ನಿಯಮಾವಳಿಗಳನ್ನು ಉಲ್ಲಂಘಿಸುವ ಒಟಿಟಿ ವೇದಿಕೆಗಳ ವಿರುದ್ಧ ಕ್ರಮ ಕೋರಿದ ಸಂಸದೀಯ ಸಮಿತಿ

ಪ್ರಾದೇಶಿಕ ಭಾಷೆಗಳು ಸೇರಿದಂತೆ ಆಫ್‌ಲೈನ್ ದೂರುಗಳನ್ನು ಸ್ವೀಕರಿಸಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸಮಿತಿಯು ಸರ್ಕಾರಕ್ಕೆ ಸೂಚಿಸಿದೆ. ಪ್ರತಿಯೊಬ್ಬರೂ ಇಂಗ್ಲಿಷ್‌ನಲ್ಲಿ ದೂರು ಸಲ್ಲಿಸಲು ಸಾಧ್ಯವಿಲ್ಲ. ಪ್ರಕ್ರಿಯೆಗೆ ಹೆಚ್ಚು ಪ್ರವೇಶದ ಅಗತ್ಯವಿದೆ ಅಧಿಕಾರಿಯೊಬ್ಬರು ಹೇಳಿದರು.

ನಿಯಮಾವಳಿಗಳನ್ನು ಉಲ್ಲಂಘಿಸುವ ಒಟಿಟಿ ವೇದಿಕೆಗಳ ವಿರುದ್ಧ ಕ್ರಮ ಕೋರಿದ ಸಂಸದೀಯ ಸಮಿತಿ
ಸಂಸತ್

Updated on: Apr 18, 2023 | 3:05 PM

ಮಾಹಿತಿ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು (Parliamentary Standing Committee) ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳ ವಿರುದ್ಧದ ದೂರುಗಳ ಮಾಸಿಕ ದಾಖಲೆಯನ್ನು ನಿರ್ವಹಿಸಲು ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವುದಕ್ಕಾಗಿ ಸರ್ಕಾರವನ್ನು ಕೇಳಿದೆ ಎಂದು ವಿಷಯ ತಿಳಿದ ಜನರು ಹೇಳಿದ್ದಾರೆ. ಸೋಮವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳೊಂದಿಗೆ ಶಿವಸೇನಾ ಶಾಸಕ ಪ್ರತಾಪ್ ರಾವ್ ಜಾಧವ್ (Prataprao Jadhav) ನೇತೃತ್ವದ ಸಮಿತಿಯ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ. ಪೈರಸಿ ಕಂಟೆಂಟ್ ಪ್ರಸಾರ ಮತ್ತು ಪೈರಸಿ ಪರಿಶೀಲಿಸಲು ಸಚಿವಾಲಯವು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಿತಿಯು ಅಧಿಕಾರಿಗಳನ್ನು ಕೇಳಿದೆ.

ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಚಲನಚಿತ್ರಗಳ ಪೈರಸಿ, ಸೆನ್ಸಾರ್‌ಶಿಪ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ವಿರುದ್ಧದ ದೂರುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲಾಯಿತು.

ಪ್ರಾದೇಶಿಕ ಭಾಷೆಗಳು ಸೇರಿದಂತೆ ಆಫ್‌ಲೈನ್ ದೂರುಗಳನ್ನು ಸ್ವೀಕರಿಸಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸಮಿತಿಯು ಸರ್ಕಾರಕ್ಕೆ ಸೂಚಿಸಿದೆ. ಪ್ರತಿಯೊಬ್ಬರೂ ಇಂಗ್ಲಿಷ್‌ನಲ್ಲಿ ದೂರು ಸಲ್ಲಿಸಲು ಸಾಧ್ಯವಿಲ್ಲ. ಪ್ರಕ್ರಿಯೆಗೆ ಹೆಚ್ಚು ಪ್ರವೇಶದ ಅಗತ್ಯವಿದೆ ಅಧಿಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ: SC Same-Sex Marriage Hearing: ವಿಶೇಷ ವಿವಾಹ ಕಾಯ್ದೆಯಡಿ ನೋಟಿಸ್ ಅವಧಿ ಅಸಂವಿಧಾನಿಕ: ಸಿಜೆಐ ಚಂದ್ರಚೂಡ್

ಚಲನಚಿತ್ರ ಪೈರಸಿಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ತಡೆಯಲು ಸಿನಿಮಾಟೋಗ್ರಾಫ್ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಕೆಲಸ ಮಾಡುತ್ತಿದೆ. ಕಾನೂನುಬಾಹಿರವಾಗಿ ಚಲನಚಿತ್ರಗಳನ್ನು ಅಪ್‌ಲೋಡ್ ಮಾಡುವ ವೆಬ್‌ಸೈಟ್‌ಗಳನ್ನು ನಿಷೇಧಿಸುವ ಮತ್ತು ತೆಗೆದುಹಾಕುವ ನಿಬಂಧನೆಯನ್ನು ಪರಿಚಯಿಸಲು ಇದು ಯೋಜಿಸುತ್ತಿದೆ ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ