AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಆಸ್ಪತ್ರೆಯಲ್ಲಿ ದಾರುಣ: ಹೆರಿಗೆ ಮಾಡಿಸುವಾಗ ಹೊಟ್ಟೆಯಲ್ಲಿ ಬ್ಯಾಂಡೇಜ್ ಬಟ್ಟೆ ಬಿಟ್ಟ ವೈದ್ಯರು!

Telangana: ಜಗಿತ್ಯಾಲ ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯದ ಕುರಿತು ಟಿವಿ 9 ತೆಲುಗು ವರದಿಗೆ ಜಿಲ್ಲಾಧಿಕಾರಿ ಯಾಸ್ಮಿನ್ ಭಾಷಾ ಪ್ರತಿಕ್ರಿಯಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ವಿವರಗಳನ್ನು ನೀಡುವಂತೆ ಆಸ್ಪತ್ರೆಯ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ. ರೋಗಿಯ ಸ್ಥಿತಿಯ ಬಗ್ಗೆಯೂ ತಕ್ಷಣ ವರದಿ ನೀಡುವಂತೆ ಸೂಚಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ದಾರುಣ: ಹೆರಿಗೆ ಮಾಡಿಸುವಾಗ ಹೊಟ್ಟೆಯಲ್ಲಿ ಬ್ಯಾಂಡೇಜ್ ಬಟ್ಟೆ ಬಿಟ್ಟ ವೈದ್ಯರು!
ಹೆರಿಗೆ ಮಾಡಿಸುವಾಗ ಹೊಟ್ಟೆಯಲ್ಲಿ ಬ್ಯಾಂಡೇಜ್ ಬಟ್ಟೆ ಬಿಟ್ಟ ವೈದ್ಯರು
ಸಾಧು ಶ್ರೀನಾಥ್​
|

Updated on:Apr 18, 2023 | 1:59 PM

Share

ಆಪರೇಷನ್ ಮಾಡಿದರು.. ಆದರೆ ಹೊಟ್ಟೆಯಲ್ಲಿ ಬ್ಯಾಂಡೇಜ್​ ಬಟ್ಟೆ ಮರೆತಿದ್ದರು.. ಹಾಗೆಯೇ ಹೊಲಿಗೆ ಹಾಕಿಬಿಟ್ಟರು. ವೈದ್ಯರ ಈ ಘೋರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ತಿಂಗಳುಗಟ್ಟಲೆ ನರಕಯಾತನೆ ಅನುಭವಿಸಿದ್ದಾರೆ. ತಿಂದ ಅನ್ನ ಅರಗಿಸಿಕೊಳ್ಳಲಾಗದೆ ಹೇಳಿಕೊಳ್ಳಲಾಗದ ಹೊಟ್ಟೆನೋವು ಅನುಭವಿಸಿದ್ದಾರೆ. ಜಗಿತ್ಯಾಲ ಜಿಲ್ಲೆಯವರಾದ ನವ್ಯಾ ಸರಿಯಾಗಿ 16 ತಿಂಗಳ ಹಿಂದೆ ಹೆರಿಗೆಗಾಗಿ ಜಗಿತ್ಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಿದ ವೈದ್ಯರು ಚಿಕಿತ್ಸೆ ಬಳಿಕ ಮನೆಗೆ ಕಳುಹಿಸಿದ್ದಾರೆ. ಆ ನಂತರ, ನವ್ಯಾ ನರಳತೊಡಗಿದ್ದಾರೆ. ಪ್ರತಿದಿನ ಹೊಟ್ಟೆ ನೋವು ಅನುಭವಿಸಿದ್ದಾರೆ. ಆಕೆಯ ಸ್ಥಿತಿ ಕಂಡು ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ಇನ್ನು ನೋವು ಸಹಿಸಿಕೊಳ್ಳುತ್ತಾ ಕಾಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿದ ಕುಟುಂಬಸ್ಥರು ನವ್ಯಾಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಸ್ಕ್ಯಾನಿಂಗ್ ಮಾಡಿಸಿದಾಗ ಅವರಿಗೆ ಭಯಾನಕ ಸತ್ಯ ತಿಳಿದಿದೆ. ಹೊಟ್ಟೆಯಲ್ಲಿ ಬಟ್ಟೆಯಿರುವುದು ಪತ್ತೆಯಾಗಿದೆ! ಆಪರೇಷನ್ ಮಾಡಿದ ವೈದ್ಯರು ಬಟ್ಟೆ ಹೊರತೆಗೆದಿದ್ದಾರೆ. ಬಟ್ಟೆ ತೆಗೆಯುವಾಗ ವಿಡಿಯೋ ಮಾಡಲಾಗಿದೆ. ಇಷ್ಟು ದಿನ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಾತ್ರದ ಬಟ್ಟೆಯನ್ನು ಹಾಕಿಕೊಂಡು ಆಕೆ ಅನುಭವಿಸಿದ ನರಕಯಾತನೆಯ ಬಗ್ಗೆ ಯೋಚಿಸಿದರೆ ಕಣ್ಣಲ್ಲಿ ನೀರು ಬರುವಂತಿದೆ.

ಆಪರೇಷನ್ ಮಾಡುತ್ತಾ ಹೊಟ್ಟೆಯಿಂದ ಬಟ್ಟೆ ತೆಗೆಯುತ್ತಿರುವ ದೃಶ್ಯಗಳು ಭಯಾನಕವಾಗಿ ಕಂಡುಬಂದಿದೆ. ಸಾಮಾನ್ಯವಾಗಿ ಆಪರೇಷನ್ ಥಿಯೇಟರ್ ನಲ್ಲಿ ಕಾಟನ್ ಬಟ್ಟೆ ಇರುತ್ತದೆ. ಆದರೆ ದೃಶ್ಯಗಳಲ್ಲಿ, ವಿಭಿನ್ನ ಬಟ್ಟೆ ಕಂಡುಬರುತ್ತದೆ. ಆ ಬಟ್ಟೆ ಆಪರೇಷನ್ ಥಿಯೇಟರ್ ಗೆ ಹೇಗೆ ಬಂತು? ಹಿಂದಿನ ವೈದ್ಯರು ಯಾಕೆ ಹೀಗೆ ಮಾಡಿದರು? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಬಟ್ಟೆಯು ಸುಮಾರು ಒಂದು ಮೀಟರ್ ಉದ್ದವಾಗಿದೆ. ಅಷ್ಟು ದೊಡ್ಡ ಗಾತ್ರದ ಬಟ್ಟೆಯನ್ನು ಹೊಟ್ಟೆಯಲ್ಲಿ ತುರುಕಿ ಹೊಲಿಗೆ ಹಾಕಿದ್ದರು. ಆಪರೇಷನ್ ಥಿಯೇಟರ್‌ನಲ್ಲಿ ವೈದ್ಯರ ಜೊತೆಗೆ ಸಹಾಯಕರೂ ಇರುತ್ತಾರೆ. ಅವರು ಯಾರೂ ಗಮನಿಸದಿರುವುದು ನಿರ್ಲಕ್ಷ್ಯದ ಪರಮಾವಧಿಯಲ್ಲವೇ? ಎಂದು ಸಂತ್ರಸ್ತ ಕುಟುಂಬಸ್ಥರು ಕೇಳುತ್ತಿದ್ದಾರೆ. ಈ ಹಿಂದೆ ಹೊಟ್ಟೆಯಲ್ಲಿ ಕತ್ತರಿ ಮರೆತ ಪ್ರಕರಣಗಳನ್ನೂ ನೋಡಿದ್ದೇವೆ. ವೈದ್ಯರು ಏಕೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ?

ಸದ್ಯಕ್ಕೆ ನವ್ಯ ಸೇಫ್ ಆಗಿದ್ದಾರೆ. ಆದರೆ ಏನಾದರೂ ಅಹಿತಕರ ಸಂಭವಿಸಿದರೆ ಹಯಾರು ಹೊಣೆ? ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗೆ ಹೋಗುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ. ಅಂತಹುದರಲ್ಲಿ ಇಂತಹ ಘಟನೆಗಳನ್ನು ನೋಡಿ ಯಾರಾದರೂ ಆ ಕಡೆ ಹೋಗುತ್ತಾರೆಯೇ, ವೈದ್ಯರು ಯಾಕೆ ಹೀಗೆ ಮಾಡುತ್ತಿದ್ದಾರೆ? ವೈದ್ಯೋ ನಾರಾಯಣೋ ಹರಿ ಅನ್ನುತ್ತಾರೆ. ಆದರೆ ಕೆಲವು ವೈದ್ಯರು ಆ ಅರ್ಥವನ್ನು ಬದಲಾಯಿಸುತ್ತಿದ್ದಾರೆ.

ಜಗಿತ್ಯಾಲ ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯದ ಕುರಿತು ಟಿವಿ 9 ತೆಲುಗು ವರದಿಗೆ ಜಿಲ್ಲಾಧಿಕಾರಿ ಯಾಸ್ಮಿನ್ ಭಾಷಾ ಪ್ರತಿಕ್ರಿಯಿಸಿದ್ದಾರೆ. ಹೊಟ್ಟೆಯಲ್ಲಿ ಬಟ್ಟೆ ಮರೆತು ಹೋಗಿರುವ ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಸೀರಿಯಸ್‌ ಆಗಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹಾಗೂ ಸಹಾಯಕರ ವಿವರಗಳನ್ನು ಕೂಡಲೇ ನೀಡುವಂತೆ ಆಸ್ಪತ್ರೆಯ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ. ರೋಗಿಯ ಸ್ಥಿತಿಯ ಬಗ್ಗೆ ತಕ್ಷಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:57 pm, Tue, 18 April 23