ಸೀಮೆಎಣ್ಣೆ ಸಬ್ಸಿಡಿ ರದ್ದು; ಕೇಂದ್ರ ಬಜೆಟ್ ಘೋಷಣೆ

ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ದಾಖಲೆಗಳ ಪ್ರಕಾರ, 2021-22ರ ಕೇಂದ್ರ ಬಜೆಟ್​ನಲ್ಲಿ ಏಪ್ರಿಲ್​ನಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ಪಾವತಿಸಲು ಯಾವುದೇ ಅವಕಾಶವನ್ನು ನೀಡುವುದಿಲ್ಲ ಎಂದಿದೆ.

ಸೀಮೆಎಣ್ಣೆ
Follow us
ರಶ್ಮಿ ಕಲ್ಲಕಟ್ಟ
|

Updated on:Feb 03, 2021 | 1:39 PM

ನವದೆಹಲಿ: ಬಡವರ ಇಂಧನ ಎಂದೇ ಕರೆಯಲ್ಪಡುವ ಸೀಮೆಎಣ್ಣೆ ದರವನ್ನು ಸ್ವಲ್ಪ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಈಗ ಸಬ್ಸಿಡಿಯನ್ನು ರದ್ದು ಮಾಡಿದೆ. ಇನ್ನು ಮುಂದೆ ಸಾರ್ವಜನಿಕ ವಿತರಣೆ ಕೇಂದ್ರದಲ್ಲಿ ಸೀಮೆಎಣ್ಣೆ ಖರೀದಿಸಲು ಮಾರುಕಟ್ಟೆಯ ಬೆಲೆಯನ್ನೇ ಗ್ರಾಹಕರು ತೆರಬೇಕಿದೆ.

ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ದಾಖಲೆಗಳ ಪ್ರಕಾರ, 2021-22ರ ಕೇಂದ್ರ ಬಜೆಟ್​ನಲ್ಲಿ ಏಪ್ರಿಲ್​ನಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ಪಾವತಿಸಲು ಯಾವುದೇ ಅವಕಾಶವನ್ನು ನೀಡುವುದಿಲ್ಲ ಎಂದಿದೆ.

ಮಾರ್ಚ್ 31ಕ್ಕೆ ಮುಕ್ತಾಯವಾಗಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಸೀಮೆಎಣ್ಣೆ ಸಬ್ಸಿಡಿ ₹2,677.32 ಕೋಟಿ ಆಗಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ ₹4,058 ಕೋಟಿ ಆಗಿತ್ತು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಸೀಮೆಎಣ್ಣೆ ಮೇಲಿನ ಸಬ್ಸಿಡಿ ಹೊರೆ ಕಡಿಮೆ ಮಾಡಲು 2016ರಲ್ಲಿ ಕೇಂದ್ರ ಸರ್ಕಾರವು ಸರ್ಕಾರದ ಒಡೆತನದಲ್ಲಿರುವ ತೈಲ ವಿತರಣಾ ಕಂಪನಿಗಳಿಗೆ 15 ದಿನಗಳಿಗೊಮ್ಮೆ ಲೀಟರ್​ಗೆ 25 ಪೈಸೆ ಏರಿಕೆ ಮಾಡಲು ಅನುಮತಿ ನೀಡಿತ್ತು ಎಂದು ತೈಲೋದ್ಯಮದಲ್ಲಿ ಸಕ್ರಿಯವಾಗಿರುವ ಸಂಸ್ಥೆಗಳ ಮೂಲಗಳು ಹೇಳಿವೆ.

ಇತ್ತ ಸಾರ್ವಜನಿಕ ವಿತರಣಾ ಕೇಂದ್ರಗಳು ಸೀಮೆಎಣ್ಣೆ ಬೆಲೆಯನ್ನು ಪರಿಷ್ಕರಿಸಿದ್ದು, ಮಾರುಕಟ್ಟೆ ಬೆಲೆಯಲ್ಲಿ ಗ್ರಾಹಕರಿಗೆ  ನೀಡಲಿವೆ.

ಮೇ 2020ರಲ್ಲಿ ಲೀಟರ್​ಗೆ ₹13.96 ಇದ್ದ ಸೀಮೆಎಣ್ಣೆ ಈಗ ₹30.12ಕ್ಕೇರಿದೆ. ಜನವರಿಯಲ್ಲಿ ಲೀಟರ್ ಸೀಮೆಎಣ್ಣೆಗೆ ₹3.87 ಪೈಸೆ ಏರಿಕೆ ಆಗಿತ್ತು.

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

Published On - 1:13 pm, Wed, 3 February 21

‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ

ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ

ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ

ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ

ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?

6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್

ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ

ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?

ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್