ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್‌ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತಲೇ ಓದುತ್ತಿರುವ ವಿದ್ಯಾರ್ಥಿನಿಯ ಫೋಟೋವೊಂದು ವೈರಲ್ ಆಗಿದೆ. ಕಠಿಣ ಶ್ರಮ ಹಾಗೂ ಶಿಕ್ಷಣದ ಮಹತ್ವವನ್ನು ಸಾರುವ ಈ ಘಟನೆ ನೆಟ್ಟಿಗರ ಮನ ಗೆದ್ದಿದೆ. ಬಡತನ, ಪರಿಸ್ಥಿತಿಗಳು ಶಿಕ್ಷಣಕ್ಕೆ ಎಂದಿಗೂ ಅಡ್ಡಿಯಾಗಲಾರದು ಎಂಬ ಸಂದೇಶವನ್ನು ಈ ಯುವತಿ ನೀಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು, ಡಿ.29; ಬೆಂಗಳೂರಿನಲ್ಲೊಂದು ಹೃದಯಸ್ಪರ್ಶಿ ಘಟನೊಂದು ನಡೆದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಭಾರೀ ಸದ್ದು ಮಾಡುತ್ತಿದೆ. ವಿದ್ಯೆ ಎಂಬುದಕ್ಕೆ ಶ್ರೀಮಂತ, ಬಡವ, ಮನೆ, ಶಾಲೆ ಎಂಬ ತಾರತಮ್ಯವಿಲ್ಲ. ಶ್ರಮ, ಪ್ರಯತ್ನ, ಛಲ ಇದ್ದರೆ ಸಾಕು, ಯಾರು ಬೇಕಾದರೂ ಕಲಿಯಬಹುದು. ಇದೀಗ ಇಲ್ಲಿ ವೈರಲ್ ಆಗಿರುವ ಪೋಸ್ಟ್ ಇದೇ ನೀತಿ ಪಾಠವನ್ನು ಹೇಳುತ್ತದೆ. ಬೆಂಗಳೂರಿನ ಜನನಿಬಿಡ ಪ್ರದೇಶವಾದ ಚರ್ಚ್ ಸ್ಟ್ರೀಟ್‌ನಲ್ಲಿ (Bengaluru Church Street) ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತ, ಓದುತ್ತಿರುವ ಫೋಟೋ ಭಾರೀ ವೈರಲ್ ಆಗಿದೆ. ಇದು ನೆಟ್ಟಿಗರ ಮನಸ್ಸು ಕೂಡ ಗೆದ್ದಿದೆ. ಅಭಿನವ್ ಎಂಬುವವರು ಈ ಪೋಸ್ಟ್ನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಚರ್ಚ್ ಸ್ಟ್ರೀಟ್‌ನಲ್ಲಿ ಯುವತಿಯೊಬ್ಬಳು ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತ, ಹೋಮ್ ವರ್ಕ್ ಮಾಡುವುದನ್ನು ಅಭಿನವ್ ತಮ್ಮ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. “ಕಠಿಣ ಶ್ರಮದ ಜತೆಗೆ ಶಿಕ್ಷಣ” ಎಂಬ ಶೀರ್ಷಿಕೆಯನ್ನು ಈ ಪೋಸ್ಟ್ಗೆ ನೀಡಿದ್ದಾರೆ. ಪೋಸ್ಟ್ 19,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಲಕ್ಷಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. ಈ ಹುಡುಗಿಯ ಅಚಲವಾದ ಕಲಿಕೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯೋಗಿ ಬುಲ್ಡೋಜರ್ ರಾಜ್ ಜತೆ ಹೋಲಿಕೆ ಬೇಡ: ಕೋಗಿಲು ಶೆಡ್ಗಳ ತೆರವು ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
saw a girl selling christmas stuff in the church street while finishing her homework
life’s tough, be grateful for your education pic.twitter.com/tW2pSgr8Do
— abhinav (@AbhinavXJ) December 27, 2025
ನೆಟ್ಟಿಗರು ಈ ಪೋಸ್ಟ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಅವಳಂತಹ ಮಕ್ಕಳು ಜೀವನ ಸಾಗಿಸಲು ಏನನ್ನೂ ಮಾರಾಟ ಮಾಡಬೇಕಾಗಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಆ ಹುಡುಗಿಗೆ ಖಂಡಿತ ನಾನು ಸಹಾಯ ಮಾಡುತ್ತೇನೆ. ಅವಳ ಶಿಕ್ಷಣದ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮಲ್ಲಿ ಇರುವುದನ್ನು ಬಿಟ್ಟು, ನಿಮಗೆ ದೇವರು ನೀಡಿದ ಈ ಜೀವನಕ್ಕೆ ಧನ್ಯವಾದ ಹೇಳಿಕೆ. ಏಕೆಂದರೆ ನಿಮಗೆ ಶ್ರಮದ ಅನುಭವ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕೆಲವೊಂದು ಜನರಿಗೆ ಈ ಜೀವನದಲ್ಲಿ ಅನ್ಯಾಯವಾಗಿದೆ. ಆದರೆ ದೇವರಿಗೆ ಒಂದು ಧನ್ಯವಾದ ಹೇಳಿ ಏಕೆಂದರೆ ಅವರು ನಿಮಗೆ ಇಂತಹ ಅದ್ಭುತ ಜ್ಞಾನ ನೀಡಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Mon, 29 December 25




