ಮಹಿಳಾ ಕೋಟಾ, ಪ್ರಜಾಪ್ರಭುತ್ವ: ಸಂಸತ್​​ ಒಳನುಗ್ಗಿದವರ ಸಾಮಾಜಿಕ ಮಾಧ್ಯಮಗಳಲ್ಲಿದ್ದ ಬರಹಗಳಿವು

|

Updated on: Dec 14, 2023 | 11:43 AM

ಲೋಕಸಭೆಯ ಭದ್ರತೆ ಉಲ್ಲಂಘಿಸಿ ಒಳನುಗ್ಗಿದವರಲ್ಲಿ ಶರ್ಮಾ ಕೂಡ ಒಬ್ಬ. ಆತ ಮತ್ತು ಇನ್ನೊಬ್ಬ ಆರೋಪಿ ಮನೋರಂಜನ್ ಡಿ ಭದ್ರತೆ ಉಲ್ಲಂಘಿಸುವಲ್ಲಿ ಯಶಸ್ವಿಯಾಗಿದ್ದರು ಮತ್ತು ಅಧಿವೇಶನದ ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಯನ್ನು ಪ್ರವೇಶಿಸಿದ್ದರು.

ಮಹಿಳಾ ಕೋಟಾ, ಪ್ರಜಾಪ್ರಭುತ್ವ: ಸಂಸತ್​​ ಒಳನುಗ್ಗಿದವರ ಸಾಮಾಜಿಕ ಮಾಧ್ಯಮಗಳಲ್ಲಿದ್ದ ಬರಹಗಳಿವು
ಸಾಗರ್ ಶರ್ಮಾ & ನೀಲಂ
Image Credit source: Facebook
Follow us on

ನವದೆಹಲಿ, ಡಿಸೆಂಬರ್ 14: ಸಂಸತ್​​ನ (Parliment) ಒಳನುಗ್ಗಿದರವಲ್ಲಿ ಒಬ್ಬನಾದ ಸಾಗರ್ ಶರ್ಮಾ (Sagar Sharma) ಕೃತ್ಯ ಎಸಗುವುದಕ್ಕೂ ಮುನ್ನ ಸಾಮಾಜಿಕ ಮಾಧ್ಯಮ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ಗೆಲುವು ಅಥವಾ ಸೋಲು ಲೆಕ್ಕಿಸದೆ ಪ್ರಯತ್ನವನ್ನು ಮಾಡುವುದು ಮುಖ್ಯ ಎಂದು ಬರೆದಿದ್ದಾನೆ. ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಿಂದಿಯಲ್ಲಿ ಆತ, ‘ನೀವು ಗಲ್ಲಬಹುದು ಅಥವಾ ಸೋಲಬಹುದು, ಪ್ರಯತ್ನಿಸುವುದು ಬಹು ಮುಖ್ಯ’ ಎಂದು ಬರೆದಿಕೊಂಡಿದ್ದ.

ಮತ್ತೊಂದು ಪೋಸ್ಟ್‌ನಲ್ಲಿ, ಕನಸುಗಳನ್ನು ನನಸಾಗಿಸಲು ಕಠಿಣ ಪರಿಶ್ರಮದ ಅಗತ್ಯ ಎಂದು ಬರೆದಿದ್ದಾನೆ. ಈ ಪೋಸ್ಟ್ ಕೂಡ ಹಿಂದಿಯಲ್ಲಿದ್ದು, ‘ಜೀವನದಲ್ಲಿ ಸುಂದರವಾದದ್ದು ಏನಾದರೂ ಇದ್ದರೆ ಅದು ಕನಸುಗಳು. ಹಗಲು ರಾತ್ರಿ, ನಾವು ಯಾವುದಕ್ಕಾಗಿ ಬದುಕುತ್ತಿದ್ದೇವೆ ಎಂಬುದನ್ನು ಅವು ನಮಗೆ ನೆನಪಿಸುತ್ತವೆ. ಕನಸುಗಳಿಲ್ಲದೆ, ಜೀವನವು ಅರ್ಥಹೀನವಾಗಿದೆ ಮತ್ತು ನಿಮ್ಮ ಕನಸುಗಳ ಕಡೆಗೆ ಶ್ರಮಿಸದಿರುವುದು ಹೆಚ್ಚು ನಿರರ್ಥಕವಾಗಿದೆ’ ಎಂದು ಉಲ್ಲೇಖಿಸಿದ್ದ.

ಲೋಕಸಭೆಯ ಭದ್ರತೆ ಉಲ್ಲಂಘಿಸಿ ಒಳನುಗ್ಗಿದವರಲ್ಲಿ ಶರ್ಮಾ ಕೂಡ ಒಬ್ಬ. ಆತ ಮತ್ತು ಇನ್ನೊಬ್ಬ ಆರೋಪಿ ಮನೋರಂಜನ್ ಡಿ ಭದ್ರತೆ ಉಲ್ಲಂಘಿಸುವಲ್ಲಿ ಯಶಸ್ವಿಯಾಗಿದ್ದರು ಮತ್ತು ಅಧಿವೇಶನದ ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಯನ್ನು ಪ್ರವೇಶಿಸಿದ್ದರು.

ಅದೇ ಸಮಯದಲ್ಲಿ, ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ಸಂಸತ್ತಿನ ಆವರಣದ ಹೊರಗೆ ‘ಸರ್ವಾಧಿಕಾರ ಕೆಲಸ ಮಾಡಡು’ ಎಂದು ಘೋಷಣೆಗಳನ್ನು ಕೂಗುತ್ತಾ ಡಬ್ಬಿಗಳಿಂದ ಬಣ್ಣದ ಅನಿಲವನ್ನು ಸಿಂಪಡಿಸಿದ್ದರು.

ಕೆಲವು ದಿನಗಳ ಹಿಂದೆ, ನವೆಂಬರ್ 11 ರಂದು ನೀಲಂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡರು. ಸಂಸತ್ತಿನ ದಾಳಿಯ ಮೊದಲು ಎಕ್ಸ್​​​ನಲ್ಲಿ (ಹಿಂದೆ ಟ್ವಿಟರ್) ಮಾಡಿದ್ದ ಪೋಸ್ಟ್‌ನಲ್ಲಿ, ಸಂಸತ್ತು ಮತ್ತು ಶಾಸಕಾಂಗ ಸಭೆಯಲ್ಲಿ ಮಹಿಳೆಯರಿಗೆ ಶೇ 50 ರ ಕೋಟಾ ಏಕೆ ಇಲ್ಲ ಎಂದು ಪ್ರಶ್ನಿಸಿದ್ದರು.

“ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ 50 ಪ್ರತಿಶತ ಮೀಸಲಾತಿ ಇರಬೇಕು. ಹರಿಯಾಣದಲ್ಲಿ, ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ 50 ಪ್ರತಿಶತ ಮೀಸಲಾತಿ ಇದೆ, ಆದ್ದರಿಂದ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಏಕೆ ಮಾಡಬಾರದು?” ಎಂದು ಆಕೆ ನವೆಂಬರ್ 11 ರಂದು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಸಂಸತ್​ನಲ್ಲಿ ಭದ್ರತಾ ಲೋಪ: 8 ಸಿಬ್ಬಂದಿ ಅಮಾನತು

ನೀಲಂ ಮತ್ತು ಸಾಗರ್ ಶರ್ಮಾ ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳ ನಡುವಿನ ಒಂದು ಸಾಮಾನ್ಯ ಸಂಗತಿಯೆಂದರೆ, ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ್ ರಾಜಗುರು ಅವರ ಬಗ್ಗೆ ತಮ್ಮ ಅಭಿಮಾನವನ್ನು ತೋರಿಸಲು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ