Ayodhya Ram Mandir: ರಾಮ ಮಂದಿರದಲ್ಲಿ ಭಕ್ತಸಾಗರ, ಅಯೋಧ್ಯೆಗೆ ಬಸ್ ಸೇವೆ ಸ್ಥಗಿತ
ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆದ ಮರುದಿನದಿಂದಲೇ ಭಕ್ತಸಾಗರ ಹರಿದುಬರುತ್ತಿದೆ. ಜನರನ್ನು ನಿಯಂತ್ರಿಸಲು 7 ಸಾವಿರ ಭದ್ರತಾ ಸಿಬ್ಬಂದಿಯಿಂದಲೂ ಸಾಧ್ಯವಾಗುತ್ತಿಲ್ಲ ಈ ದೃಷ್ಟಿಯಿಂದ ಅಯೋಧ್ಯೆಗೆ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಒಂದೇ ದಿನದಲ್ಲಿ 5 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಜನದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಲಕ್ನೋ ಹಾಗೂ ಅಯೋಧ್ಯೆ ನಡುವೆ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅಯೋಧ್ಯೆಯ ರಾಮ ಮಂದಿರ(Ram Mandir)ದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆದ ಮರುದಿನದಿಂದಲೇ ಭಕ್ತಸಾಗರ ಹರಿದುಬರುತ್ತಿದೆ. ಜನರನ್ನು ನಿಯಂತ್ರಿಸಲು 7 ಸಾವಿರ ಭದ್ರತಾ ಸಿಬ್ಬಂದಿಯಿಂದಲೂ ಸಾಧ್ಯವಾಗುತ್ತಿಲ್ಲ ಈ ದೃಷ್ಟಿಯಿಂದ ಅಯೋಧ್ಯೆಗೆ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಒಂದೇ ದಿನದಲ್ಲಿ 5 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಜನದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಲಕ್ನೋ ಹಾಗೂ ಅಯೋಧ್ಯೆ ನಡುವೆ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪರಿಸ್ಥಿತಿ ಸಹಜವಾಗುವವರೆಗೆ ಯಾವುದೇ ಬಸ್ಸುಗಳು ಈ ಮಾರ್ಗದಲ್ಲಿ ಓಡಾಡುವುದಿಲ್ಲ ಎಂದು ತಿಳಿಸಲಾಗಿದೆ. ಸುಮಾರು 5 ಲಕ್ಷ ಭಕ್ತರು ಮಂಗಳವಾರ ಚಳಿಯನ್ನೂ ಲೆಕ್ಕಿಸದೆ ಬೆಳಗಿನ ಜಾವ 3 ಗಂಟೆಯಿಂದಲೇ ದೇವಸ್ಥಾನದ ಗೇಟ್ ಬಳಿ ಕುಳಿತಿದ್ದರು.
ಇಂದು ಬೆಳಗ್ಗೆ ಅಯೋಧ್ಯೆಯಿಂದ ಬಂದ ದೃಶ್ಯಗಳಲ್ಲಿ ದೇವಾಲಯದ ಹೊರಗೆ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿರುವುದನ್ನು ಕಾಣಬಹುದು.ದೇವಸ್ಥಾನಕ್ಕೆ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.
ಮತ್ತಷ್ಟು ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಗರ್ಭಗುಡಿಯೊಳಗೆ ಬಂದ ಹನುಮಂತ
ಉತ್ತರ ಪ್ರದೇಶ ಪೊಲೀಸ್, ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್), ಮತ್ತು ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಯ ಸುಮಾರು 8,000 ಭದ್ರತಾ ಸಿಬ್ಬಂದಿಯನ್ನು ದೇವಸ್ಥಾನದಲ್ಲಿ ನಿಯೋಜಿಸಲಾಗಿದೆ.
ನಾವು ವೃದ್ಧರು ಮತ್ತು ದಿವ್ಯಾಂಗರಿಗೆ ಎರಡು ವಾರಗಳ ನಂತರ ಅವರ ಭೇಟಿಯನ್ನು ನಿಗದಿಪಡಿಸುವಂತೆ ಮನವಿ ಮಾಡುತ್ತೇವೆ. ದರ್ಶನಕ್ಕಾಗಿ ಆತುರಪಡುವ ಅಗತ್ಯವಿಲ್ಲ ಎಂದು ಜನರ ಬಳಿ ಮನವಿ ಮಾಡುತ್ತಿದ್ದೇನೆ. ಎಲ್ಲರಿಗೂ ರಾಮಲಲ್ಲಾನ ದರ್ಶನ ಭಾಗ್ಯ ಸಿಗಲಿದೆ ಅಯೋಧ್ಯೆಯ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಗರ್ಭಗುಡಿಯೊಳಗೆ ಬಂದ ಹನುಮಂತ ಮಂಗಳವಾರ ಸಂಜೆ, ರಾಮಲಲ್ಲಾನನ್ನು ನೋಡಲು ಹನುಮಾನ್ ಜಿ ಬಂದಿದ್ದಾನೆ ಎಂದು ಜನರು ಹೇಳುವ ಅದ್ಭುತ ಘಟನೆ ನಡೆಯಿತು. ಈ ಘಟನೆಗೆ ಸಂಬಂಧಿಸಿದ ಸಂದೇಶವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಸಂಜೆ 5.50 ರ ಸುಮಾರಿಗೆ ಕೋತಿಯೊಂದು ದಕ್ಷಿಣ ದ್ವಾರದ ಮೂಲಕ ಗರ್ಭಗುಡಿಯನ್ನು ಪ್ರವೇಶಿಸಿ ಉತ್ಸವ ಮೂರ್ತಿಯ ಬಳಿ ತಲುಪಿತು. ಇದನ್ನು ನೋಡಿದ ಹೊರಗೆ ಹಾಕಲಾಗಿದ್ದ ಭದ್ರತಾ ಸಿಬ್ಬಂದಿ, ಕೋತಿಯು ಉತ್ಸವ ಮೂರ್ತಿಯನ್ನು ನೆಲಕ್ಕೆ ಬೀಳಿಸಬಹುದೆಂದು ಭಾವಿಸಿ ಕೋತಿಯತ್ತ ಓಡಿದರು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ