AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಮಾತನಾಡಿ ಕನ್ನಡಿಗರನ್ನು ಮೋಡಿ ಮಾಡಿದ ಬಿಹಾರ ಪೋರಿ

ಬೆಂಗಳೂರಿನಲ್ಲಿ 10 ವರ್ಷದ ಬಿಹಾರಿ ಬಾಲಕಿ ನಿರರ್ಗಳವಾಗಿ ಕನ್ನಡ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಈಕೆಯ ಕನ್ನಡ ಪ್ರೇಮದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡಿಗರೇ ಕನ್ನಡ ಮಾತನಾಡಲು ಹಿಂಜರಿಯುವಾಗ, ಬಿಹಾರದ ಮಗು ಕನ್ನಡದಲ್ಲಿ ಟಾಪರ್ ಆಗಿರುವುದು ಅಚ್ಚರಿ ಮೂಡಿಸಿದೆ. ಈಕೆಯ ತಂದೆಯೂ ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಕನ್ನಡಿಗರಿಗೆ ಸ್ಫೂರ್ತಿ ಎಂದಿದ್ದಾರೆ.

ಕನ್ನಡ ಮಾತನಾಡಿ ಕನ್ನಡಿಗರನ್ನು ಮೋಡಿ ಮಾಡಿದ ಬಿಹಾರ ಪೋರಿ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Dec 29, 2025 | 5:16 PM

Share

ಬೆಂಗಳೂರಿನಲ್ಲಿ ಕನ್ನಡಿಗರಾಗಿ ಕನ್ನಡ ಮಾತನಾಡಲು ಹಿಂಜರಿಯುವ ಜನರ ಮಧ್ಯೆ ಬಿಹಾರದ ಪುಟ್ಟ  ಬಾಲಕಿಯಬ್ಬಳು (Bihar girl) ಕನ್ನಡ ಮಾತನಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಸೋಶಿಯಲ್​​​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಹಾರದ 10 ವರ್ಷದ ಬಾಲಕಿಯ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕಂಡು ಒಮ್ಮೆ ಅಚ್ಚರಿಯಾಗುವುದು ಖಂಡಿತ ಎಂದು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ.

ಇದು ಈ ಹುಡುಗಿಯ ಅಸಾಧಾರಣ ಸಾಧನೆ ಎಂದು ಹೇಳಲಾಗಿದೆ. “ಕನ್ನಡದಲ್ಲಿ ಟಾಪರ್ ಆಗಿರುವ ನನ್ನ ಮಗಳು, ನಾನು ಬೇರೆ ಭಾಷೆಯಲ್ಲಿ ಕೇಳಿದ್ರೆ, ಆಕೆ ಕನ್ನಡದಲ್ಲಿ ಕೇಳಿ ಎಂದು ಹೇಳುತ್ತಾಳೆ” ಎಂದು ಆಕೆಯ ತಂದೆ ಹೇಳಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಆಕೆಯ ತಂದೆ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.  ಆಕೆಯ ತಂದೆ ಇಂಗ್ಲಿಷ್​​​ನಲ್ಲಿ ಕನ್ನಡದಲ್ಲಿ ಕೇಳುತ್ತಾರೆ. ಇದಕ್ಕೆ ಆಕೆ ಕನ್ನಡದಲ್ಲಿ ಉತ್ತರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಆಕೆಯ ಕನ್ನಡದ ಬಗ್ಗೆ ತಂದೆ ಹೇಳಿದ್ದೇನು?

ಅಭಿಷೇಕ್ ದುಬೆ ಅವರು ಹಿಂದೂಸ್ಥಾನ್​​ನಲ್ಲಿ ಮಾತನಾಡಿದ್ದಾರೆ. ತಮ್ಮ ಮಗಳು ಮತ್ತು ಆಕೆಯ ಕನ್ನಡ ಕಲಿಕಾ ಬಗ್ಗೆ ಕೇಳುವುದು ಮಾಹಿತಿಯನ್ನು ನೀಡಿದ್ದಾರೆ. “ಆಕೆಯ ಹೆಸರು ಮೃಗಾಂಕಾ ಅಭಿಷೇಕ್ , ಅವಳನ್ನು ಮಹಿ ಎಂಬ ಪ್ರೀತಿಯಿಂದ ಕರೆಯುತ್ತೇವೆ. ಈಗ ಅವಳಿಗೆ 10 ವರ್ಷ, 5 ತರಗತಿಯಲ್ಲಿ ಓದುತ್ತಿದ್ದಾಳೆ. ಕನ್ನಡ ಅವಳ ಪಠ್ಯಕ್ರಮದ ಭಾಗವಾಗಿದೆ. ಕನ್ನಡ ಕಲಿಯಲು ಯಾವುದೇ ವಿಶೇಷ ತರಗತಿಗೆ ಹೋಗಿಲ್ಲ. ಕನ್ನಡ ಉನ್ನತ ಅಂಕ ಪಡೆದಿದ್ದಾಳೆ. ತಮ್ಮ ಮಗಳು ಕನ್ನಡವನ್ನು ನಿರರ್ಗಳವಾಗಿ ಓದುತ್ತಾಳೆ ಮತ್ತು ಬರೆಯುತ್ತಾಳೆ. ನಾನು ಕಳೆದ 16 ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ಅವಳು ಹುಟ್ಟಿದ್ದು ಬೆಂಗಳೂರಿನಲೇ,  ಕನ್ನಡವನ್ನು  ಅರ್ಥಮಾಡಿಕೊಂಡರೂ, ಅದನ್ನು ನಿರರ್ಗಳವಾಗಿ ಮಾತನಾಡುವುದು ಇನ್ನೂ ಒಂದು ಸವಾಲಾಗಿದೆ ಎಂದು ಹೇಳಿದ್ದಾರೆ. ನನಗೆ ಕನ್ನಡ ಅರ್ಥವಾಗುತ್ತದೆ ಆದರೆ ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್​​ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ

ನೆಟ್ಟಿಗರು ಹೇಳಿದ್ದೇನು?

ಚೆನ್ನಾಗಿ ಮಾಡಿದ್ದೀರಿ ಮಗು, ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಕೇಳಲು ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ. ಮತ್ತಷ್ಟು ಕನ್ನಡವನ್ನು ಕಲಿಯಿರಿ ಎಂದು ಇನ್ನೊಬ್ಬರು ಕಮೆಂಟ್​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Mon, 29 December 25