ರಮೇಶ್ ಬಿಧುರಿ ಏನು ಹೇಳಿದ್ದಾರೆ ಎಂದು ನನಗೆ ಕೇಳಿಸಿಲ್ಲ: ಬಿಜೆಪಿ ಸಂಸದ ಹರ್ಷವರ್ಧನ್
ಸದನದಲ್ಲಿ ಇಬ್ಬರು ಸಂಸದರು ಪರಸ್ಪರ ಅಸಂಸದೀಯ ಭಾಷೆ ಬಳಸಿದ ಈ ದುರದೃಷ್ಟಕರ ಘಟನೆಗೆ ಜನರು ನನ್ನನ್ನು ಎಳೆದು ತಂದಿದ್ದು, ನನ್ನ ಹೆಸರು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿರುವುದನ್ನು ನಾನು ನೋಡಿದ್ದೇನೆ ಎಂದು ಹರ್ಷವರ್ಧನ್ ಹೇಳಿದ್ದಾರೆ. ಲೋಕಸಭೆಯಲ್ಲಿನ ಗದ್ದಲದಿಂದಾಗಿ ಅವರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ದೆಹಲಿ ಸೆಪ್ಟೆಂಬರ್ 22:ಬಿಜೆಪಿ ಸಹೋದ್ಯೋಗಿ ರಮೇಶ್ ಬಿಧುರಿ (Ramesh Bidhuri) ಅವರು ಲೋಕಸಭೆಯಲ್ಲಿ (Parliament)ಮತ್ತೋರ್ವ ಸದಸ್ಯರನ್ನು ನಿಂದಿಸಿ ಕೋಮುದ್ವೇಷದ ಟೀಕೆಗಳನ್ನು ಬಳಸಿದಾಗ ಬಿಜೆಪಿ ಸಂಸದ ಹರ್ಷವರ್ಧನ್ (Harsh Vardhan)ನಗುತ್ತಾ ಕುಳಿತಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಹರ್ಷವರ್ಧನ್, ಬಿಧುರಿ ಏನು ಹೇಳಿದ್ದು ಎಂದು ನನಗೆ ಕೇಳಿಸಿಲ್ಲ ಎಂದಿದ್ದಾರೆ. ಲೋಕಸಭೆಯಲ್ಲಿ ದಕ್ಷಿಣ ದೆಹಲಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಧುರಿ ಅವರು “ಚಂದ್ರಯಾನದ ಯಶಸ್ಸಿನ” ಕುರಿತ ಚರ್ಚೆಯ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ (BSP) ಡ್ಯಾನಿಶ್ ವಿರುದ್ಧ ನಿಂದನೆಯ ಮಾತುಗಳನ್ನಾಡಿದ್ದಾರೆ.
A BJP MP @rameshbidhuri can be heard calling MP Danish Ali a “Bharwa (pimp), “Katwa” (circumcised), “Mullah” “Atankwadi” (Terrorist) & “Ugrawadi” (militant) ON RECORD in Lok Sabha while RaviShankar Prasad & Harsh Vardhan sitting next to him are laughing.pic.twitter.com/yMfWgtcUhU
— Mohammed Zubair (@zoo_bear) September 22, 2023
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬಿಧುರಿ ಇಂತಹ ವರ್ತನೆಯನ್ನು ಪುನರಾವರ್ತಿಸಿದರೆ “ಕಠಿಣ ಕ್ರಮ” ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ. ಇದಾದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ವಿಷಾದ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಬಿಧುರಿ, ಅಲಿ ವಿರುದ್ಧ ನಿಂದನೀಯ ಭಾಷೆ ಬಳಸುವಾಗ ಹರ್ಷವರ್ಧನ್ ನಗುತ್ತಿರುವುದು ವಿಡಿಯೊದಲ್ಲಿದೆ. ಈ ಪ್ರತಿಕ್ರಿಯಿಸಿದ ಸಂಸದರು ಕೆಲವು ಪಟ್ಟಭದ್ರ ರಾಜಕೀಯದವರು ನನ್ನ ಘನತೆ ಹಾಳು ಮಾಡುವುದಕ್ಕಾಗಿ ಕೆಟ್ಟ ಮತ್ತು ಕಪೋಲ ಕಲ್ಪಿತ ಕತೆಗಳನ್ನು ಹೆಣೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಸದನದಲ್ಲಿ ಇಬ್ಬರು ಸಂಸದರು ಪರಸ್ಪರ ಅಸಂಸದೀಯ ಭಾಷೆ ಬಳಸಿದ ಈ ದುರದೃಷ್ಟಕರ ಘಟನೆಗೆ ಜನರು ನನ್ನನ್ನು ಎಳೆದು ತಂದಿದ್ದು, ನನ್ನ ಹೆಸರು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿರುವುದನ್ನು ನಾನು ನೋಡಿದ್ದೇನೆ ಎಂದು ಹರ್ಷವರ್ಧನ್ ಹೇಳಿದ್ದಾರೆ.
ಲೋಕಸಭೆಯಲ್ಲಿನ ಗದ್ದಲದಿಂದಾಗಿ ಅವರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುತ್ತಿಲ್ಲ.
ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ನನ್ನ ಹೆಸರನ್ನು ಎಳೆದು ತಂದಿರುವುದಕ್ಕೆ ನನಗೆ ಬೇಸರ ಮತ್ತು ಅವಮಾನವಾಗಿದೆ. ಒಬ್ಬರಿಗೊಬ್ಬರು ನಿಂದನೆ ಮಾಡಿದ ಘಟನೆಗೆ ನಾನು ನಿಸ್ಸಂದೇಹವಾಗಿ ಸಾಕ್ಷಿಯಾಗಿದ್ದೆ (ಇದು ಇಡೀ ಸದನವಾಗಿತ್ತು). ಅಲ್ಲಿ ಅವರು ಏನು ಹೇಳುತ್ತಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಕೇಳಿಲ್ಲ ಎಂದು ಮಾಜಿ ಸಚಿವರು ಹೇಳಿದ್ದಾರೆ.
ಈ ಬಗ್ಗೆ ಡ್ಯಾನಿಶ್ ಅಲಿ ಅವರು ಸ್ಪೀಕರ್‌ಗೆ ಪತ್ರ ಬರೆದಿದ್ದು, ಅಲ್ಪಸಂಖ್ಯಾತ ಸದಸ್ಯನಾಗಿ ಇದು ನನಗೆ ನೋವಿನ ಘಟನೆಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ಮುಲ್ಲಾ ಒಬ್ಬ ಭಯೋತ್ಪಾದಕ; ಲೋಕಸಭೆಯಲ್ಲಿ ಮುಸ್ಲಿಂ ಸಂಸದನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಎಂಪಿ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾಯಿತ ಸಂಸದರೊಬ್ಬರು ಇದೇ ಮೊದಲ ಬಾರಿಗೆ ಇಂತಹ ಬೆದರಿಕೆಗಳನ್ನು ಎದುರಿಸಬೇಕಾಯಿತು. ಎಲ್ಲರ ಮುಂದೆ ನಡೆದ ದ್ವೇಷಭಾಷಣ ಅದು, ರಾತ್ರಿ ಮಲಗಲು ನನಗೆ ಸಾಧ್ಯವಾಗಲೇ ಇಲ್ಲ ಎಂದು ಅಲಿ ಹೇಳಿದ್ದಾರೆ. ರಾಜನಾಥ್ ಸಿಂಗ್ ಅವರ ಕ್ಷಮೆ ಸಾಕಾಗುವುದಿಲ್ಲ. ಬಿಧುರಿ ಅವರನ್ನು ಅಮಾನತುಗೊಳಿಸಬೇಕು ಅಥವಾ ಬಂಧಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿದೆ.
“ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ರಾಜನಾಥ್ ಸಿಂಗ್ ಅವರ ಕ್ಷಮೆಯಾಚನೆ ಸ್ವೀಕಾರಾರ್ಹವಲ್ಲ ಅದು ಅರೆಮನಸ್ಸಿನದು. ಇದು ಸಂಸತ್ಗೆ ಮಾಡಿದ ಅವಮಾನ ಬಿಧುರಿ ಹೇಳಿಕೆ ಪ್ರತಿಯೊಬ್ಬ ಭಾರತೀಯನಿಗೂ ಅವಮಾನವಾಗಿದೆ ಎಂದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಬಿಜೆಪಿ ನಾಯಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ