ಸಂಸತ್ ಭದ್ರತಾ ಲೋಪ: ಆರೋಪಿಗಳಿಗೆ ಪೊಲೀಸರು ಕೇಳಿದ 18 ಪ್ರಶ್ನೆಗಳಿವು

|

Updated on: Dec 16, 2023 | 3:55 PM

Parliament Security Breach: ಸಂಸತ್ತಿನ ಭದ್ರತಾ ಲೋಪದ ವಿಷಯದ ಬಗ್ಗೆ ದೆಹಲಿ ಪೊಲೀಸರ ವಿಶೇಷ ಸೆಲ್ ತನಿಖೆ ನಡೆಸುತ್ತಿದೆ. ಆರನೇ ಆರೋಪಿ ಮಹೇಶ್ ಕುಮಾವತ್​ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳನ್ನು ಪೊಲೀಸರು ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಎಲ್ಲಾ ಆರೋಪಿಗಳ ಉದ್ದೇಶ, ಅವರ ಸಂಚು ಮತ್ತು ಅವರ ಹಿನ್ನೆಲೆಯ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಈವರೆಗೆ ಹಲವು ಸುಳಿವು ಸಿಕ್ಕಿದೆ.

ಸಂಸತ್ ಭದ್ರತಾ ಲೋಪ: ಆರೋಪಿಗಳಿಗೆ ಪೊಲೀಸರು ಕೇಳಿದ 18 ಪ್ರಶ್ನೆಗಳಿವು
ಸಂಸತ್ ಭದ್ರತಾ ಲೋಪ: ಆರೋಪಿಗಳಿಗೆ ಪೊಲೀಸರು ಕೇಳಿದ 18 ಪ್ರಶ್ನೆಗಳಿವು
Follow us on

ನವದೆಹಲಿ, ಡಿಸೆಂಬರ್ 16: ಸಂಸತ್ತಿನ ಒಳಗೆ ಮತ್ತು ಹೊರಗೆ ಡಿಸೆಂಬರ್ 13 ರಂದು ನಡೆದ ಗದ್ದಲ ಮತ್ತು ಸ್ಮೋಕ್ ಬಾಂಬದ ದಾಳಿಯ (Parliament Security Breach) ಆರೋಪಿಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರ (Delhi Police) ವಿಶೇಷ ಸೆಲ್ ಆರೋಪಿಗಳ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಶೋಧಿಸಿದೆ. ವಿಚಾರಣೆ ವೇಳೆ ಆರೋಪಿಗಳು ಪೊಲೀಸರಿಗೆ ಹಲವು ವಿಚಾರಗಳನ್ನು ಹೇಳಿದ್ದರು. ಅವರು ಹೇಗೆ ಒಟ್ಟಿಗೆ ಸೇರಿದರು ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ.

ಇನ್ನೋರ್ವ ಆರೋಪಿ ಮಹೇಶ್ ಕುಮಾವತ್​​ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲಾ ಆರೋಪಿಗಳ ಉದ್ದೇಶ ಮತ್ತು ಅವರ ಹಿನ್ನೆಲೆಯ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ ಪೊಲೀಸರು ಪಿತೂರಿಯ ಹಲವು ಸುಳಿವುಗಳನ್ನು ಕಂಡುಕೊಂಡಿದ್ದಾರೆ. ಆರೋಪಿಗಳ ಚಾಟ್‌ನಿಂದ ಅವರ ಉದ್ದೇಶಗಳ ಬಗ್ಗೆ ಪೊಲೀಸರಿಗೆ ತಿಳಿದು ಬಂದಿದೆ. ಈ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಸಂಸತ್ ಹಗರಣದ ಆರೋಪಿಗಳಿಗೆ ಇದುವರೆಗೆ 18 ಪ್ರಶ್ನೆಗಳನ್ನು ಕೇಳಿದ್ದು, ಅವುಗಳು ಇಲ್ಲಿವೆ.

ಪೊಲೀಸರು ಆರೋಪಿಗಳಿಗೆ ಕೇಳಿದ ಪ್ರಶ್ನೆಗಳಿವು

  • ನೀವು ಯಾವಾಗ ಮತ್ತು ಎಲ್ಲಿ ಭೇಟಿಯಾದಿರಿ?
  • ಈ ಕೃತ್ಯ ಎಸಗಲು ನಿಮಗೆ ಯಾರು ಹೇಳಿದರು?
  • ಯಾರು ಏನು ಮಾಡಬೇಕು, ಯಾರು ಸಂಸತ್ತಿನ ಒಳಗೆ ಹೋಗಬೇಕು ಮತ್ತು ಯಾರು ಹೊರಗೆ ಇರಬೇಕೆಂದು ಎಂಬುದನ್ನು ನಿರ್ಧರಿಸಿದವರು ಯಾರು?
  • ನೀವು ಯಾವಾಗ ಭೇಟಿಯಾದಿರಿ ಮತ್ತು ಕೃತ್ಯ ಎಸಗುವ ಸಂಚು ಯಾವಾಗ ಪ್ರಾರಂಭವಾಯಿತು?
  • ಕೃತ್ಯ ಎಸಗಲು ಎಷ್ಟು ಬಾರಿ ಮತ್ತು ಎಲ್ಲಿ ಭೆಟಿಯಾಗಿದ್ದೀರಿ?
  • ಸ್ಮೋಕ್ ಬಾಂಬ್ ಯಾರ ಯೋಜನೆ ಮತ್ತು ಅದನ್ನು ತಂದವರು ಯಾರು?
  • ನೀವು ಹೊಗೆ ಸ್ಮೋಕ್ ಬಾಂಬ್​​ಗಳನ್ನು ಎಲ್ಲಿಂದ ಖರೀದಿಸಿದ್ದೀರಿ ಮತ್ತು ನೀವು ಎಷ್ಟು ಸ್ಮೋಕ್ ಬಾಂಬ್​ಗಳನ್ನು ಖರೀದಿಸಿದ್ದೀರಿ?
  • ನೀವು ಡಿಸೆಂಬರ್ 13 ರ ದಿನಾಂಕವನ್ನೇ ಏಕೆ ಆರಿಸಿದ್ದೀರಿ? ಅದನ್ನು ಯಾರು ನಿರ್ಧರಿಸಿದ್ದಾರೆ?
  • ಈ ವಿಚಾರದಲ್ಲಿ ನೀವೊಬ್ಬರೇ ಭಾಗಿಯಾಗಿದ್ದೀರಾ ಅಥವಾ ಈ ಘಟನೆಯ ಸಂಚಿನ ಬಗ್ಗೆ ಬೇರೆಯವರಿಗೂ ತಿಳಿದಿತ್ತೇ?
  • ಘಟನೆ ನಡೆದ ದಿನ ನಿಮ್ಮೊಂದಿಗೆ ಬೇರೆ ಯಾರೆಲ್ಲ ಬಂದಿದ್ದರು?
  • ಸಂಸತ್​ ಭವನಕ್ಕೆ ಬರುವ ಮೊದಲು ಎಲ್ಲಿಗೆ ತಲುಪಿದ್ದೀರಿ?
  • ಲಲಿತ್ ಎಲ್ಲರ ಫೋನ್ ಅನ್ನು ತನ್ನ ಬಳಿ ಇಟ್ಟುಕೊಂಡು ವಿಡಿಯೋ ಮಾಡಬೇಕು ಎಂದು ನಿರ್ಧರಿಸಿದ್ದವರು ಯಾರು?
  • ಕೃತ್ಯದ ಹಿಂದಿನ ನಿಮ್ಮ ನಿಜವಾದ ಉದ್ದೇಶವೇನು?
  • ನಿಮಗೂ ದೇಶದ ಶತ್ರುಗಳು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಏನಾದರೂ ಸಂಪರ್ಕವಿದೆಯೇ?
  • ನೀವು ಯಾವ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದೀರಿ ಮತ್ತು ನೀವು ದೇಶದಲ್ಲಿ ಯಾವ ಪ್ರದರ್ಶನಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದೀರಿ?

ಇದನ್ನೂ ಓದಿ: ಸಂಸತ್ ಭದ್ರತಾ ಲೋಪ: 6ನೇ ಆರೋಪಿ ಮಹೇಶ್ ಕುಮಾವತ್ ಬಂಧನ

ಲಲಿತ್ ಝಾಗೆ ಪೊಲೀಸ್ ಪ್ರಶ್ನೆಗಳು?

  • ತಲೆಮರೆಸಿಕೊಂಡ ನಂತರ ನೀವು ಯಾರೊಂದಿಗೆ ಸಂಪರ್ಕದಲ್ಲಿದ್ದಿರಿ?
  • ನೀವು ತಂಗಿದ್ದ ಹೋಟೆಲ್ ಎಲ್ಲಿದೆ?
  • ಘಟನೆಯನ್ನು ನಡೆಸುವಲ್ಲಿ ಹಣಕಾಸಿನ ವಹಿವಾಟು ಹೇಗೆ ನಡೆಯಿತು? ಅನುದಾನ ಎಲ್ಲಿಂದ ಬಂತು?

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ