ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು.

ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​
ಮೋಹನ್ ಭಾಗವತ್​
Follow us
| Updated By: Lakshmi Hegde

Updated on:Nov 29, 2021 | 2:47 PM

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂಬುದು ಮಿಲಿಟರಿ ಸಂಘಟನೆಯಲ್ಲ. ಕೌಟುಂಬಿಕ ವಾತಾವರಣ ಇರುವ ಒಂದು ಗುಂಪು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.  ಸಂಘವು ಆಲ್​ ಇಂಡಿಯಾ ಸಂಗೀತ ಶಾಲೆಯಲ್ಲ.  ಇಲ್ಲಿ ಮಾರ್ಷಲ್​ ಆರ್ಟ್ಸ್​ಗಳೂ ನಡೆಯುತ್ತವೆ. ಹಾಗಂತ ಇದು ಜಿಮ್​ ಅಥವಾ ಮಾರ್ಷಲ್ ಆರ್ಟ್ಸ್​ ಕ್ಲಬ್​ ಅಲ್ಲ. ಕೆಲವೊಮ್ಮ ಆರ್​​ಎಸ್​ಎಸ್​​ನ್ನು ಪ್ಯಾರಾಮಿಲಿಟರಿ ಸಂಘಟನೆ ಎನ್ನಲಾಗುತ್ತದೆ. ಆದರೆ ಖಂಡಿತ ಇದು ಮಿಲಿಟರಿ ಆರ್ಗನೈಸೇಶನ್​ ಅಲ್ಲ. ನಮ್ಮ ಸಂಘವೆಂದರೆ ಕೌಟುಂಬಿಕ ವಾತಾವರಣವಿರುವ ಒಂದು ಗುಂಪು ಎಂದು ಭಾಗವತ್​ ತಿಳಿಸಿದರು. 

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು. ಪಾಶ್ಚಿಮಾತ್ರ ದೇಶಗಳು ಸಂಗೀತವನ್ನು ಒಂದು ಮನರಂಜನೆಯೆಂದು ಪರಗಣಿಸಿವೆ. ಅವರು ಥ್ರಿಲ್​​ಗಾಗಿ ಅದನ್ನು ಕೇಳುತ್ತಾರೆ. ಆದರೆ ಭಾರತದಲ್ಲಿ ಸಂಗೀತವೆಂದರೆ ಆತ್ಮಸಂತೋಷದ ಮಾರ್ಗ. ಮನಸನ್ನು ಶಾಂತಗೊಳಿಸುವ ಒಂದು ಕಲೆ ಎಂದು ಮೋಹನ್ ಭಾಗವತ್​ ಹೇಳಿದ್ದಾರೆ.

ಭಾರತ ಈ ಬಾರಿ ಸ್ವಾತಂತ್ರ್ಯ ಬಂದ 75ನೇ ವರ್ಷದ ಆಚರಣೆಯಲ್ಲಿದೆ. 1857ರಲ್ಲಿ ಶುರುವಾದ ಸ್ವಾತಂತ್ರ್ಯ ಹೋರಾಟಕ್ಕೆ ಜಯ ಸಿಕ್ಕಿದ್ದು 1947ರ ಆಗಸ್ಟ್​ 15ರಂದು. ಅಂದು ಸಂಪೂರ್ಣವಾಗಿ ವಿದೇಶಿ ಶಕ್ತಿ ನಮ್ಮಲ್ಲಿಂದ ತೊಲಗಿತು.  ಅದಾದ ಬಳಿಕ ದೇಶವನ್ನು ಕಟ್ಟಲು ಬಹಳಷ್ಟು ಶ್ರಮ ಬೇಕಾಯಿತು. ವಿದೇಶಿಗರು ಮಾಡಿದ ಹಾನಿಗಳು, ಲೂಟಿಗಳನ್ನು ಸರಿದೂಗಿಸಿ, ಒಂದು ಹಂತಕ್ಕೆ ತರಲು ಸುಮಾರು 10-12ವರ್ಷಗಳು ಹಿಡಿದವು ಎಂದು ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Farm Laws Repeal Bill 2021 ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ರಾಜ್ಯಸಭೆ ಅಂಗೀಕಾರ

Published On - 2:46 pm, Mon, 29 November 21

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು