ಬೇಡಿದ ವರಗಳ ದಯಪಾಲಿಸುತ್ತಿರುವ ಜಲ; ಕ್ಯೂ ನಿಂತ ಜನ, ಎಲ್ಲಿ ಗೊತ್ತಾ!? ನೋಡಿ

|

Updated on: Jan 24, 2024 | 2:48 PM

ಮರದಿಂದ ನೀರು ಹೇಗೆ ಬರುತ್ತದೆ, ಇಷ್ಟು ವರ್ಷದಿಂದ ಜರುಗದ ಈ ವಿಸ್ಮಯ ಈಗ ಎಲ್ಲಿಂದ ಬರುತ್ತಿದೆ... ಎಂದು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ದಿನದಂದು ಮುಂಜಾನೆಯೇ ಈ ಜಲಧಾರೆ ಕಾಣಿಸಿಕೊಂಡಾಗ ಅಭಿಯಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ

ನಿರ್ಮಲ್ ಜಿಲ್ಲೆಯ ಗ್ರಾಮಾಂತರ ಮಂಡಲದ ಲಂಗ್ಡಾಪುರ ಗ್ರಾಮದಲ್ಲಿ ದೊಡ್ಡ ಅರಳಿ ಮರದಿಂದ ನೀರು ಸುರಿಯುತ್ತಿದೆ. ಅದನ್ನು ವೀಕ್ಷಿಸಲು ಜನರು ದೇವಾಲಯದತ್ತ ದಾಪುಗಾಲು ಹಾಕುತ್ತಿದ್ದಾರೆ. ಅದೀಗ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿನ ನೀರನ್ನು ತೀರ್ಥವಾಗಿ ಸೇವಿಸಿದರೆ ಭಕ್ತಾದಿಗಳ ಇಚ್ಛೆ ನೆರವೇರುತ್ತದೆ ಎಂಬ ಪ್ರಚಾರದಿಂದ ಭಕ್ತರ ದಂಡು ಇತ್ತ ಹರಿದು ಬರುತ್ತಿದೆ. ಮರದ ಕೊಂಬೆಯಿಂದ ನೀರು ಹರಿಯುವುದನ್ನು ಕಂಡು ಅದು ದೇವರ ಲೀಲೆ ಎಂದು ಮರಕ್ಕೆ ಭಕ್ತರು ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಅರಳಿ ಮರದ ನೀರನ್ನು ಮಹಾ ತೀರ್ಥವೆಂದು ಭಾವಿಸಿ ಸೇವನೆ ಮಾಡುತ್ತಿದ್ದಾರೆ.

ಲಂಗ್ಡಾಪುರ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಅರಳಿ ಮರದಿಂದ ಆಕಸ್ಮಿಕವಾಗಿ ಹನಿ ಹನಿ ನೀರು ಬೀಳುತ್ತಿರುವುದನ್ನು ಭಕ್ತರು ಗಮನಿಸಿದರು. ಈ ಸುದ್ದಿ ಬಾಯಿಂದ ಬಾಯಿಗೆ ಹರಿದು ಭಾರೀ ಸಂಖ್ಯೆಯಯಲ್ಲಿ ಮಹಿಳೆಯರು ಮರದ ಕಡೆಗೆ ಓಡೋಡಿ ಬಂದಿದ್ದಾರೆ. ಇದು ಅಕ್ಕಪಕ್ಕದ ಗ್ರಾಮಗಳಿಗೂ ತಿಳಿಯಿತು, ಈ ವಿಚಿತ್ರ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ಮುಗಿಬಿದ್ದಿದ್ದು ಕಂಡುಬಂತು. ಅರಿಶಿನ ಕುಂಕುಮ ಹೂವು ತೆಂಗಿನಕಾಯಿಗಳಿಂದ ಮರಕ್ಕೆ ವಿಶೇಷ ಪೂಜೆ ಮಾಡಿದ್ದಾರೆ.

ಆದರೆ, ಹೀಗೆ ಮರದಿಂದ ನೀರು ಹೇಗೆ ಬರುತ್ತದೆ, ಇಷ್ಟು ವರ್ಷದಿಂದ ಜರುಗದ ಈ ವಿಸ್ಮಯ ಈಗ ಎಲ್ಲಿಂದ ಬರುತ್ತಿದೆ… ಎಂದು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ದಿನದಂದು ಮುಂಜಾನೆಯೇ ಈ ಜಲಧಾರೆ ಕಾಣಿಸಿಕೊಂಡಾಗ ಅಭಿಯಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು. ಆದರೆ, ಕೆಲವರು ಇದು ಕೇವಲ ಪ್ರಕೃತಿಯಲ್ಲಿನ ಬದಲಾವಣೆ. ಅದರಲ್ಲಿ ಯಾವುದೇ ಮಹಿಮೆಯಿಲ್ಲ ಎಂದು ನಂಬುತ್ತಾರೆ. ನಿಸರ್ಗ ಎಲ್ಲೆಲ್ಲೂ ವಿಸ್ಮಯಗಳನ್ನು ತೆರೆದಿಡುತ್ತದೆ.. ಕೆಲವೊಮ್ಮೆ ಅದು ನಮ್ಮ ಕಣ್ಣೆದುರು ಕಾಣಿಸಿಕೊಳ್ಳುತ್ತದೆ.