AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ ಭದ್ರತಾ ಲೋಪ: 6ನೇ ಆರೋಪಿ ಮಹೇಶ್ ಕುಮಾವತ್ ಬಂಧನ

ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿದಂತೆ 6ನೇ ಆರೋಪಿ ಮಹೇಶ್ ಕುಮಾವತ್​​​ನ್ನು ಬಂಧನ ಮಾಡಲಾಗಿದೆ.

ಸಂಸತ್ ಭದ್ರತಾ ಲೋಪ: 6ನೇ ಆರೋಪಿ ಮಹೇಶ್ ಕುಮಾವತ್ ಬಂಧನ
ಸಂಸತ್​Image Credit source: NDTV
Follow us
ಅಕ್ಷಯ್​ ಪಲ್ಲಮಜಲು​​
|

Updated on:Dec 16, 2023 | 4:01 PM

ದೆಹಲಿ, ಡಿ.16: ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿದಂತೆ 6ನೇ ಆರೋಪಿ ಮಹೇಶ್ ಕುಮಾವತ್​​​ನ್ನು ಬಂಧನ ಮಾಡಲಾಗಿದೆ. ಡಿಸೆಂಬರ್​​ 13ರಂದು ಸಂಸತ್​​ನಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಧಿವೇಶನ ಬಾವಿಗೆ ಇಳಿದು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ ಒಂದು ಬಾರಿ ಎಲ್ಲರಿಗೂ ಗೊಂದಲವನ್ನು ಸೃಷ್ಟಿಸಿತ್ತು. ಮೈಸೂರು ಸಂಸದ ಪ್ರತಾಪ್​​​ ಸಿಂಹ ಅವರ ಮೂಲಕ ಸಂಸತ್​​​ ಒಳಗೆ ಬರಲು ಪಾಸ್​​​ ಪಡೆದಿದ್ದಾರೆ ಎಂದು ಹೇಳಲಾಗಿದೆ. ನಂತರ ಸಂಸತ್​​​​ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಅಶ್ರುವಾಯು ಸಿಡಿಸಿದ್ದಾರೆ. ಈ ಇಬ್ಬರು ಪ್ಲಾನ್​​​ ಪ್ರಕಾರವೇ ಎಲ್ಲವನ್ನು ಮಾಡಿದ್ದಾರೆ. ನಂತರ ಇವರನ್ನು ಹಿಡಿದು ಸಂಸದರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಆರೋಪಿಗಳನ್ನು ಸಾಗರ್​​ ಶರ್ಮ ಮತ್ತು ಮನೋರಂಜನ್​​​ ಎಂದು ಗುರುತಿಸಲಾಗಿತ್ತು. ಇದರ ಮಾಸ್ಟರ್​​ ಮೈಂಡ್​​​ ಲಲಿತ್ ಝಾ ಎಂದು ಹೇಳಲಾಗಿದೆ. ಇನ್ನು ಸಂಸತ್ತಿನ ಹೊರಗೆ ಪ್ರತಿಭಟನೆಯನ್ನು ಮಾಡುತ್ತಿದ್ದ ಮತ್ತಿಬ್ಬರನ್ನು ಕೂಡ ಬಂಧಿಸಿಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 7 ಜನ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.

ಈಗಾಗಲೇ ಮನೋರಂಜನ್​​​ ಹಾಗೂ ಸಾಗರ್​​ ಶರ್ಮ ಸೇರಿದಂತೆ 5 ಜನರನ್ನು ಬಂಧಿಸಲಾಗಿದೆ. ಇದೀಗ ಮತ್ತೊಬ್ಬ ಆರನೇ ಆರೋಪಿ ಮಹೇಶ್ ಕುಮಾವತ್ ದೆಹಲಿ ಪೊಲೀಸರು ಬಂಧಿಸಿದ್ದಾರೆ. ನೆನ್ನೆ ಈ ಪ್ರಕರಣದ ಮಾಸ್ಟರ್​​ ಮೈಂಡ್ ಲಲಿತ್ ಝಾನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ನಂತರ ದೆಹಲಿ ಕೋರ್ಟಿಗೆ ಆತನನ್ನು ಹಾಜರುಪಡಿಸಿದ್ದಾರೆ. ಕೋರ್ಟ್​​​ ಆತನನ್ನು ಏಳು ದಿನಗಳ ಕಾಲ ಪೊಲೀಸ್​​​ ಕಸ್ಟಡಿಗೆ ವಹಿಸಲಾಗಿದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ: ಆರೋಪಿ ಸಾಗರ್ ಸಂಸತ್ತಿನೆದುರು ಬೆಂಕಿ ಹಚ್ಚಿಕೊಳ್ಳಲು ಪ್ಲ್ಯಾನ್​ ಮಾಡಿದ್ದ

ಸಂಸತ್​​​​ ಅಧಿವೇಶನದಲ್ಲಿ ಅಶ್ರುವಾಯು ಸಿಡಿಸಿದ ಆರೋಪಿಗಳ ತೀವ್ರ ತನಿಖೆ ನಡೆಸಲಾಗುತ್ತಿದೆ. ಇವರ ಹಿಂದೆ ಯಾರಿದ್ದಾರೆ. ಭಯೋತ್ಪಾದಕರ ಜತೆಗೆ ಸಂಬಂಧ ಇಟ್ಟುಕೊಂಡಿದ್ದರ ಎಂಬ ತನಿಖೆ ನಡೆಲಾಗುತ್ತಿದೆ. ಇದರ ನಡುವೆ ಸಂಸತ್​​​ ಒಳಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಸಂಸತ್​​​ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆಯನ್ನು ಕೂಡ ಮಾಡುತ್ತಿದೆ. ಗೃಹಸಚಿವ ಅಮಿತ್​​​​ ಶಾ ಈ ಬಗ್ಗೆ ಉತ್ತರ ನೀಡಬೇಕು ಹಾಗೂ ರಾಜೀನಾಮೆ ನೀಡಬೇಕು ಎಂದು ಹೇಳಿದೆ.

ಆರೋಪಿ ಸಾಗರ್ ಸಂಸತ್ತಿನೆದುರು ಬೆಂಕಿ ಹಚ್ಚಿಕೊಳ್ಳಲು ಪ್ಲ್ಯಾನ್

ಬಂಧಿತ ಆರೋಪಿ ಸಾಗರ್ ಶರ್ಮಾ ತಾನು ಸಂಸತ್ತಿನ ಹೊರಗೆ ಬೆಂಕಿ ಹಚ್ಚಿಕೊಳ್ಳಲು ತೀರ್ಮಾನಿಸಿದ್ದೆ ಎಂದು ಹೇಳಿದ್ದಾರೆ. ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಇಬ್ಬರು ವ್ಯಕ್ತಿಗಳು ಸದನಕ್ಕೆ ನುಗ್ಗಿ ಹೊಗೆ ಬಾಂಬ್​ ಹಾಕಿದ್ದರು. ದೆಹಲಿ ಪೊಲೀಸರ ವಿಚಾರಣೆ ವೇಳೆ ಸಾಗರ್ ತನ್ನನ್ನು ತಾನು ಸುಟ್ಟುಕೊಳ್ಳಲು ಬಯಸಿದ್ದೆ, ಆದರೆ ನಂತರ ಈ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ಹೇಳಿದ್ದಾನೆ. ಜೆಲ್​ ಒಂದನ್ನು ಆನ್​ಲೈನ್​ನಲ್ಲಿ ಆರ್ಡರ್ ಮಾಡಲು ಬಯಸಿದ್ದೆ ಈ ಜೆಲ್​ ಅನ್ನು ದೇಹದ ಮೇಲೆ ಹಚ್ಚಿಕೊಳ್ಳುವ ಮೂಲಕ ಬೆಂಕಿಯಿಂದ ರಕ್ಷಣೆ ಪಡೆಯಬಹುದು, ಆದರೆ ಆನ್​ಲೈನ್​ ಹಣ ಪಾವತಿ ಸಾಧ್ಯವಾಗಿರಲಿಲ್ಲ, ಹೀಗಾಗಿ ಜೆಲ್ ಖರೀದಿಸಲಾಗಲಿಲ್ಲ, ನಂತರ ಸಂಸತ್ತಿನ ಹೊರಗೆ ಬೆಂಕಿ ಹಚ್ಚಿಕೊಳ್ಳುವ ಯೋಜನೆಯನ್ನು ಕೈಬಿಡಲಾಯಿತು ಎಂದಿದ್ದಾನೆ.

ಸಂಸತ್ತಿನೊಳಗೆ ನಡೆದ ಹೊಗೆ ದಾಳಿ ಹಿಂದಿರುವ ಮಾಸ್ಟರ್​ ಮೈಂಡ್​ ಲಲಿತ್ ಅಲ್ಲ!

ಸಂಸತ್ ಭವನದೊಳಗೆ ಅಶ್ರುವಾಯು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಂದು ಲಲಿತ್ ಝಾ ಅವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಈ ದಾಳಿಯ ಮಾಸ್ಟರ್​ ಮೈಂಡ್​ ಅವರೇ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಹೇಶ್​ ಕುಮಾವತ್ ಎಂಬ ವ್ಯಕ್ತಿಯೇ ಮಾಸ್ಟರ್​ ಮೈಂಡ್​. ಮಹೇಶ್ ಕೂಡ ಭಗತ್ ಸಿಂಗ್ ಅಭಿಮಾನಿಗಳ ಸಂಘದೊಂದಿಗೆ ಸಂಬಂಧ ಹೊಂದಿದ್ದಾನೆ. ಆರೋಪಿ ಲಲಿತ್ ಝಾ ಅವರನ್ನು ತಡರಾತ್ರಿ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. ಡಿಸಿಪಿ ಮತ್ತು ಹೆಚ್ಚುವರಿ ಸಿಪಿ ಸೇರಿದಂತೆ ವಿಶೇಷ ಸೆಲ್‌ನ ಹಲವು ಇನ್ಸ್‌ಪೆಕ್ಟರ್‌ಗಳು ಅವರನ್ನು ವಿಚಾರಣೆ ನಡೆಸಿದರು. ಮೂಲಗಳ ಪ್ರಕಾರ, ಆರೋಪಿ ಲಲಿತ್ ಝಾ ವಿಶೇಷ ಸೆಲ್ ಅಧಿಕಾರಿಗಳಿಗೆ ಸಂಪೂರ್ಣ ಕಥೆಯನ್ನು ಹೇಳಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:00 pm, Sat, 16 December 23