ಸಂಸತ್​ನಿಂದಲೇ ಚೀನಾಗೆ ಖಡಕ್ ವಾರ್ನಿಂಗ್, ತಂಟೆಗೆ ಬಂದ್ರೆ ಯಾವುದಕ್ಕೂ ಸಿದ್ಧ: ರಾಜನಾಥ್

ದೆಹಲಿ: ಭಾರತ-ಚೀನಾ ಗಡಿಯಲ್ಲಿ ಆಗ್ತಿರೋ ಸಂಘರ್ಷದ ಬಗ್ಗೆ ಕೊನೆಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ದೇಶದ ಸೈನಿಕರ ಸಾಹಸವನ್ನ ಕೊಂಡಾಡಿದ್ದಾರೆ. ಆದ್ರೆ, ಉತ್ತರಿಸಬೇಕಿರೋ ವಿಷಯಗಳಿಗೆ ಸರಿಯಾದ ಉತ್ತರ ನೀಡದೇ ನುಣುಚಿಕೊಂಡಿದ್ದಾರೆ. ಲಡಾಖ್ ಗಡಿಯಲ್ಲಿ ಚೀನಾ ಪದೇಪದೆ ಕ್ಯಾತೆ ತೆಗೆಯುತ್ತಿದೆ. ಚೀನಾ ಭಾರತದ ಭೂಮಿಯನ್ನ ಆಕ್ರಮಿಸಿರೋ ಬಗ್ಗೆ ಕೇಂದ್ರ ಸರಕಾರ ಉತ್ತರ ಕೊಡಬೇಕು ಅಂತಾ ಪ್ರತಿಪಕ್ಷಗಳು ಒತ್ತಾಯ ಮಾಡ್ತಿದ್ವು. ಇದಕ್ಕೆ ಉತ್ತರ ನೀಡಿರೋ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಡಿಯಲ್ಲಿ ಪರಿಸ್ಥಿತಿ ಹೇಗಿದೆ […]

ಸಂಸತ್​ನಿಂದಲೇ ಚೀನಾಗೆ ಖಡಕ್ ವಾರ್ನಿಂಗ್, ತಂಟೆಗೆ ಬಂದ್ರೆ ಯಾವುದಕ್ಕೂ ಸಿದ್ಧ: ರಾಜನಾಥ್
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 16, 2020 | 7:52 AM

ದೆಹಲಿ: ಭಾರತ-ಚೀನಾ ಗಡಿಯಲ್ಲಿ ಆಗ್ತಿರೋ ಸಂಘರ್ಷದ ಬಗ್ಗೆ ಕೊನೆಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ದೇಶದ ಸೈನಿಕರ ಸಾಹಸವನ್ನ ಕೊಂಡಾಡಿದ್ದಾರೆ. ಆದ್ರೆ, ಉತ್ತರಿಸಬೇಕಿರೋ ವಿಷಯಗಳಿಗೆ ಸರಿಯಾದ ಉತ್ತರ ನೀಡದೇ ನುಣುಚಿಕೊಂಡಿದ್ದಾರೆ.

ಲಡಾಖ್ ಗಡಿಯಲ್ಲಿ ಚೀನಾ ಪದೇಪದೆ ಕ್ಯಾತೆ ತೆಗೆಯುತ್ತಿದೆ. ಚೀನಾ ಭಾರತದ ಭೂಮಿಯನ್ನ ಆಕ್ರಮಿಸಿರೋ ಬಗ್ಗೆ ಕೇಂದ್ರ ಸರಕಾರ ಉತ್ತರ ಕೊಡಬೇಕು ಅಂತಾ ಪ್ರತಿಪಕ್ಷಗಳು ಒತ್ತಾಯ ಮಾಡ್ತಿದ್ವು. ಇದಕ್ಕೆ ಉತ್ತರ ನೀಡಿರೋ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಡಿಯಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಹೇಳಿದ್ದಾರೆ‌.

ಚೀನಾಗೆ ಭಾರತೀಯ ಸೇನೆಯಿಂದ ಖಡಕ್ ಸಂದೇಶ ರವಾನೆ
ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಸಂಸತ್ತಿನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ. ಈವರೆಗೆ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಮುಂದುವರಿದಿದೆ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಳ್ಳಲು ಮಾಡ್ತಿರೋ ಪ್ರಯತ್ನಗಳು ಅಲ್ಪ ಫಲ ನೀಡಿವೆ. ಗಡಿಯಲ್ಲಿ ಚೀನಾ ಸೈನಿಕರು ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ ಅಂತಾ ರಾಜನಾಥ್​ ಸಿಂಗ್ ಹೇಳಿದ್ರು.

ಗಡಿ ಬಿಕ್ಕಟ್ಟು ಬಗೆಹರಿಯಲು ಚೀನಾ ಪ್ರಯತ್ನಿಸುತ್ತಿಲ್ಲ. ಪದೇಪದೆ ನಿಯಮ ಉಲ್ಲಂಘನೆ ಮಾಡುತ್ತಿದೆ. ಚೀನಾ ಸೈನಿಕರು ಹಿಂಸಾತ್ಮಕ ದಾಳಿ ಮೂಲಕ ಹಿಂದಿನ ಎಲ್ಲ ಒಪ್ಪಂದಗಳನ್ನೂ ಉಲ್ಲಂಘಿಸಿದ್ದಾರೆ. ನಮ್ಮ ಭೂಪ್ರದೇಶಗಳ ರಕ್ಷಣೆಗೆ ಸೇನೆ ಸಮರ್ಥವಾಗಿದೆ ಅಂತಾ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ರು.

ಆದ್ರೆ, ರಾಜನಾಥ್ ಸಿಂಗ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ಭಾರತದ ಭೂ ಪ್ರದೇಶ ಆಕ್ರಮಿಸಿಕೊಂಡಿದೆಯೋ? ಇಲ್ಲವೋ? ಅನ್ನೋದನ್ನ ಹೇಳಿ ಅಂತಾ ಟ್ವೀಟ್ ಮಾಡಿದ್ದಾರೆ. ನಮ್ಮ ದೇಶ ಸದಾ ಭಾರತೀಯ ಸೇನೆ ಜೊತೆ ನಿಂತಿದೆ ಮತ್ತು ಎಂದಿಗೂ ನಿಲ್ಲುತ್ತದೆ. ಆದ್ರೆ, ಮೋದಿಯವರೇ ನೀವು ಯಾವತ್ತು ಚೀನಾದ ವಿರುದ್ಧ ನಿಲ್ಲುತ್ತೀರಿ? ಅಂತಾ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್​ನಲ್ಲಿ ಟಾಂಗ್ ನೀಡಿದ್ದಾರೆ.

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಚೀನಾ ಭಾರತದ ಭೂಭಾಗವನ್ನ ಅತಿಕ್ರಮಿಸಿದ್ಯಾ ಇಲ್ವಾ ಅನ್ನೋ ಕುರಿತು ಸ್ಪಷ್ಟವಾಗಿ ಹೇಳದಿದ್ರೂ. ಭಾರತೀಯ ಸೈನಿಕರ ಶೌರ್ಯ, ಸಾಹಸವನ್ನ ಗುಣಗಾನ ಮಾಡಿ ತಿಪ್ಪೇ ಸಾರಿಸೋ ಕೆಲಸ ಮಾಡಿರೋದಂತೂ ಸ್ಪಷ್ಟವಾಗಿದೆ.

Published On - 6:57 am, Wed, 16 September 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us