ಪಾಟ್ನಾದ ಬೀದಿಯಲ್ಲಿ ಅಪ್ರಾಪ್ತ ಬಾಲಕಿಯ ರುಂಡ ಪತ್ತೆ

ಪಾಟ್ನಾದಲ್ಲಿ ಅಪ್ರಾಪ್ತ ಬಾಲಕಿಯ ಕತ್ತರಿಸಿದ ರುಂಡ ಪತ್ತೆಯಾಗಿ ತೀವ್ರ ಆತಂಕ ಮೂಡಿಸಿದೆ. ನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿದ ಈ ರುಂಡವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹರಿತ ಆಯುಧದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾಟಮಂತ್ರ ಅಥವಾ ನರಬಲಿಯ ಬಗ್ಗೆ ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಕಣ್ಮರೆಯಾದವರ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಿಹಾರದಲ್ಲಿ ಇದು ಆತಂಕಕಾರಿ ಬೆಳವಣಿಗೆ.

ಪಾಟ್ನಾದ ಬೀದಿಯಲ್ಲಿ ಅಪ್ರಾಪ್ತ ಬಾಲಕಿಯ ರುಂಡ ಪತ್ತೆ
ಕ್ರೈಂ

Updated on: Jan 20, 2026 | 10:17 AM

ಪಾಟ್ನಾ, ಜನವರಿ 20: ಬಿಹಾರ(Bihar)ದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅಪ್ರಾಪ್ತ ಬಾಲಕಿಯ ರುಂಡ ಪತ್ತೆಯಾಗಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ. ಸೋಮವಾರ ರಾತ್ರಿ ರಾಜಧಾನಿಯ ನಾಡಿ ಪೊಲೀಸ್ ಠಾಣೆ ಪ್ರದೇಶದ ಬೀದಿಯಲ್ಲಿ ಅಪ್ರಾಪ್ತ ಬಾಲಕಿಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಪೊಲೀಸರು ರುಂಡ ವಶಕ್ಕೆ ಪಡೆದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಾಲಕಿಯ ತಲೆಯನ್ನು ಕತ್ತರಿಸಿದ ರೀತಿ ನೋಡಿದರೆ, ಆ ಬಾಲಕಿಯನ್ನು ಅಪರಾಧಿಗಳು ಎಷ್ಟು ಭಯಾನಕವಾಗಿ ಕೊಲೆ ಮಾಡಿರಬಹುದು ಎಂಬುದು ತಿಳಿಯುತ್ತದೆ. ಈ ಕೊಲೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಬಲಿ ನೀಡಿರಬಹುದು, ಎಲ್ಲೋ ಮಾಟ ಮಂತ್ರ ನಡೆದಿರಬಹುದು ಎನ್ನುವ ಶಂಕೆಯನ್ನು ಜನರು ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ, ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡು, ಪರೀಕ್ಷೆಗಾಗಿ ನಳಂದ ವೈದ್ಯಕೀಯ ಕಾಲೇಜಿಗೆ ಕಳುಹಿದೆ.ಮಗುವನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿರಬಹುದು ಎಂದು ಹೆಚ್ಚುವರಿ ಪೊಲೀಸ್ ಠಾಣಾಧಿಕಾರಿ ವಿವೇಕ್ ಕುಮಾರ್ ಹೇಳಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಕತ್ತರಿಸಿದ ತಲೆ ಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಲಾಗುತ್ತಿದೆ. ಕತ್ತರಿಸಿದ ತಲೆಯ ಕೆಳಗಿನ ಭಾಗವನ್ನು ಸಹ ಪೊಲೀಸರು ಶೋಧಿಸುತ್ತಿದ್ದಾರೆ. ಮಾನಸಿಕ ತನಿಖಾ ತಂಡವನ್ನು ಕರೆಯಲಾಗಿದೆ.

ಮತ್ತಷ್ಟು ಓದಿ: ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು

ಪಾಟ್ನಾದ ನದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ತಲೆ ಯಾರದ್ದು ಎಂಬುದಿನ್ನೂ ತಿಳಿದುಬಂದಿಲ್ಲ, ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಯಾರಾದರೂ ನಾಪತ್ತೆಯಾಗಿರುವ ಕುರಿತು ದೂರು ಕೊಟ್ಟಿದ್ದಾರಾ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣದ ಪ್ರತಿಯೊಂದು ಅಂಶವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಕಾಣೆಯಾದ ಮಕ್ಕಳ ಬಗ್ಗೆ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ