ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ 21 ನೇ ಶತಮಾನದ ಮೈಲುಗಲ್ಲು: ಧರ್ಮೇಂದ್ರ ಪ್ರಧಾನ್

ಇದು ದೇಶಕ್ಕೆ ಒಂದು ಸಾಧನೆಯಾಗಿದೆ.ವಿಷಯ ವಿಶೇಷ ಕ್ರೆಡಿಟ್ ತೆಗೆದುಕೊಳ್ಳುವುದಲ್ಲ. ವಿಷಯವು ಸಮಾಜದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು. ವಿಷಯವು ನಿರ್ಧಾರ ತೆಗೆದುಕೊಳ್ಳುವುದು. ಈ ಮಸೂದೆಯು ವಿಶ್ವದ 21 ನೇ ಶತಮಾನದಲ್ಲಿ ಒಂದು ಮೈಲುಗಲ್ಲು. ಪ್ರಪಂಚದ ಇತರ ಪ್ರಜಾಪ್ರಭುತ್ವ ದೇಶಗಳಲ್ಲೂ ಇದರ ಉಲ್ಲೇಖವನ್ನು ತೆಗೆದುಕೊಳ್ಳಲಾಗುವುದು ಎಂದು ಎಎನ್‌ಐ ಜತೆ ಮಾತನಾಡಿದ ಕೇಂದ್ರ ಸಚಿವರು ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ 21 ನೇ ಶತಮಾನದ ಮೈಲುಗಲ್ಲು: ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

Updated on: Sep 22, 2023 | 7:27 PM

ದೆಹಲಿ ಸೆಪ್ಟೆಂಬರ್ 22: ಮಹಿಳಾ ಮೀಸಲಾತಿ ಮಸೂದೆಯ (Women’s reservation bill) ಅಂಗೀಕಾರವು 21 ನೇ ಶತಮಾನದ ಮೈಲುಗಲ್ಲು ಎಂದು ಶುಕ್ರವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan)ಹೇಳಿದ್ದಾರೆ. ಮಸೂದೆಯನ್ನು ದೇಶದ ಸಾಧನೆ ಎಂದು ಬಣ್ಣಿಸಿದ ಶಿಕ್ಷಣ ಸಚಿವರು, ಮಸೂದೆಯನ್ನು ಅಂಗೀಕರಿಸಿದ್ದಕ್ಕೆ “ಕ್ರೆಡಿಟ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ” ಎಂದು ವಿರೋಧ ಪಕ್ಷದ ನಾಯಕರಿಗೆ ಕರೆ ನೀಡಿದರು.

ಇದು ದೇಶಕ್ಕೆ ಒಂದು ಸಾಧನೆಯಾಗಿದೆ.ವಿಷಯ ವಿಶೇಷ ಕ್ರೆಡಿಟ್ ತೆಗೆದುಕೊಳ್ಳುವುದಲ್ಲ. ವಿಷಯವು ಸಮಾಜದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು. ವಿಷಯವು ನಿರ್ಧಾರ ತೆಗೆದುಕೊಳ್ಳುವುದು. ಈ ಮಸೂದೆಯು ವಿಶ್ವದ 21 ನೇ ಶತಮಾನದಲ್ಲಿ ಒಂದು ಮೈಲುಗಲ್ಲು. ಪ್ರಪಂಚದ ಇತರ ಪ್ರಜಾಪ್ರಭುತ್ವ ದೇಶಗಳಲ್ಲೂ ಇದರ ಉಲ್ಲೇಖವನ್ನು ತೆಗೆದುಕೊಳ್ಳಲಾಗುವುದು ಎಂದು ಎಎನ್‌ಐ ಜತೆ ಮಾತನಾಡಿದ ಕೇಂದ್ರ ಸಚಿವರು ಹೇಳಿದ್ದಾರೆ.

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಮೇಲ್ಮನೆ ಗುರುವಾರ ಅಂಗೀಕರಿಸಿದೆ 214 ಸದಸ್ಯರು ಮಸೂದೆಗೆ ಬೆಂಬಲವಾಗಿ ಮತ ಚಲಾಯಿಸಿದ್ದು, ಯಾರೂ ವಿರುದ್ಧವಾಗಿ ಮತ ಚಲಾಯಿಸಿಲ್ಲ.

ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾದ ನಂತರ, ಮಸೂದೆ ಅಂಗೀಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಲು ಮಹಿಳಾ ಸಂಸದರು ‘ಮೋದಿ ಮೋದಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಸಂಸತ್​​​ನಲ್ಲಿ ಮಸೂದೆಯ ಐತಿಹಾಸಿಕ ಅಂಗೀಕಾರದ ನಂತರ ಪಿಟಿ ಉಷಾ ಮತ್ತು ಕೇಂದ್ರ ಸಚಿವರಾದ ಮೀನಾಕ್ಷಿ ಲೇಖಿ ಮತ್ತು ಸ್ಮೃತಿ ಇರಾನಿ ಸೇರಿದಂತೆ ಸಂಸತ್ತಿನ ಉಭಯ ಸದನಗಳ ಮಹಿಳಾ ಸದಸ್ಯರು ಪ್ರಧಾನಿ ಮೋದಿಯವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟವಧಿ ಮುಂದೂಡಲಾಯಿತು. ಇದಕ್ಕೂ ಮುನ್ನ  ಬುಧವಾರ ಲೋಕಸಭೆಯಲ್ಲಿ ವಿಧೇಯಕವು ಅಂಗೀಕಾರಗೊಂಡಿತ್ತು. ಇಲ್ಲಿ ಮಸೂದೆ ಪರವಾಗಿ 454 ಮತಗಳು ಚಲಾವಣೆಯಾಗಿದ್ದು,  ವಿರುದ್ಧ  2ಮತಗಳು ಚಲಾವಣೆ ಆಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ