಜನರಿಗೆ ಸೀಮಿತವಾಗಿದೆ. ಇದು ಕೇವಲ ಶೇ ಒಂದರಷ್ಟು ಜನರಿಗೆ ನೀಡಿರುವ ಬಜೆಟ್. ಸರ್ಕಾರ ನ್ಯಾಯ್ ಯೋಜನೆ ರೀತಿ ಯೋಜನೆ ಜಾರಿಗೆ ತಂದರೆ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ. ಜನರ ಕೈಯಲ್ಲಿ ಹಣ ಇರಬೇಕು. ಭಾರತ ಭೂ ಭಾಗದೊಳಗೆ ಚೀನಾ ಬರುತ್ತಿದೆ. ಸಾವಿರಾರು ಕಿಮೀ ಭೂಮಿ ಆಕ್ರಮಿಸಿದೆ. ಚೀನಾಕ್ಕೆ ಯಾವ ಸಂದೇಶ ನೀಡಿದ್ದೀರಿ. ರಕ್ಷಣಾ ಬಜೆಟ್ ಅನ್ನು ಏರಿಕೆ ಮಾಡಿಲ್ಲ. ರಕ್ಷಣಾ ಪಡೆಗಳ್ನು ಸದೃಢಗೊಳಿಸುವ ಬದ್ಧತೆಗಿಂತ ಹೆಚ್ಚಿನದ್ದು ಇನ್ನೇನು? ಇದ್ಯಾವ ಸೀಮೆಯ ದೇಶಭಕ್ತಿ? ಎಂದು ಕೇಳಿದ್ದಾರೆ.

ಕೇಂದ್ರ ಸರ್ಕಾರ ಕೃಷಿ ಕಾನೂನು ವಾಪಸ್ ಪಡೆಯಲೇಬೇಕು. ಇದರ ಬಗ್ಗೆ ಮಾತುಕತೆಯ ಅಗತ್ಯವೂ ಇಲ್ಲ. ರೈತರ ಪ್ರತಿಭಟನೆಯಿಂದ ಭಾರತದ ಇಮೇಜ್​ಗೆ ಧಕ್ಕೆಯಾಗಿದೆ. ದೇಶದಲ್ಲಿ ವ್ಯವಸಾಯ ಮಾಡುವವರು ಭಯೋತ್ಪಾದಕರಾ? ದೇಶದ‌ ಶೇಕಡಾ 70 ರಷ್ಟು ಜನರು ಭಯೋತ್ಪಾದಕರಾ? ಕೆಂಪುಕೋಟೆಯೊಳಗೆ ಜನರನ್ನ ಬಿಟ್ಟವರಾರು? ಅವರೇ ಅದಕ್ಕೆ ಜವಾಬ್ದಾರರು. ಇದಕ್ಕೆ ಕೇಂದ್ರದ ಗೃಹ ಇಲಾಖೆಯೇ ಹೊಣೆ. ಕೇಂದ್ರದ ಗೃಹ ಇಲಾಖೆಯೇ ಜನರು ಕೆಂಪುಕೋಟೆಯೊಳಗೆ ಹೋಗದಂತೆ ತಡೆಯಬೇಕಿತ್ತು. ದೇಶ ಈಗ ಅಪಾಯದ ಸ್ಥಿತಿಯಲ್ಲಿರುವುದನ್ನ ನೋಡ್ತಿದ್ದೇನೆ. ನಾವು ಏನನ್ನೂ ಸಾಧಿಸಲು ಹೊರಟಿದ್ದೇವೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಧಾನಿ ತಕ್ಷಣವೇ ಜನರ ಕೈಗೆ ಹಣ ನೀಡಬೇಕು. ಎಂಎಸ್ಎಂಇಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ನಿಮ್ಮ ಕೆಲಸ ನೀವು ಮಾಡಿ ಅನ್ನೋದು ಪ್ರಧಾನಿಗೆ ನಾನು ಮಾಡುವ ಕಳಕಳಿಯ ವಿನಂತಿ. ರೈತರನ್ನು ತಬ್ಬಿಕೊಳ್ಳಿ, ಸಂತೈಸಿ. ಅವರ ಸಮಸ್ಯೆ ಪರಿಹಾರ ಮಾಡಿ. ಇದು ನಿಮ್ಮ ಆದ್ಯತೆಯ ಕೆಲಸವಾಗಬೇಕು. ದೇಶವನ್ನು ಕೇವಲ ಶೇ1ರಷ್ಟಿರುವ ಜನರಿಗೆ ಮಾರುವುದು ನಿಮ್ಮ ಕೆಲಸವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಮ್ಮ ಸಣ್ಣ-ಮಧ್ಯಮ ಉದ್ಯಮಗಳು ಚೀನಾ ಜೊತೆಗೆ ಸ್ಪರ್ಧಿಸುವಂತೆ ಶಕ್ತಿ ತುಂಬಿ. ಅದು ನಿಮ್ಮ ಕೆಲಸ. ದಯವಿಟ್ಟು ಧೈರ್ಯ ತೆಗೆದುಕೊಳ್ಳಿ. ದೇಶವನ್ನು ಕಾಪಾಡಿ ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಮುಗಿಸಿದರು.

Budget 2021 | ಬಜೆಟ್​ ಬಗ್ಗೆ ಕೇಂದ್ರಕ್ಕೆ ಹಲವು ಸಲಹೆ ನೀಡಿದ ರಾಹುಲ್​ ಗಾಂಧಿ

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ