ರೈತ ಚಳುವಳಿ ಸಂಘಟಿಸಲು ಹರ್ಯಾಣದಲ್ಲಿ ಮಹಾಪಂಚಾಯತ್: ರಾಕೇಶ್ ಟಿಕಾಯತ್ ಭಾಗಿ

ಇಂದು (ಫೆ.3) ನಡೆಯುವ ಮಹಾಪಂಚಾಯತ್, ರೈತರ ಚಳುವಳಿಯನ್ನು ಯಾವ ರೀತಿ ಮುಂದುವರಿಸಬೇಕು ಎಂಬ ಬಗ್ಗೆ ಚರ್ಚಿಸಲಿದೆ. ಕೇಂದ್ರ ಸರ್ಕಾರಕ್ಕೆ ರೈತ ಚಳುವಳಿ ಮತ್ತಷ್ಟು ಸಂಘಟಿತವಾಗಿ ಮುಂದುವರಿಯಲಿದೆ ಎಂಬ ಸೂಚನೆಯನ್ನು ಕೂಡ ಇಂದಿನ ಸಭೆ ನೀಡಲಿದೆ.

ರೈತ ಚಳುವಳಿ ಸಂಘಟಿಸಲು ಹರ್ಯಾಣದಲ್ಲಿ ಮಹಾಪಂಚಾಯತ್: ರಾಕೇಶ್ ಟಿಕಾಯತ್ ಭಾಗಿ
ರಾಕೇಶ್ ಟಿಕಾಯತ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 06, 2022 | 8:22 PM

ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಎರಡು ತಿಂಗಳ ಗಡಿ ದಾಟಿ ಮುಂದುವರಿಯುತ್ತಿದೆ. ರೈತರ ಹೋರಾಟದಲ್ಲಿ ಭಾಗಿಯಾಗಿರುವ ಚಳುವಳಿಗಾರರು, ಹರ್ಯಾಣ ಜಿಂದ್​ ಜಿಲ್ಲೆಯ ಖಂಡೇಲಾ ಗ್ರಾಮದಲ್ಲಿ ಖಾಪ್ ಪಂಚಾಯತ್ ಸಭೆ ನಡೆಸಲಿದ್ದಾರೆ. ಹರ್ಯಾಣದ ಎಲ್ಲಾ ಖಾಪ್ ಪಂಚಾಯತ್​​ಗಳಿಗೂ ಮಹಾಪಂಚಾಯತ್​ನಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ.

ಇಂದು (ಫೆ.3) ನಡೆಯುವ ಮಹಾಪಂಚಾಯತ್, ರೈತರ ಚಳುವಳಿಯನ್ನು ಯಾವ ರೀತಿ ಮುಂದುವರಿಸಬೇಕು ಎಂಬ ಬಗ್ಗೆ ಚರ್ಚಿಸಲಿದೆ. ಕೇಂದ್ರ ಸರ್ಕಾರಕ್ಕೆ ರೈತ ಚಳುವಳಿ ಮತ್ತಷ್ಟು ಸಂಘಟಿತವಾಗಿ ಮುಂದುವರಿಯಲಿದೆ ಎಂಬ ಸೂಚನೆಯನ್ನು ಕೂಡ ಇಂದಿನ ಸಭೆ ನೀಡಲಿದೆ. ಜಿಂದ್​ನಲ್ಲಿ ನಡೆಯುವ ಮಹಾಪಂಚಾಯತ್​​ನಲ್ಲಿ ನಾನೂ ಭಾಗವಹಿಸಲಿದ್ದೇನೆ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದರು.

ಮಹಾಪಂಚಾಯತ್​ಗೆ ರಾಕೇಶ್ ಟಿಕಾಯತ್ ಆಗಮಿಸಿದರು

ಜಿಂದ್​ನಲ್ಲಿ ನಡೆಯುತ್ತಿದ್ದ ರೈತ ಮುಖಂಡರ ಭಾಷಣದ ವೇಳೆ ಮಹಾಪಂಚಾಯತ್ ವೇದಿಕೆ ಕುಸಿದುಬಿದ್ದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರೈತರ ಜೊತೆ ಮಾತುಕತೆಗೆ ಸರ್ಕಾರ ಈಗಲೂ ಸಿದ್ಧವಿದೆ ಲೋಕಸಭೆಯಲ್ಲಿ ವಿರೋಧಪಕ್ಷಗಳು ರೈತರ ಪರ ಮಾತನಾಡಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿರುವ ಬಗ್ಗೆ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿ ತಿದ್ದುಪಡಿ ಕಾನೂನುಗಳ ಬಗ್ಗೆ ಲೋಕಸಭಾ ಸದಸ್ಯರು ಚರ್ಚಿಸಲು ಸಿದ್ಧರಿದ್ದರೆ, ಸರ್ಕಾರವೂ ಮಾತನಾಡಲು ತಯಾರಿದೆ. ಸಂಸತ್ತಿನ ಹೊರಗೆ ಅಥವಾ ಒಳಗೆ ರೈತರಿಗೆ ಸಂಬಂಧಪಟ್ಟ ಯಾವುದೇ ವಿಚಾರವನ್ನು ಚರ್ಚಿಸಲು ಕೇಂದ್ರ ಸಿದ್ಧವಿದೆ ಎಂದು ಹೇಳಿದ್ದಾರೆ. ಸಂಸತ್ ಕಲಾಪವನ್ನು ಬಡವರ, ರೈತರ ಒಳಿತಿಗಾಗಿ ನಡೆಸಲು ಅನುವು ಮಾಡಿಕೊಡಿ ಎಂದು ವಿಪಕ್ಷ ಸದಸ್ಯರನ್ನು ಕೇಳಿಕೊಂಡಿದ್ದಾರೆ. ಸರ್ಕಾರವು ರೈತರ ಜೊತೆಗೆ ಮಾತುಕತೆ ನಡೆಸಲು ಈಗಲೂ ಸಿದ್ಧವಿದೆ ಎಂದು ಪುನರುಚ್ಚರಿಸಿದ್ದಾರೆ.

ಗಣತಂತ್ರ ನಡೆದ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಚಾರಣೆ ಟ್ರಾಕ್ಟರ್ ಚಳುವಳಿ ದಿನದ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘಟನಾವಳಿಗಳ ವಿರುದ್ಧ ದಾಖಲಾಗಿದ್ದ ಹಲವು ಅರ್ಜಿಗಳನ್ನು, ಸುಪ್ರೀಂ ಕೋರ್ಟ್ ಇಂದು ವಿಚಾರಣೆ ಮಾಡಲಿದೆ. ಗಣತಂತ್ರ ದಿನ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಲು ನಿವೃತ್ತ ಜಡ್ಜ್ ಒಬ್ಬರ ನೇತೃತ್ವದಲ್ಲಿ ಸಮಿತಿ ರಚಿಸುವ ಬಗ್ಗೆಯೂ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಆ ಬಗ್ಗೆಯೂ ಇಂದು ವಿಚಾರಣೆ ನಡೆಯಲಿದೆ.

ಹರ್ಯಾಣದ ಹಲವು ಜಿಲ್ಲೆಗಳಲ್ಲಿ ಇಂಟರ್​ನೆಟ್ ಸೇವೆ ಕಡಿತ ಮುಂದುವರಿಕೆ ಹರ್ಯಾಣದ ಕೈತಾಲ್, ಪಾಣಿಪತ್, ಜಿಂದ್, ರೊಹ್ಟಕ್, ಚರ್ಕಿ ದಾದ್ರಿ, ಸೋನಿಪತ್ ಮತ್ತು ಝಾಜ್ಜರ್​ನಲ್ಲಿ ಮೊಬೈಲ್ ಇಂಟರ್​ನೆಟ್ ಸೇವೆಯನ್ನು ಇಂದು (ಫೆ.3) ಸಂಜೆ 5 ಗಂಟೆಯವರೆಗೆ ಕಡಿತಗೊಳಿಸಲಾಗಿದೆ. 2G/3G/4G/CDMA/GPRS, SMS ಸೇವೆಗಳನ್ನು ಕಡಿತ ಮಾಡಲಾಗಿದೆ. ವಾಯ್ಸ್ ಕಾಲ್ ಸೌಲಭ್ಯ ಮಾತ್ರ ಸದ್ಯ ಬಳಕೆದಾರರಿಗೆ ಲಭ್ಯವಿದೆ.

Published On - 2:42 pm, Wed, 3 February 21

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು