ಕೊರೊನಾಗೆ ‘ರಾಮ’ ಬಾಣ: ಮದ್ದು ಕಂಡು ಹಿಡಿದೇ ಬಿಟ್ರಾ ಬಾಬಾ ರಾಮ್​​ ದೇವ್..?

ಹರಿದ್ವಾರ:ಕೊರೊನಾ ಕರಿನೆರಳು ಇಡೀ ದೇಶವನ್ನ ಆವರಿಸಿದೆ. ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡು ಮುಂದೆ ನುಗ್ಗುತ್ತಿದೆ. ಕೊವಿಡ್ ಆತಂಕದಲ್ಲಿದ್ದ ಜನರಿಗೆ ಸೋಂಕಿಗೆ ಮದ್ದು ಸಿಗುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿತ್ತು. ಸದ್ಯ ಯೋಗ ಗುರು ಬಾಬಾ ರಾಮದೇವ್​ರ ಪತಂಜಲಿ ಸಂಸ್ಥೆ ಬಳಿ ಔಷಧಿ ಇದೆ ಎಂದು ಈ ಹಿಂದೆ ಹೇಳಿದ್ದರು. ಕೊರೊನಾ ಮದ್ದಿಗೆ ಸಂಬಂಧಿಸಿ ಹರಿದ್ವಾರದಲ್ಲಿ ಪತಂಜಲಿ ಯೋಗ ಪೀಠದಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಪತಂಜಲಿಯಿಂದ ಕೊರೊನಾಗೆ ಆಯುರ್ವೇದಿಕ್ ಔಷಧ ಕಂಡು ಹಿಡಿಯಲಾಗಿದೆ. ಪತಂಜಲಿ […]

ಕೊರೊನಾಗೆ ರಾಮ ಬಾಣ: ಮದ್ದು ಕಂಡು ಹಿಡಿದೇ ಬಿಟ್ರಾ ಬಾಬಾ ರಾಮ್​​ ದೇವ್..?
ಆಯೇಷಾ ಬಾನು

Updated on: Jun 23, 2020 | 12:33 PM

ಹರಿದ್ವಾರ:ಕೊರೊನಾ ಕರಿನೆರಳು ಇಡೀ ದೇಶವನ್ನ ಆವರಿಸಿದೆ. ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡು ಮುಂದೆ ನುಗ್ಗುತ್ತಿದೆ. ಕೊವಿಡ್ ಆತಂಕದಲ್ಲಿದ್ದ ಜನರಿಗೆ ಸೋಂಕಿಗೆ ಮದ್ದು ಸಿಗುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿತ್ತು. ಸದ್ಯ ಯೋಗ ಗುರು ಬಾಬಾ ರಾಮದೇವ್​ರ ಪತಂಜಲಿ ಸಂಸ್ಥೆ ಬಳಿ ಔಷಧಿ ಇದೆ ಎಂದು ಈ ಹಿಂದೆ ಹೇಳಿದ್ದರು.

ಕೊರೊನಾ ಮದ್ದಿಗೆ ಸಂಬಂಧಿಸಿ ಹರಿದ್ವಾರದಲ್ಲಿ ಪತಂಜಲಿ ಯೋಗ ಪೀಠದಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಪತಂಜಲಿಯಿಂದ ಕೊರೊನಾಗೆ ಆಯುರ್ವೇದಿಕ್ ಔಷಧ ಕಂಡು ಹಿಡಿಯಲಾಗಿದೆ. ಪತಂಜಲಿ ಸಂಸ್ಥೆಯಿಂದ ಕೊರೋನಿಲ್ ಔಷಧ ಕಂಡುಹಿಡಿದಿರುವುದಾಗಿ ಆಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ.

ಆಯುರ್ವೇದಿಕ್ ಔಷಧ ಸಂಶೋಧನೆ:
ಕೊರೊನಾದ ವಿರುದ್ಧ ಮೊದಲ ಆಯುರ್ವೇದಿಕ್ ಔಷಧ ಸಂಶೋಧನೆ ಮಾಡಲಾಗಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನೆ ಮಾಡಿ ಕಂಡುಹಿಡಿದಿದ್ದೇವೆ. ಕೊರೋನಿಲ್ ಔಷಧದಿಂದ ಕೊರೊನಾಗೆ ಚಿಕಿತ್ಸೆ ನೀಡಬಹುದು. 280 ಸೋಂಕಿತರ ಮೇಲೆ ಈ ಔಷಧವನ್ನು ಪ್ರಯೋಗಿಸಿದ್ದೇವೆ. ಅವರೆಲ್ಲರೂ ಕೊರೊನಾದಿಂದ ಗುಣಮುಖರಾಗಿದ್ದಾರೆ. 3 ದಿನದೊಳಗೆ ಶೇ.69ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ. 7 ದಿನದೊಳಗೆ ಶೇ.100ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ. 500ಕ್ಕೂ ಹೆಚ್ಚು ತಜ್ಞರ ತಂಡದಿಂದ ಈ ಔಷಧ ಸಂಶೋಧನೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ರು.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us