ದೆಹಲಿ : ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಅವರು ಮಂಡಿಸಿದ್ದ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ( Farm Laws Repeal Bill 2021) ಅಂಗೀಕಾರವಾದ ನಂತರ ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆೆಗೆ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಿ ಅಂಗೀಕಾರವಾಗಿದೆ. ವಿಪಕ್ಷಗಳ ಗದ್ದಲದ ನಡುವೆಯೇ ಮಸೂದೆ ಅಂಗೀಕಾರವಾಗಿದೆ. ಈ ಮೊದಲು ಕಲಾಪವನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡುಚಳಿಗಾಲದ ಅಧಿವೇಶನವನ್ನು ಸಕ್ರಿಯಗೊಳಿಸಲು ‘ಪ್ರಜಾಪ್ರಭುತ್ವ ಮತ್ತು ಸಂಸದೀಯ ಸ್ಥಳ’ವನ್ನು ಬಳಸಿ ಎಂದು ಸದಸ್ಯರಲ್ಲಿ ಒತ್ತಾಯಿಸಿದರು. ಕಳೆದ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ಘಟನೆಗಳ ಬಗ್ಗೆ ಆತ್ಮಾವಲೋಕನ ಮಾಡುವಲ್ಲಿ ಸಂಬಂಧಪಟ್ಟವರೆಲ್ಲ ವಿಫಲರಾಗಿದ್ದಾರೆ ಎಂದು ನಾಯ್ಡು ವಿಷಾದಿಸಿದರು. ಕೃಷಿ ಕಾನೂನು ರದ್ದತಿ ಮಸೂದೆ ಅಂಗೀಕಾರವಾದ ನಂತರ ರಾಜ್ಯಸಭೆಯನ್ನು ಅರ್ಧ ಗಂಟೆ ಮುಂದೂಡಲಾಗಿದೆ.
Union Agriculture Minister Narendra Singh Tomar tables the Farm Laws Repeal Bill 2021 in Rajya Sabha
The Bill has been passed in the Lok Sabha. pic.twitter.com/dXsbwZKVRy
— ANI (@ANI) November 29, 2021
ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದನ್ನು ನಾವು ಸ್ವಾಗತಿಸುತ್ತೇವೆ. ಲಖೀಂಪುರ ಖೇರಿ ಘಟನೆ ಮತ್ತು ವಿದ್ಯುತ್ ಬಿಲ್ ಸೇರಿದಂತೆ ಆಂದೋಲನದ ಸಂದರ್ಭದಲ್ಲಿ ನಡೆದ ಹಲವಾರು ಘಟನೆಗಳ ಬಗ್ಗೆ ನಾವು ಚರ್ಚೆಗೆ ಒತ್ತಾಯಿಸಿದ್ದೇವೆ. ರೈತರು ಇನ್ನೂ ಪ್ರತಿಭಟನಾ ಸ್ಥಳದಲ್ಲಿದ್ದಾರೆ. ಕೃಷಿ ಕಾನೂನುಗಳ ರದ್ದತಿ ಮಸೂದೆ, 2021 ರ ಮೇಲೆ ಚರ್ಚೆ ನಡೆಯಬೇಕೆಂದು ನಾವು ಬಯಸುತ್ತೇವೆ. ಆದರೆ ಲೋಕಸಭೆಯಲ್ಲಿ ಈ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸುವುದರೊಂದಿಗೆ, ಅವರು (ಸರ್ಕಾರ) ಅವರು ರೈತರ ಪರವಾಗಿದ್ದಾರೆ ಎಂದು ಸಾಬೀತುಪಡಿಸಲು ಬಯಸುತ್ತಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
3 Anti-Agriculture Laws were passed in Parliament without discussion & have been repealed without discussion.
A debate would make the PM & BJP answerable for…
• Conspiracy to sell the farming sector at the altar of Crony Friends;
• Sacrifice of 700 farmers;
• Not giving MSP.— Randeep Singh Surjewala (@rssurjewala) November 29, 2021
3 ಕೃಷಿ ವಿರೋಧಿ ಕಾನೂನುಗಳನ್ನು ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ ಮತ್ತು ಚರ್ಚೆಯಿಲ್ಲದೆ ರದ್ದುಪಡಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಲೋಕಸಭೆ ಕಲಾಪವನ್ನು ಮಂಗಳವಾರ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: Farm Laws Repeal Bill 2021 ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ಅಂಗೀಕಾರ
Published On - 2:18 pm, Mon, 29 November 21