ಮಧ್ಯಪ್ರದೇಶದಲ್ಲಿ ಪ್ರವಾಹ; ಮೊಂಡು ಧೈರ್ಯದಿಂದ ಉಕ್ಕಿ ಹರಿಯುವ ನದಿ ದಾಟುತ್ತಿರುವ ಜನರು

ಮಧ್ಯಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದರೂ ಜನರು ಯಾವುದೇ ಸುರಕ್ಷತೆಯಿಲ್ಲದೆ ಉಕ್ಕಿ ಹರಿಯುತ್ತಿರುವ ನದಿಯನ್ನು ದಾಟುತ್ತಿರುವ ದೃಶ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದ ಹಾರ್ದಾದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಜನರು ಉಕ್ಕಿ ಹರಿಯುತ್ತಿರುವ ನದಿಯ ಸೇತುವೆಯನ್ನು ದಾಟುತ್ತಿರುವ ಆಘಾತಕಾರಿ ವೀಡಿಯೊವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿರುವ ನಡುವೆ ಅಪಾಯಕಾರಿ ಸೇತುವೆ ದಾಟುವ ಬಗ್ಗೆ ಕಳವಳ ವ್ಯಕ್ತವಾಗಿದೆ.

ಮಧ್ಯಪ್ರದೇಶದಲ್ಲಿ ಪ್ರವಾಹ; ಮೊಂಡು ಧೈರ್ಯದಿಂದ ಉಕ್ಕಿ ಹರಿಯುವ ನದಿ ದಾಟುತ್ತಿರುವ ಜನರು
Madhya Pradesh Flood

Updated on: Jun 28, 2025 | 10:04 PM

ಭೂಪಾಲ್, ಜೂನ್ 28: ಮಧ್ಯಪ್ರದೇಶದ ಹಾರ್ದಾದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಜನರು ಉಕ್ಕಿ ಹರಿಯುತ್ತಿರುವ ನದಿಯ ಸೇತುವೆಯನ್ನು ದಾಟುತ್ತಿರುವ ಆಘಾತಕಾರಿ ವೀಡಿಯೊವೊಂದು ವೈರಲ್ ಆಗಿದೆ. ಅಪಾಯಕಾರಿಯಾಗಿ ಕಾಣುವ ಸ್ಥಳದಲ್ಲಿ ಜನರು ಸೇತುವೆಯ ಉದ್ದಕ್ಕೂ ನಡೆದುಕೊಂಡು ವಾಹನ ಚಲಾಯಿಸುವ ಮೂಲಕ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾರೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿರುವ ನಡುವೆ ಕಳವಳ ಉಂಟುಮಾಡಿದೆ.

ಮಧ್ಯಪ್ರದೇಶದಲ್ಲಿ ಮಳೆ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತಿದೆ. ಭಾರೀ ಮಳೆಯ ನಂತರ, ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕಿಂತ ಹೆಚ್ಚಾಗಿದೆ. ಹಲವಾರು ನದಿಗಳು ಮತ್ತು ಸೇತುವೆಗಳು ಉಕ್ಕಿ ಹರಿಯುತ್ತಿವೆ. ಹಾರ್ದಾದಿಂದ ಬಂದ ವೀಡಿಯೊವೊಂದು ಜನರು ಯಾವುದೇ ಭಯದವಿಲ್ಲದೆ ಉಕ್ಕಿ ಹರಿಯುವ ಸೇತುವೆ ಮೇಲೆ ನಡೆದು ಆಚೆ ದಡ ಸೇರುತ್ತಿರುವುದನ್ನು ತೋರಿಸಿದೆ. ಈ ವಿಡಿಯೋದಲ್ಲಿ ಜನರು ಎಚ್ಚರಿಕೆಯಿಂದ ಸೇತುವೆಯನ್ನು ಒಬ್ಬೊಬ್ಬರಾಗಿ ದಾಟುತ್ತಿರುವುದನ್ನು ಕಾಣಬಹುದು. ಇದರಲ್ಲಿ ಕೆಲವರು ನಡೆದುಕೊಂಡು ಹೋಗುತ್ತಿದ್ದರೆ, ಇನ್ನು ಕೆಲವರು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಸೇತುವೆಯ ಮೇಲೆ ವಾಹನ ಚಲಾಯಿಸುತ್ತಿರುವುದನ್ನು ಕಾಣಬಹುದು.


ಇದನ್ನೂ ಓದಿ: ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ

ಈ ವಿಡಿಯೋವನ್ನು ಪಿಟಿಐ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಮಧ್ಯಪ್ರದೇಶದ ಏಳು ಜಿಲ್ಲೆಗಳಾದ ನಿವಾರಿ, ಟಿಕಮ್‌ಗಢ, ಖಜುರಾಹೊ (ಛತರ್ಪುರ್), ದಮೋಹ್, ಕಟ್ನಿ, ಶಿವಪುರಿ ಮತ್ತು ಪನ್ನಾದಲ್ಲಿ ಇಂದು ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಪ್ರದೇಶಗಳಲ್ಲಿ ನಾಳೆ ಕೂಡ ಮಳೆಯ ಜೊತೆಗೆ ಮಿಂಚು ಸಹ ಬೀಳುವ ಸಾಧ್ಯತೆಯಿದೆ. ಗುಡುಗು ಸಹಿತ ಮಳೆಯಾಗುವ ಸಮಯದಲ್ಲಿ ತೆರೆದ ಹೊಲಗಳಲ್ಲಿ, ಮರಗಳ ಬಳಿ ಅಥವಾ ವಿದ್ಯುತ್ ಕಂಬಗಳ ಕೆಳಗೆ ಇರುವುದನ್ನು ತಪ್ಪಿಸಲು ಹವಾಮಾನ ಇಲಾಖೆ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ