ರಾಮ ಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ 13 ದೇವಾಲಯ

ರಾಮಮಂದಿರದಲ್ಲಿ ಬಾಲ ರಾಮ ಪ್ರತಿಷ್ಠಾಪನೆ ನಂತರ ರಾಮ ಪರಿವಾರದ ಐದು ಪ್ರಮುಖ ದೇವಾಲಯಗಳ ಕೆಲಸ ಇನ್ನೂ ಬಾಕಿ ಇದೆ. ಭಗವಾನ್ ರಾಮನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿರುವುದರಿಂದ, ಭಗವಾನ್ ಗಣಪತಿ, ಶಿವ, ಸೂರ್ಯ ಅಥವಾ ಸೂರ್ಯ ದೇವರು ಮತ್ತು ಜಗದಂಬಾ ದೇವಿಗೆ ಅರ್ಪಿತವಾದ ದೇವಾಲಯಗಳು ಇರಬೇಕು. ಮುಖ್ಯ ದೇವಾಲಯದ ನಾಲ್ಕು ಮೂಲೆಗಳಲ್ಲಿ ಈ ದೇವಾಲಯಗಳು ಇರುತ್ತವೆ

ರಾಮ ಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ 13 ದೇವಾಲಯ
ರಾಮಮಂದಿರ
Follow us
ರಶ್ಮಿ ಕಲ್ಲಕಟ್ಟ
|

Updated on: Jan 24, 2024 | 1:17 PM

ದೆಹಲಿ ಜನವರಿ 24: ಅಯೋಧ್ಯೆಯನ್ನು (Ayodhaya) ಜಾಗತಿಕ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿ (Global spiritual tourist hub) ಮಾಡಲು ವಿಸ್ತಾರವಾದ ಯೋಜನೆಗಳು ಜಾರಿಯಲ್ಲಿವೆ. ಇದು ಕನಿಷ್ಟ 13 ಹೊಸ ದೇವಾಲಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ, ಅವುಗಳಲ್ಲಿ ಆರು ಬೃಹತ್ ದೇವಾಲಯದ ಸಂಕೀರ್ಣದ ಒಳಗೆ ಮತ್ತು ಏಳು ಹೊರಗೆ ಇರುತ್ತವೆ. ಯೋಜನೆಯ ಕುರಿತು ವಿವರಿಸಿದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Ram Janambhoomi Teerth Kshetra Trust )ಖಜಾಂಚಿ ಸ್ವಾಮಿ ಗುರುದೇವ್ ಗಿರಿಜಿ, ಮುಖ್ಯ ದೇವಾಲಯವನ್ನು ಪೂರ್ಣಗೊಳಿಸುವ ಕೆಲಸ ಸೇರಿದಂತೆ ಎಲ್ಲಾ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಎನ್‌ಡಿಟಿವಿಗೆ ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಮಾರಂಭದಲ್ಲಿ ಉದ್ಘಾಟನೆಯಾದ ಮುಖ್ಯ ದೇವಾಲಯವು ಅದರ ಮೊದಲ ಮಹಡಿಯನ್ನು ಮಾತ್ರ ಹೊಂದಿದೆ. ಎರಡನೇ ಮಹಡಿಯಲ್ಲಿ ಕೆಲಸ ಪ್ರಗತಿಯಲ್ಲಿದೆ, ಅದರ ನಂತರ ಶಿಖರ್ (ಪ್ರಧಾನ ಗುಮ್ಮಟ) ಮಾಡಬೇಕಾಗಿದೆ ಎಂದು ಗುರುದೇವ್ ಗಿರಿಜಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ರಾಮ ಪರಿವಾರದ ಐದು ಪ್ರಮುಖ ದೇವಾಲಯಗಳ ಕೆಲಸ ಇನ್ನೂ ಬಾಕಿ ಇದೆ. ಭಗವಾನ್ ರಾಮನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿರುವುದರಿಂದ, ಭಗವಾನ್ ಗಣಪತಿ, ಶಿವ, ಸೂರ್ಯ ಅಥವಾ ಸೂರ್ಯ ದೇವರು ಮತ್ತು ಜಗದಂಬಾ ದೇವಿಗೆ ಅರ್ಪಿತವಾದ ದೇವಾಲಯಗಳು ಇರಬೇಕು. ಮುಖ್ಯ ದೇವಾಲಯದ ನಾಲ್ಕು ಮೂಲೆಗಳಲ್ಲಿ ಈ ದೇವಾಲಯಗಳು ಇರುತ್ತವೆ. ರಾಮನ ಅತಿ ದೊಡ್ಡ ಭಕ್ತ ಹನುಮಂತನಿಗೆ ಮೀಸಲಾದ ಪ್ರತ್ಯೇಕ ದೇವಾಲಯವೂ ಇರುತ್ತದೆ.

ಈಗಾಗಲೇ ಈ ದೇವಾಲಯಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಪಾಲಿಶ್ ಮಾಡುವ ಕೆಲಸವಿದ್ದು, ಅಂತಿಮ ಸ್ಪರ್ಶವನ್ನೂ ನೀಡಬೇಕಿದೆ. ಸೀತಾ ರಸೋಯಿ ಬಳಿ, ಸೀತಾ ದೇವಿಯ ಅಡುಗೆಮನೆ ಎಂದು ಪರಿಗಣಿಸಲಾದ ಸ್ಥಳವು ಅನ್ನಪೂರ್ಣ ದೇವಿಗೆ ಸಮರ್ಪಿತವಾದ ದೇವಾಲಯವಿರುತ್ತದೆ.

ದೇವಾಲಯದ ಸಂಕೀರ್ಣದ ಹೊರಗೆ, ಬೃಹತ್ ಪ್ರದೇಶದಲ್ಲಿ ಏಳು ದೇವಾಲಯಗಳು ಇರುತ್ತವೆ. ಇವುಗಳನ್ನು ರಾಮನ ಜೀವನದಲ್ಲಿನ ಜನರಿಗೆ ಸಮರ್ಪಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಗರ್ಭಗುಡಿಯೊಳಗೆ ಬಂದ ಹನುಮಂತ

ಇವು ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ದೇವಿ ಶಬರಿ ಮತ್ತು ರಾಮನಿಗಾಗಿ ತನ್ನ ಪ್ರಾಣವನ್ನು ಅರ್ಪಿಸಿದ ಬೃಹತ್ ಪಕ್ಷಿ ಜಟಾಯುಗೆ ಇರುವ ದೇವಾಲಯಗಳಾಗಿವೆ ಎಂದು ಅವರು ಹೇಳಿದ್ದಾರೆ.

ರಾಮ ಮಂದಿರವು ಮಂಗಳವಾರ ಸಾರ್ವಜನಿಕರಿಗೆ ಬಾಗಿಲುಗಳನ್ನು ತೆರೆದಿದೆ. ಲಕ್ಷಾಂತರ ಭಕ್ತರು ನಡುಗುವ ಚಳಿಯಲ್ಲಿಯೂ ದೇವರ ದರ್ಶನಕ್ಕಾಗಿ ಬಂದಿದ್ದರು. ಸುಮಾರು 3 ಲಕ್ಷ ಭಕ್ತರು ಸೋಮವಾರ ಬಾಲರಾಮನಿಗೆ ಪ್ರಾರ್ಥನೆ ಸಲ್ಲಿಸಿದರು ಎಂದು ಹೆಸರಿಸದ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಬಾಲರಾಮರ “ಪ್ರಾಣ ಪ್ರತಿಷ್ಠಾ” ಸೋಮವಾರ ನಡೆದಿದ್ದು, ದೇಶಾದ್ಯಂತ ಸಂಭ್ರಮಾಚರಣೆಗಳೂ ನಡೆದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ