ಅತಿಯಾದ ಮಾಲಿನ್ಯದಿಂದ ಅಪಾಯ ಒಂದೆರಡಲ್ಲ !.. ಅಸಮರ್ಪಕ ಅಳತೆಯ ಜನನಾಂಗದೊಂದಿಗೆ ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ

ಇತ್ತೀಚೆಗಂತೂ ಪುರುಷರಲ್ಲಿ ವೀರ್ಯ ಸಂಖ್ಯೆ ಕಡಿಮೆ ಇರುವುದು, ಮಹಿಳೆಯರ ಫಲವತ್ತತೆ ದುರ್ಬಲವಾಗಿರುವ ಪ್ರಕರಣಗಳು ತುಂಬ ಕಡಿಮೆ ಬರುತ್ತಿದೆ. ಹೀಗಾಗಲು ಪ್ರಮುಖವಾಗಿ ಕಾರಣಗಳು ಏನು ಎಂಬುದರ ಬಗ್ಗೆ ಶನ್ನಾ ಪರೀಕ್ಷೆಗಳನ್ನು ನಡೆಸಿದ್ದರು.

ಅತಿಯಾದ ಮಾಲಿನ್ಯದಿಂದ ಅಪಾಯ ಒಂದೆರಡಲ್ಲ !.. ಅಸಮರ್ಪಕ ಅಳತೆಯ ಜನನಾಂಗದೊಂದಿಗೆ ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ
ಮಾಲಿನ್ಯದ ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 28, 2021 | 2:27 PM

ಮಾಲಿನ್ಯದಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಗೊತ್ತೇ ಇದೆ. ಅಸ್ತಮಾದಿಂದ ಹಿಡಿದು ಕ್ಯಾನ್ಸರ್​​ವರೆಗಿನ ಮಾರಣಾಂತಿಕ ಕಾಯಿಲೆಗಳನ್ನು ಮಾಲಿನ್ಯ ಹೊತ್ತು ತರುತ್ತಿದೆ. ಆದರೆ ಪರಿಸರ ವಿಜ್ಞಾನಿಯೊಬ್ಬರು ಇದಕ್ಕೂ ಮೀರಿದ ಒಂದು ವಿಷಯವನ್ನು ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಿತಿಮೀರುತ್ತಿರುವ ಮಾಲಿನ್ಯದಿಂದಾಗಿ ಮನುಕುಲಕ್ಕೆ ಸಂತಾನೋತ್ಪತ್ತಿ ಸವಾಲಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ.

ನ್ಯೂಯಾರ್ಕ್​​ನ ಪರಿಸರ ವಿಜ್ಞಾನಿ ಶನ್ನಾ ಸ್ವಾನ್ ತಮ್ಮ ಕೌಂಟ್​ ಡೌನ್ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಹಲವು ವರ್ಷಗಳಿಂದ ಮಾಲಿನ್ಯ ಮಿತಿಮೀರುತ್ತಿದೆ. ಇದು ಮನುಷ್ಯರ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದಾಗಿ ಮಕ್ಕಳು ಹುಟ್ಟುವಾಗ ಇರಬೇಕಾದ ಅಳತೆಗಿಂತಲೂ ಸಣ್ಣದಾಗಿ ಅವರ ಜನನಾಂಗಗಳು ಇರುತ್ತಿವೆ. ಹೀಗೆ ಕುಗ್ಗಿದ ಅಳತೆಯ ಜನನಾಂಗದೊಂದಿಗೆ ಹುಟ್ಟುವ ಮಕ್ಕಳು ಮುಂದೆ ದೊಡ್ಡವರಾದಾಗ ಸಂತಾನೋತ್ಪತ್ತಿಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಯಾಕೆಂದರೆ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪರಿಸರದಲ್ಲಿ ಹಲವು ಕಾರಣದಿಂದ ಮಾಲಿನ್ಯ ಉಂಟಾಗುತ್ತಿದೆ. ಅದರಲ್ಲಿ ಮಾನವರ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುವುದು ಥಾಲೇಟ್​ ರಾಸಾಯನಿಕಗಳು. ಈ ಥಾಲೇಟ್​ಗಳನ್ನು ಪ್ಲಾಸ್ಟಿಕ್​ ತಯಾರಿಕೆ, ಮೃದು ಮಾಡುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ವಾತಾವರಣ ಸೇರಿ, ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಈ ಅಂಶಗಳು ಪರಿಸರದಲ್ಲಿ ಹೆಚ್ಚಾದಷ್ಟೂ ಮನುಷ್ಯರಿಗೆ ತೊಂದರೆ ತಪ್ಪಿದ್ದಲ್ಲ ಎನ್ನುತ್ತಾರೆ ಶನ್ನಾ ಸ್ವಾನ್​. ಈ ಥಾಲೇಟ್​ ರಾಸಾಯನಿಕಗಳು ಹಾರ್ಮೋನುಗಳನ್ನು ಉತ್ಪಾದಿಸುವ ಅಂತಃಸ್ರಾವಕಗಳ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ.

ಇತ್ತೀಚೆಗಂತೂ ಪುರುಷರಲ್ಲಿ ವೀರ್ಯ ಸಂಖ್ಯೆ ಕಡಿಮೆ ಇರುವುದು, ಮಹಿಳೆಯರ ಫಲವತ್ತತೆ ದುರ್ಬಲವಾಗಿರುವ ಪ್ರಕರಣಗಳು ತುಂಬ ಕಡಿಮೆ ಬರುತ್ತಿದೆ. ಹೀಗಾಗಲು ಪ್ರಮುಖವಾಗಿ ಕಾರಣಗಳು ಏನು ಎಂಬುದರ ಬಗ್ಗೆ ಶನ್ನಾ ಪರೀಕ್ಷೆಗಳನ್ನು ನಡೆಸಿದ್ದರು. ಥಾಲೇಟ್​ ರಾಸಾಯನಿಕ ಅಂಶಗಳಿಗೆ ಹೆಚ್ಚಾಗಿ ಒಗ್ಗಿಕೊಳ್ಳುವ ಭ್ರೂಣಗಳು, ಅಂದರೆ ತಾಯಿಯ ಹೊಟ್ಟೆಯಲ್ಲಿ ಇದ್ದಾಗಿನಿಂದಲೂ ಈ ರಾಸಾಯನಿಕಗಳ ಪರೋಕ್ಷ ಸಂಪರ್ಕಕ್ಕೆ ಸಿಗುತ್ತಿದ್ದ ಭ್ರೂಣಗಳು ಜನಿಸುವಾಗಲೇ ಸಣ್ಣ ಅಥವಾ ಸಂಕುಚಿತವಾದ ಜನನಾಂಗಗಳನ್ನು ಹೊಂದಿರುತ್ತವೆ ಎಂಬುದು ಗೊತ್ತಾಗಿದೆ ಎಂದು ಶನ್ನಾ ತಿಳಿಸಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ ಬಾಸ್​ ಚೈತ್ರಾ ಕೋಟೂರ್​! ಉದ್ಯಮಿ ಜೊತೆ ಸಿಂಪಲ್​ ವಿವಾಹ

ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ವಿಜಯ ಮಲ್ಯನೋ ಇಲ್ಲವೇ ನೀರವ್ ಮೋದಿಯೋ?; ವಿಪಕ್ಷ ನಾಯಕ ಸಿದ್ದರಾಮಯ್ಯ

Published On - 2:25 pm, Sun, 28 March 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ